ಯೋಗ ಧರ್ಮಕ್ಕೆ ಸೀಮತವೇ? ಹೌದು ಎನ್ನುತ್ತಾರೆ ಕ್ಯಾಲಿಫ್ ವಕೀಲ
ಕ್ಯಾಲಿಫೋರ್ನಿಯಾ, ಮಾ.10: ಯೋಗಾಭ್ಯಾಸ ಒಂದು ಧರ್ಮಕ್ಕೆ ಮಾತ್ರ ಸೀಮತವೇ? ಹೌದು ಎನ್ನುತ್ತದೆ ಕ್ಯಾಲಿಫೋರ್ನಿಯಾದಲ್ಲಿ ಕೆಲವು ಮಂದಿ. ಶಾಲಾ ಪಠ್ಯಕ್ರಮದಿಂದ ಯೋಗವನ್ನು ರದ್ದುಗೊಳಿಸಬೇಕು ಎಂದು ಕೋರಿ ಪೋಷಕರ ಗುಂಪೊಂದು ನ್ಯಾಯಾಲಯದ ಮೆಟ್ಟಿಲೇರಿದೆ.
ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ಪ್ರಕಾರ ಯೋಗ ಕಾರ್ಯಕ್ರಮ ನ್ಯಾಯ ಬಾಹಿರವಾಗಿದೆ, ಧಾರ್ಮಿಕ ನಂಬಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳ ಪೋಷಕರ ಪರವಾಗಿ ನೇಷನಲ್ ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ಡೀಗೋ ಸುಪೀರಿಯರ್ ಕೋರ್ಟ್ ನಲ್ಲಿ ಎಸ್ಕಂಡಿಡೋ ಅಟರ್ನಿ ಡೀನ್ ಬ್ರೊಯ್ಲೆ ಅವರು ದಾವೆ ಹೂಡಿದ್ದಾರೆ. Encinitas Union School District (EUSD) ನ ಅಷ್ಟಾಂಗ ಯೋಗ ಕಾರ್ಯಕ್ರಮವನ್ನು ರದ್ದು ಮಾಡಿ ಸಾಂಪ್ರದಾಯಿಕ ದೈಹಿಕ ಶಿಕ್ಷಣವನ್ನು ಪುನರಾಂಭಿಸುವಂತೆ ಕೋರಲಾಗಿದೆ.

ಪೋಷಕರ ದಾವೆಯನ್ನು ಬೆಂಬಲಿಸಿರುವ ಹಾರ್ವಡ್ ನ ಎಜುಕೇಟೆಡ್ ರಿಲಿಜಿಯಸ್ ಸ್ಟಡೀಸ್ ನ ಪ್ರೊ. ಕ್ಯಾಂಡಿ ಗುಂತರ್ ಬ್ರೌನ್, 'ಅಷ್ಟಾಂಗ ಯೋಗ ಒಂದು ಧಾರ್ಮಿಕ ಭಾವನೆ ಬೆಳೆಸುವ ಕಸರತ್ತು. ಹಿಂದೂ, ಬೌದ್ಧ ಹಾಗೂ ಆಧ್ಯಾತ್ಮಿಕ ಸೈದ್ಧಾಂತಿಕ ಧಾರ್ಮಿಕ ನಂಬಿಕೆಗಳು ಬಲವಾಗಿ ಬೇರೂರಿದೆ' ಎಂದಿದ್ದಾರೆ. ಧಾರ್ಮಿಕ ತಾರತಮ್ಯಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಅವಕಾಶವಿಲ್ಲ. ಯೋಗ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಧಾರ್ಮಿಕ ಕಾಯ್ದೆ ಉಲ್ಲಂಘನೆಯಾಗಲಿದೆ ಎಂದು ವಾದಿಸಲಾಗಿದೆ.
ಕೆಪಿ ಯೋಯ್ಸ್ ಪ್ರತಿಷ್ಠಾನದಿಂದ 537,720 ಯುಎಸ್ ಡಾಲರ್ ಅನುದಾನ ಪಡೆದ ನಂತರ ಇಯುಎಸ್ ಡಿ ತನ್ನ ಶಾಲೆಗಳಲ್ಲಿ ಯೋಗ ಕಾರ್ಯಕ್ರಮಕ್ಕೆ ಅನುಮತಿ ನೀಡಿತ್ತು. ಯೋಗಕ್ಕೆ ವಿಶ್ವ ಮಾನ್ಯತೆಯಿದೆ. ದೈಹಿಕ ಚಟುವಟಿಕೆ ಹಾಗೂ ಆರೋಗ್ಯ ವರ್ಧನೆಗೆ ಇದು ಸಹಕಾರಿ ಎಂದು ಇಯುಎಸ್ ಡಿ ಸೂಪರಿಂಟೆಂಡೆಂಟ್ ಡಾ. ತಿಮೋತಿ ಬೈರ್ಡ್ ಪ್ರತಿ ವಾದಿಸಿದ್ದಾರೆ. ಯಾವುದೇ ನಿರ್ದಿಷ್ಟ ಧರ್ಮ, ಬ್ರ್ಯಾಂಡ್ ಗಳನ್ನು ಪ್ರೋತ್ಸಾಹಿಸಲು ಯೋಗವನ್ನು ಶಾಲೆಗಳಲ್ಲಿ ಅಳವಡಿಸುತ್ತಿಲ್ಲ ಎಂದು ಜೋಯ್ಸ್ ಪ್ರತಿಷ್ಠಾನದ ಸಿಇಒ ಯುಗಿನಿ ರಫೀನ್ ಸ್ಪಷ್ಟಪಡಿಸಿದ್ದಾರೆ.
ಯೋಗಕ್ಕೆ ವಿರೋಧ ಇದೇ ಮೊದಲಲ್ಲ: ಯೋಗಾಭ್ಯಾಸ ಅಮೆರಿಕದ ಮನೆ ಮನೆಗಳನ್ನು ತಲುಪಿದ್ದರೂ ಇನ್ನೂ ಅನೇಕ ಕಡೆ ಯೋಗಾಭ್ಯಾಸ ಬಗ್ಗೆ ಕುತೂಹೂಲ, ಸಂಶಯ, ಅಪನಂಬಿಕೆ ಇದ್ದೇ ಇದೆ. 2002ರಲ್ಲಿ ತಾರಾ ಗುಬೇರ್ ತಮ್ಮ ಸ್ಥಳೀಯ ಶಾಲೆಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಪರಿಚಯಿಸಿದಾಗ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ, ಮೂಲ ಸಂಸ್ಕೃತ ಶ್ಲೋಕಗಳನ್ನು ಬದಲಾಯಿಸಿ ಬಾಲ ವಿದ್ಯಾರ್ಥಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಯೋಗವನ್ನು ಸಮರ್ಥವಾಗಿ ಅಳವಡಿಸಲಾಯಿತು.
ಓಕ್ಲಾಹೋಮದಲಿ ಲಾರೆಟ್ ವಿಲಿಸ್ 'ಕ್ರಿಶ್ಚಿಯನ್ ಆಲ್ಟರೇನೇಟಿವ್ ಟು ಯೋಗ' ಎಂಬ ಸಿದ್ಧಾಂತ ಪ್ರತಿಪಾದಿಸಿದರು. ಬುದ್ಧಿ ವಿಕಸನ, ವ್ಯಕ್ತಿತ್ವ ವಿಕಸನ ಉಕ್ತಿಗಳನ್ನು ಬಳಸಿಕೊಂಡು ಯೋಗವನ್ನು ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಂಡು ಯೋಗದಂತೆ ಕಸರತ್ತುಗಳನ್ನು ಜನಪ್ರಿಯಗೊಳಿಸಿದರು.
ದಾವೆದಾರರ ಪ್ರಕಾರ ಯೋಗವನ್ನು ಸರ್ಕಾರ ಪ್ರಚಾರ ಮಾಡಿ ಅಳವಡಿಸುವ ಅವಶ್ಯಕತೆ ಇಲ್ಲ. ಇದರಿಂದ ಧಾರ್ಮಿಕ ಸಮಾನತೆ ಹಾಳಾಗುತ್ತದೆ. ಯೋಗಾಭ್ಯಾಸ ನಿರತ ಮೇಲೆ ನಮಗೇನು ದ್ವೇಷವಿಲ್ಲ ಎಂದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications