ಮೋದಿ ಜೊತೆ ಸ್ನೇಹ - ಅಂಬಾನಿಗೆ ಉಗ್ರರ ಬೆದರಿಕೆ

ಅಂಬಾನಿ ಅವರ ಮಾಕರ್ ಛೇಂಬರ್ಸ್ ಕಛೇರಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಲೆಟರ್ ಹೆಡ್ ನಲ್ಲಿ ಇಂಗ್ಲಿಷ್ ನಲ್ಲಿ ಕೈಬರಹವರುವ ಬೆದರಿಕೆ ಪತ್ರ ತಲುಪಿದೆ. ಗುಜರಾತ್ ನಲ್ಲಿ ಉದ್ಯಮಗಳನ್ನು ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜೊತೆಗೆ ಯಾವುದೇ ಉದ್ಯಮ ಸ್ಥಾಪಿಸುವ ಒಪ್ಪಂದಗಳಿಗೆ ಸಹಿ ಮಾಡಬಾರದು ಎಂದು ಪತ್ರದಲ್ಲಿ ಅಂಬಾನಿ ಅವರಿಗೆ ಸೂಚಿಸಲಾಗಿದೆ.
ಇತ್ತೀಚೆಗೆ ಗುಜರಾತ್ ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಂಬಾನಿ ನರೇಂದ್ರ ಮೋದಿಯವರನ್ನು ಅಭಿವೃದ್ಧಿಯ ಹರಿಕಾರ ಎಂದು ಹೊಗಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇಂಡಿಯನ್ ಮುಜಾಹಿದ್ದೀನ್, ಮೋದಿ ಜೊತೆಗೆ ಸ್ನೇಹಸಂಬಂಧ ಬೆಳೆಸಬಾರದು ಎಂದು ಅಂಬಾನಿಗೆ ತಾಕೀತು ಮಾಡಿದೆ.
ತಮ್ಮ ಆದೇಶ ಉಲ್ಲಂಘಿಸಿ ಗುಜರಾತ್ ನಲ್ಲಿ ಉದ್ಯಮ ಸ್ಥಾಪನೆಗೆ ಮುಂದಾದರೆ, ತಮ್ಮ 27 ಅಂತಸ್ತಿನ ಐಷಾರಾಮಿ ಆಂಟಿಲಾದ ಬಂಗಲೆ ಮೇಲೆ ದಾಳಿ ಮಾಡುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. ಈ ಪತ್ರಕ್ಕೆ ಪುಷ್ಠಿ ನೀಡುವಂತೆ ಅಂಬಾನಿಯವರ ಆಂಟಿಲಾ ನಿವಾಸದ ಮುಂದೆ ಕಳೆದ ಮೂರು ದಿನಗಳಿಂದ ಕಾರೊಂದು ಅನುಮಾಸ್ಪದವಾಗಿ ಓಡಾಡುತ್ತಿರುವ ಬಗ್ಗೆಯೂ ಮನೆಯ ಭದ್ರತಾ ಸಿಬ್ಬಂದಿ ಮಾಹಿತಿ ಕೆಲೆ ಹಾಕಿದ್ದಾರೆ.
ವಿಶ್ವದ 18ನೇ ಶ್ರೀಮಂತ ಮುಖೇಶ್ ಅಂಬಾನಿ ಪತ್ರವನ್ನು ಮುಂಬಯಿ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿ ಸೂಕ್ತ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಪತ್ರವನ್ನು ಪಡೆದಿರುವ ಮುಂಬಯಿ ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ. ಮತ್ತೊಂದು ಕಡೆ ಗುಜರಾಜ್ ಪೊಲೀಸರಿಗೂ ಈ ಮಾಹಿತಿ ನೀಡಲಾಗಿದ್ದು, ಗುಜರಾತ್ ನಲ್ಲಿಯ ಯಾರಾದರೂ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಉಗ್ರ ಅನ್ಸಾರಿ ಮೇಲೆ ಶಂಕೆ : ರಿಯಾಜ್ ಭಟ್ಕಳ್ ಮುಂತಾದ ಉಗ್ರಗಾಮಿಗಳಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಉಗ್ರ ಡ್ಯಾನೀಶ್ ಅನ್ಸಾರಿ ಅಂಬಾನಿಗೆ ಬೆದರಿಕೆ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಕಿಸ್ತಾನದಲ್ಲಿದ್ದ ಈತ ಇತ್ತೀಚೆಗೆ ಭಾರತಕ್ಕೆ ಮರಳಿದ್ದಾನೆ. ತನಿಖೆ ಮುಂದುವರೆಸಿರುವ ಪೊಲೀಸರು ಅಂಬಾನಿ ಮನೆಯ ಸಿಸಿಟಿವಿ ದೃಶ್ಯಗಳನ್ನು ಪಡೆದಿದ್ದಾರೆ.


Click it and Unblock the Notifications
