ಕೇಂದ್ರ ಬಜೆಟ್ - ಬೆಂಗಳೂರಿಗೆ ದೊರಕಿದ್ದೇನು?

The Finance Minister P. Chidambaram p
ಬೆಂಗಳೂರು, ಫೆ.28 : ಹಣಕಾಸು ಸಚಿವರಾಗಿ ತಮ್ಮ 8ನೇ ಬಜೆಟ್ ಮಂಡಿಸಿದ ಪಿ.ಚಿದಂಬರಂ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಹಣಕಾಸು ನೆರವು ಘೋಷಿಸಿದ್ದಾರೆ. ನಗರಗಳ ಅಭಿವೃದ್ಧಿಗಾಗಿ ಕೆಲವು ನೂತನ ಯೋಜನೆಗಳನ್ನು ಚಿದಂಬರಂ ಪ್ರಕಟಿಸಿದ್ದಾರೆ. ಬಜೆಟ್ ನಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಗೆ ದೊರಕಿದ್ದೇನು ತಿಳಿಯೋಣ ಬನ್ನಿ...

ತಮ್ಮ ಬಜೆಟ್ ನಲ್ಲಿ ಪಿ.ಚಿದಂಬರಂ ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಜಪಾನ್ ದೇಶದ ಸಹಯೋಗದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. 2011ರಲ್ಲೇ ಈ ಯೋಜನೆ ಬಗ್ಗೆ ಪ್ರಸ್ತಾಪವಿತ್ತು. ಸದ್ಯ ಜಪಾನ್ ಕಂಪನಿ ಯೋಜನೆಗೆ ಬಂಡವಾಳ ಹೂಡಲು ಸಿದ್ಧವಾಗಿದೆ.

ಬೆಂಗಳೂರು - ಮುಂಬೈ ಕಾರಿಡಾರ್ ಯೋಜನೆಗೆ ಅನುಮತಿಯನ್ನು ವಿತ್ತ ಸಚಿವರು ನೀಡಿದ್ದಾರೆ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಮತ್ತು ಮಹಾರಾಷ್ಟ್ರದ ಮೂಲಕ ಈ ಕಾರಿಡಾರ್ ಯೋಜನೆ ಹಾದುಹೋಗಲಿದೆ.

ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ 5 ಸಾವಿರ ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮೊದಲ ಹಂತದ ಯೋಜನೆ ಜಾರಿಗೊಳಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಸುಮಾರು 550 ಕಿ.ಮೀ ಉದ್ದದ ರಸ್ತೆ ಮತ್ತು 330 ಕಿ.ಮೀ ಉದ್ದದ ರೈಲು ಮಾರ್ಗಗಳು ಈ ಕಾರಿಡಾರ್ ಯೋಜನೆಯಿಂದ ಅಭಿವೃದ್ಧಿಗೊಳ್ಳಲಿವೆ.

ಇನ್ನು ಬೆಂಗಳೂರಿನಲ್ಲಿ ಜವಾಹರಲಾಲ್ ನಗರ ಪುನರುಜ್ಜೀವನ ಯೋಜನೆ (ನರ್ಮ್) ಜಾರಿಯಲ್ಲಿದೆ. ಪ್ರಸ್ತುತ ಬಜೆಟ್ ನಲ್ಲಿ ನರ್ಮ್ ಯೋಜನಗೆ 53,871 ಕೋಟಿ ರು. ಅನುದಾನ ನೀಡಲಾಗಿದೆ. ಅಲ್ಲದೆ ಯೋಜನೆಗೆ 10 ಸಾವಿರ ಬಸ್ ಗಳನ್ನು ನೀಡಲಾಗಿದೆ. ಇದರಿಂದ ನಗರ ಸಾರಿಗೆಗೆ ಹಾಗೂ ಬೆಂಗಳೂರಿನ ಅಭಿವೃದ್ಧಿಗೂ ಹಣಕಾಸು ನೆರವು ದೊರೆಯಲಿದೆ.

ಕಸದಿಂದ ವಿದ್ಯುತ್ ಉತ್ಪಾದಿಸುವ ಮಹಾನಗರ ಪಾಲಿಕೆಗಳಿಗೆ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾಟರ್ನರ್ ಶಿಪ್) ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಇದರಿಂದ ನಗರದ ಕಸದ ಸಮಸ್ಯೆಗೆ ಪರಿಹಾರ ದೊರೆಯುವ ಅವಕಾಶಗಳಿವೆ. (ಬಜೆಟ್ ಮುಂಖ್ಯಾಶಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+