ಮುಳಬಾಗಿಲು ಶಾಸಕ ಅಮರೇಶ್ ಬಂಧನ

ಕಾಂಗ್ರೆಸ್ ಶಾಸಕ 47 ವರ್ಷದ ಅಮರೇಶ್ ಅವರು 2006ರಲ್ಲಿ ಆಸ್ತಿ ಪರಭಾರೆ ಸಂದರ್ಭದಲ್ಲಿ ದಾಖಲೆ ಪತ್ರಗಳಿಗೆ ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದರು. ಮುಳಬಾಗಿಲು ಮ್ಯಾಜಿಸ್ಟ್ರೇಟ್ (ಸಿವಿಲ್) ನ್ಯಾಯಾಧೀಶರು ಶಾಸಕರ ಬಂಧನಕ್ಕೆ ಆದೇಶ ಹೊರಡಿಸಿದ್ದರು.
ಮುಳಬಾಗಿಲು ತಾಲೂಕು ಬೈರಕೂರು ಗ್ರಾಮದ ಬಳಿ 3.16 ಎಕರೆ ಕೃಷಿ ಭೂಮಿಯ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಶಾಸಕ ಅಮರೇಶ್ ಮೇಲಿದೆ.
ತಾಜಾ ಸುದ್ದಿ: 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಮರೇಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ಮುಳಬಾಗಿಲು ಕೋರ್ಟ್, ಜಾಮೀನು ಮಂಜೂರು ಮಾಡಿದೆ. ಇದರಿಂದ ಅಮರೇಶ್ ಸದ್ಯಕ್ಕೆ ಬಂಧ ಮುಕ್ತರಾಗಿದ್ದಾರೆ.












Click it and Unblock the Notifications