ರೈಲ್ವೆ ಪ್ರಯಾಣ ದರ ಏರಿಕೆ ಇಲ್ಲ, ಸಾಗಣೆ ಹೆಚ್ಚಳ

ಇದೀಗ ಕಾಂಗ್ರೆಸ್ ಪಕ್ಷದ ಪವನ್ ಕುಮಾರ್ ಬನ್ಸಲ್ ಅವರೇ ರೈಲ್ವೆ ಸಚಿವರಾಗಿದ್ದು ತಮ್ಮ ಮೊದಲ ಬಜೆಟ್ ಮಂಡಿಸಿದ್ದಾರೆ. ಅಂದಹಾಗೆ, ನಾಲ್ಕು ತಿಂಗಳ ಹಿಂದಷ್ಟೇ ಅವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದಾರೆ.
ಕಳೆದ ಸಾಲಿನಲ್ಲಿ 24,000 ಕೋಟಿ ರೂ. ನಷ್ಟದ ಅಂದಾಜಿನೊಂದಿಗೆ ಇಲಾಖೆಗೆ ಮುಂದಿನ 4 ವರ್ಷಗಳಲ್ಲಿ 95,000 ಕೋಟಿ ರೂ. ಆದಾಯದ ಅಗತ್ಯವಿದೆ. ಆದರೆ ಅವರು ಪ್ರಯಾಣ ದರ ಹೆಚ್ಚಿಸುವ ಧೈರ್ಯ ಮಾಡಿಲ್ಲ. ಕಳೆದ ಜನವರಿ ತಿಂಗಳಲ್ಲಿ ರೈಲು ಪ್ರಯಾಣ ದರ ಏರಿಸಲಾಗಿದೆ.
ಕೆಲ ರಾಜ್ಯಗಳು ಚುನಾವಣೆ ಎದುರಿಸುವುದರಿಂದ ಪ್ರಯಾಣಿಕರ (ಮತದಾರನ) ಮೇಲೆ ಹೆಚ್ಚಿನ ಹೊರೆ ಹಾಕದೆ ಜನಪ್ರಿಯ ಬಜೆಟ್ ಮಂಡನೆಯಾಗಿದೆ. ಇದರಿಂದ ಸುಧಾರಣೆಗೆ ಮುಂದಾಗುವ ಛಾತಿ ತೋರಿಲ್ಲ.
ಗಮನಾರ್ಹವೆಂದರೆ 'ಇಂಧನ ದರ ಏರಿಕೆ ಅನುಗುಣವಾಗಿ ಸಾಗಣೆ ದರ ಹೆಚ್ಚಳ' ಎಂಬ ನೀತಿ ಏಪ್ರಿಲ್ 1ರಿಂದ ಜಾರಿ. ಡೀಸೆಲ್ ಬೆಲೆ ನಿರ್ಣಯ ನಿಯಂತ್ರಣ-ಮುಕ್ತ ಹಾಗೂ ವಿದ್ಯುತ್ ದರ ಏರಿಕೆಯ ಕಾರಣದಿಂದಾಗಿ ಇಲಾಖೆಗೆ 2013-14ರಲ್ಲಿ 5100 ಕೋಟಿ ರೂ. ಹೊರೆ ಬಿದ್ದಿದೆ. ಆದರೂ ...
* ಪ್ರಯಾಣ ದರ ಏರಿಕೆ ಇಲ್ಲ, 750 ಕೋಟಿ ರು ನಷ್ಟ ಇಲಾಖೆಯೇ ಭರಿಸಲಿದೆ
*2013-14ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 5.2ರಷ್ಟು ಏರಿಕೆ ನಿರೀಕ್ಷೆ
* ಸಾಗಣೆ ದರ ತುಸು ಹೆಚ್ಚಳ. ಸರಾಸರಿ ಶೇ 5 ರಷ್ಟು ಹೆಚ್ಚಳ
* ಇದರಿಂದ ಇಲಾಖೆಗೆ ಆದಾಯ ಏರಿಕೆ ಶೇ. 9ರಷ್ಟು ಹೆಚ್ಚಾಗಿ 93,554 ಕೋಟಿ ರೂ ಆದಾಯ ಬರುವ ಅಂದಾಜಿದೆ.
* ಸೂಪರ್ ಫಾಸ್ಟ್ ಟ್ರೈನ್ ಪ್ರಯಾಣ ದರ ಏರಿಕೆ
* ಮುಂಗಡ ಕಾಯ್ದಿರಿಸುವ ಮತ್ತು ಕಾಯ್ದಿರಿಸಿದ ಟಿಕೆಟ್ ರದ್ದುಪಡಿಸುವ ಶುಲ್ಕಗಳ ಹೆಚ್ಚಳ
* ತತ್ಕಾಲ್ ಶುಲ್ಕ ಏರಿಕೆ.
ರೈಲ್ವೆ ಮುಂಗಡ ಪತ್ರ : ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications