ರೈಲ್ವೆಯಲ್ಲಿ ಇಂಟರ್ ನೆಟ್ ಸುಧಾರಣೆಗೆ ಕೊನೆಗೂ ಮಣೆ

ನವದೆಹಲಿ, ಫೆ. 26: ಕಾಂಗ್ರೆಸ್‌ ಸಚಿವ ಪವನ್‌ ಕುಮಾರ್‌ ಬನ್ಸಲ್‌ ಅವರು ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ ಮಂಡಿಸಿದ್ದಾರೆ. ಜನಪ್ರಿಯ ಬಜೆಟ್ ಗೆ ಮರುಳಾಗಿರುವ ಬನ್ಸಾಲ್ ಹೊಸತನ/ ಪ್ರಗತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿಲ್ಲ. ಆದರೆ ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಭಾರತೀಯ ರೈಲ್ವೆ ಹಿಂದೆ ಬೀಳಬಾರದು ಎಂಬುದನ್ನು ಅರಿತಿರುವ ಸಚಿವರು ಅಂತರ್ಜಾಲ ಮತ್ತು ಮೊಬೈಲ್ ಮೂಲಕ ಟಿಕೆಟ್ ಬುಕಿಂಗ್ ವ್ಯವಸ್ಥೆಗೆ ಪ್ರಾಶಸ್ಯ್ತನೀಡಿದ್ದಾರೆ.

ಮುಖ್ಯವಾಗಿ ಪ್ರಯಾಣಿಕರು ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು (https://irctc.co.in/) ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಆದರೆ ಇದರ ಸಾಮರ್ಥ್ಯ ಕಡಿಮೆಯಿದ್ದು, ಕ್ಷಿಪ್ರ ವೇಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

rwly-budget-2013-e-ticketing-irctc-website-be-revamped
ಆದ್ದರಿಂದ ಟಿಕೆಟ್ ಕಾಯ್ದಿರಿಸಲು ವೆಬ್‌ಸೈಟ್ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ಸಚಿವರು ಘೋಷಿಸಿದ್ದಾರೆ. ಜತೆಗೆ, ಮೊಬೈಲ್ ಫೋನ್‌ ಮೂಲಕವೂ ಟಿಕೆಟ್ ಕಾಯ್ದಿರಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್ ಮಂಡಿಸಿದ ಸಚಿವ ಪಿಕೆ ಬನ್ಸಾಲ್ ಹೇಳಿದ್ದಾರೆ.

ವರ್ಷಾಂತ್ಯದ ವೇಳೆಗೆ ನಿಮಿಷಕ್ಕೆ ಲಕ್ಷ ಮಂದಿ ವಿಚಾರಿಸಬಹುದು: ಸದ್ಯಕ್ಕೆ ನಿಮಿಷಕ್ಕೆ 2,000 ಟಿಕೆಟ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯ ಹೊಂದಿರುವ ಈ ವ್ಯವಸ್ಥೆಯನ್ನು, ನಿಮಿಷಕ್ಕೆ 7,200 ಟಿಕೆಟ್ ಕಾಯ್ದಿರಿಸುವಂತೆ ಮೇಲ್ದರ್ಜೆಗೆ ಏರಿಸಲಾಗುತ್ತದೆ.

ಅದೇ ರೀತಿ ಪ್ರಸ್ತುತ, ಒಂದು ನಿಮಿಷಕ್ಕೆ 40,000 ಮಂದಿ ಮಾತ್ರ Indian Railway Catering and Tourism Corporation Limited ವೆಬ್‌ ಸೈಟ್ ಗೆ ಭೇಟಿ ನೀಡಬಹುದಾಗಿದೆ. ಇದರ ಸಾಮರ್ಥ್ಯವನ್ನೂ ಹೆಚ್ಚಿಸಿ, ಏಕಕಾಲದಲ್ಲಿ 1,20,000 ಮಂದಿ ಭೇಟಿ ನೀಡಿದರೂ, ವೆಬ್‌ ಸೈಟ್ 'ಕುಸಿಯದಂತೆ' ಆಧುನೀಕರಣಗೊಳಿಸಲಾಗುವುದು. ಅಂದರೆ ಅಂತರ್ಜಾಲ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲಾಗುವುದು.

ಇದೇ ವೇಳೆ, ಕಾಯ್ದಿರಿಸಿದ ಟಿಕೆಟ್‌ಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು SMS ಅಲರ್ಟ್ ವ್ಯವಸ್ಥೆಯೂ ಜಾರಿಗೆ ಬರಲಿದೆ. ರೈಲುಗಳ ಸಂಚಾರದ ತಾಜಾ ಸ್ಥಿತಿಯನ್ನು ಇಂಟರ್ ನೆಟ್ ನಲ್ಲಿ ತಿಳಿದುಕೊಳ್ಳಬಹುದಾದ ರೈಲುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.

ರೈಲ್ವೆ ಮುಂಗಡ ಪತ್ರ: ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+