ಪ್ರಿಪೇಯ್ಡ್ ಮೊಬೈಲ್ ಚಲಾವಣೆಯಲ್ಲಿರಲು 20ರೂ ಸಾಕು

ಅಂತಹ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು 90 ದಿನಗಳವರೆಗೆ ಕಾದು ನೋಡಬೇಕಾಗುತ್ತದೆ ಎಂದೂ ಟ್ರಾಯ್ ತಿಳಿಸಿದೆ. ಗ್ರಾಹಕ ಹಿತರಕ್ಷಣೆಯ ಈ ತಿದ್ದುಪಡಿ ನಿಯಮವನ್ನು ಪ್ರಕಟಿಸಿರುವ ಟ್ರಾಯ್, ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಿದ ನಂತರ ಪ್ರಿಪೇಯ್ಡ್ ಗ್ರಾಹಕರು ತಮ್ಮ ಮೊದಲಿನ ಸೇವೆಯನ್ನು ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಟೆಲಿಕಾಂ ಸೇವಾದಾರರು ಆರಂಭಿಸಬೇಕು ಎಂದು ಸೂಚಿಸಿದೆ.
ಇದರರ್ಥ 90 ದಿನಗಳಾದರೂ ನಿಮ್ಮ ಪ್ರಿಪೇಯ್ಡ್ ಖಾತೆಯಲ್ಲಿ 20 ರೂಪಾಯಿ ಬ್ಯಾಲೆನ್ಸ್ ಇಲ್ಲಾಂದ್ರೆ ಅಂತಹ ಸಂಖ್ಯೆಯ ಮೊಬೈಲ್ ಸೇವೆಯನ್ನು ಸೇವಾ ಕಂಪನಿಗಳು ನಿಷ್ಕ್ರಿಯಗೊಳಿಸಬಹುದು.
ಟ್ರಾಯ್ ಇಂತಹ ಆದೇಶ ಏಕೆ ಹೊರಡಿಸಿದೆ ಅಂದ್ರೆ ಸರಾಸರಿ 6 ರೂಪಾಯಿಯಷ್ಟೇ ಬ್ಯಾಲೆನ್ಸ್ ಹೊಂದಿರುವ ಮತ್ತು 30 ದಿನಗಳಾದರೂ ಮೊಬೈಲ್ ಸೇವೆಯನ್ನು ಬಳಸದ ಸುಮಾರು 20 ಕೋಟಿ ಮೊಬೈಲ್ ಸೇವೆಗಳನ್ನು ಸೇವಾ ಕಂಪನಿಗಳು ರದ್ದುಗೊಳಿಸಿದ್ದವು.












Click it and Unblock the Notifications