ಸಾಲಗಾರನೊಂದಿಗೆ ಮಗಳನ್ನು ಸೆಕ್ಸಿಗೆ ತಳ್ಳಿದ ಪೋಷಕರು

ಈ ವಿಷಯವನ್ನು ಶಾಲಾ ಆಡಳಿತ ವರ್ಗವು ಸರಕಾರೇತರ ಸಂಸ್ಥೆಯ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮುಂದೆ ಪೊಲೀಸರಿಗೂ ದೂರು ನೀಡಲಾಗಿ, ಬಾಲಕಿಯ ಅಪ್ಪ-ಅಮ್ಮ ಮತ್ತು ಸಾಲ ನೀಡಿದ್ದ ವ್ಯಕ್ತಿಯನ್ನು ಪೊಲೀಖಸರು ಬಂಧಿಸಿದ್ದಾರೆ.
8ನೆಯ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಸದರಿ ಬಾಲಕಿಯ ತಂದೆ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಸಾಲ ಪಡೆದಿದ್ದರು. ಆದರೆ ಅದನ್ನು ಮರಳಿಸುವ ಚೈತನ್ಯ ವರಿಗೆ ಇರಲಿಲ್ಲ. ಆಗ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ, ಅದಕ್ಕೆ ಬದಲಾಗಿ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಸಾಲ ನೀಡಿದ್ದ ವ್ಯಕ್ತಿಗೆ ತಂದೆ ಅಲವತ್ತುಕೊಂಡಿದ್ದರು.
ನಿಸಾರ್ ಖಾನ್ (40) ಈ ಒಪ್ಪಂದಕ್ಕೆ ತಕ್ಷಣ ಅಂಗೀಕಾರ ನೀಡಿ, ಬಾಲಕಿಯ ಜತೆ ಸಂಭೋಗ ನಡೆಸಿದ್ದ. ಆ ಬಾಲಕಿಯ ದೌರ್ಭಾಗ್ಯವಾ ಎಂಬಂತೆ ನಿಸಾರ್ 2 ವರ್ಷ ಕಾಲ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡಿದ್ದ.
ಋಣಭಾರ ತೀರಿಸಿ, ಹಗುರವಾಗಿದ್ದ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದರೆ ಅತ್ತ ನಿಸಾರ್ ಖಾನ್ ಪರಾರಿಯಾಗಿದ್ದಾನೆ. (ಪಿಟಿಐ)












Click it and Unblock the Notifications