ನೌಕರರ ಭವಿಷ್ಯ ನಿಧಿ ಬಡ್ಡಿ ಶೇ 8.5ಕ್ಕೆ ಏರಿಕೆ

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಲಹಾ ಮಂಡಳಿಯಾಗಿರುವ ಹಣಕಾಸು ಮತ್ತು ಹೂಡಿಕೆ ಸಮಿತಿ ನೀಡಿದ ಸಲಹೆಯಂತೆ ಪ್ರಸಕ್ತ ವರ್ಷ ನೌಕರರ ಭವಿಷ್ಯ ನಿಧಿಗೆ ಶೇ 8.5 ಬಡ್ಡಿಯನ್ನು ನೀಡಲು ತೀರ್ಮಾನಿಸಿದ್ದು, ಸೋಮವಾರ(ಫೆ.25) ಅಂತಿಮ ಆದೇಶ ಹೊರಡಿಸಿದೆ.
ಶೇ 8.6ರ ಬಡ್ಡಿ ದರದಲ್ಲಿ ಚಂದಾದಾರರಿಗೆ ಹಣ ಪಾವತಿಸಿದಲ್ಲಿ 240.49 ಕೋಟಿ ರೂ ಕೊರತೆಯನ್ನು ಎದುರಿಸುವ ಸಾಧ್ಯತೆಗಳಿರುವುದರಿಂದ ಭವಿಷ್ಯ ನಿಧಿ ಠೇವಣಿಗಳಿಗೆ ಶೇ. 8.5 ಬಡ್ಡಿ ದರದಲ್ಲಿ ಹಣವನ್ನು ಪಾವತಿಸುವುದರಿಂದ 4.13 ಕೋಟಿ ರೂ. ಉಳಿಕೆಯಾಗಲಿದೆ. 2010-11ನೇ ಸಾಲಿನಲ್ಲಿ ಸಂಸ್ಥೆ ಶೇ. 9.5 ಬಡ್ಡಿ ದರವನ್ನು ಪಾವತಿಸಿದ್ದರೆ ಕಳೆದ ಸಾಲಿನಲ್ಲಿ ಶೇ. 8.25 ಬಡ್ಡಿ ದರವನ್ನು ಪಾವತಿಸಿತ್ತು.
2012-23ನೇ ಸಾಲಿನಲ್ಲಿ EPFO ಬಳಿ 2,63,000 ಕೋಟಿ ರೂ. ಕಾಪು ನಿಧಿ ಸಂಗ್ರಹಗೊಂಡಿದ್ದು, 21,147 ಕೋಟಿ ರೂ. ನಿವ್ವಳ ಆದಾಯದ ನಿರೀಕ್ಷೆಯಲ್ಲಿದೆ. ಸಾಮಾನ್ಯವಾಗಿ EPFO ವರ್ಷದ ಆರಂಭದಲ್ಲೇ ಬಡ್ಡಿದರ ಏರಿಕ್ ಬಗ್ಗೆ ಘೋಷಿಸುತ್ತದೆ. ಆದರೆ, ಈ ಬಾರಿ ಏರಿಕೆ ಬಗ್ಗೆ ತಡವಾಗಿ ಘೋಷಿಸಿದೆ.












Click it and Unblock the Notifications