ತುಮಕೂರು: ಶೀಬಿಯಲ್ಲಿ ಫೆ.26 ಬ್ರಹ್ಮರಥೋತ್ಸವ

ತುಮಕೂರು-ಸಿರಾ ನಡುವಿನ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ತುಮಕೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿ ನೆಲಹಾಳ್ ಬಳಿ ಚಿಕ್ಕಶೀಬಿ ಗ್ರಾಮದಲ್ಲಿ ಈ ದೇವಾಲಯವಿದ್ದು, ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳನ್ನು ಒಳಗೊಂಡಿದೆ.
ರಥೋತ್ಸವದ ಅಂಗವಾಗಿ ಫೆ. 25 ರಂದು ಕಲ್ಯಾಣೋತ್ಸವ ಏರ್ಪಟ್ಟಿದೆ. ರಥೋತ್ಸವದ ನಂತರ ಫೆ. 27 ರಂದು ತೆಪ್ಪೋತ್ಸವ, ಫೆ. 28 ರಂದು ದೊಡ್ಡ ಗರುಡೋತ್ಸವ, ಮಾರ್ಚ್ 1 ರಂದು ಧವನೋತ್ಸವ ಮತ್ತು ಬೆಳ್ಳಿ ಡೋಲೋತ್ಸವ ನಡೆಯಲಿವೆ.
ಮಾರ್ಚ್ 10 ರಂದು ಮಹಾಶಿವರಾತ್ರಿ ಪ್ರಯುಕ್ತ ಇಲ್ಲಿನ ಶ್ರೀ ಅರ್ಧನಾರೀಶ್ವರ ಸ್ವಾಮಿಗೆ ವಿಶೇಷ ಪೂಜಾದಿಗಳು ಹಾಗೂ ಮಾರ್ಚ್ 11 ರಂದು ಇಲ್ಲಿರುವ ಶ್ರೀ ಗೌರಿಗಂಗಾ ಚಂದ್ರಮೌಳೀಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 8 ಗಂಟೆಗೆ ಹಾಗೂ ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 10-30 ಕ್ಕೆ ಶ್ರೀ ನರಸಿಂಹಸ್ವಾಮಿಗೆ ಅಭಿಷೇಕ ನಡೆಯುವುದು. ಮಧ್ಯಾಹ್ನ 12 ರಿಂದ 3-30 ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇವಾಲಯದ ಅನುವಂಶೀಯ ಧರ್ಮಕರ್ತರಾದ ಕರಣೀಕ ನಲ್ಲಪ್ಪರವರು ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಶೀಬಿಯಲ್ಲಿ ನಡೆಯುವ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ತುಮಕೂರು-ಸಿರಾ ಮಾರ್ಗದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಚಿಕ್ಕಶೀಬಿಯಲ್ಲಿ ನಿಲುಗಡೆ ಸೌಲಭ್ಯವನ್ನು ನೀಡಿದೆ.












Click it and Unblock the Notifications