ಹ್ಯಾಕರ್ ದಾಳಿಗೆ ತುತ್ತಾದ ಬಲಿಷ್ಠ ಮೈಕ್ರೋಸಾಫ್ಟ್

ಶುಕ್ರವಾರ ತನ್ನ ಬ್ಲಾಗ್ ನಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಮೈಕ್ರೋಸಾಫ್ಟ್, ತನ್ನ ಕಂಪನಿಯ ಮೇಲೆ ಹ್ಯಾಕರ್ ಗಳು ದಾಳಿ ಮಾಡಿರುವುದು ನಿಜ. ಆದರೆ, ಯಾವ ಮಾಹಿತಿಗಳು ಕಳುವಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ ಎಂದು ಹೇಳಿದೆ.
ಹ್ಯಾಕರ್ ಬಗ್ಗೆ ಮಾಹಿತಿ ನೀಡಿರುವ ಕಂಪನಿ, ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳ ಮೇಲೆ ನಡೆಯವ ನಡೆಯುವ ರೀತಿಯಲ್ಲೇ ದಾಳಿ ನಡೆದಿದೆ ಎಂದು ತಿಳಿಸಿದೆ. ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳ ವೆಬ್ ಸೈಟ್ ಮೇಲೆ ಹ್ಯಾಕರ್ ಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಉಳಿದ ಕಂಪನಿಗಳ ಹೆಸರುಗಳು ತಿಳಿದುಬಂದಿಲ್ಲ ಎಂದು ಫೇಸ್ ಬುಕ್ ಸ್ಪಷ್ಟಪಡಿಸಿದೆ.
ಮೈಕ್ರೋಸಾಫ್ಟ್ ಹ್ಯಾಕರ್ ದಾಳಿಗೆ ಒಳಗಾದ ವೆಬ್ ಸೈಟ್ ನಲ್ಲಿ ಹೆಚ್ಚಿನ ಸಾಫ್ಟ್ ವೇರ್ ಗಳು ಇರಲಿಲ್ಲ. ತನಿಖೆಯ ನಂತರ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಟಿಟ್ವರ್ ಸಹ ತನ್ನ 250,000 ಗ್ರಾಹಕರ ಮೇಲೆ ಹ್ಯಾಕರ್ ಗಳು ದಾಳಿ ನಡೆಸಿದ್ದಾರೆ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೆಲ ದಿನಗಳ ಹಿಂದೆ ಹ್ಯಾಕಿಂಗ್ ಎಕ್ಸ್‌ಪರ್ಟ್ ಆಗಿರುವ ಅನಾನಿಮಸ್‌ನ ಟ್ವಿಟ್ಟರ್ ಪುಟವನ್ನೇ ಹ್ಯಾಕ್ ಮಾಡಲಾಗಿತ್ತು.












Click it and Unblock the Notifications