ವಿಧವೆ ಸೊಸೆಯ ಜವಾಬ್ದಾರಿ ಯಾರು ಹೊರಬೇಕು?

In-laws should take care of widow - Bombay High Court Justice Roshan Dalvi
ಮುಂಬೈ, ಫೆ.23: ವೈವಾಹಿಕ ಬದುಕಿಗೆ ಕಾಲಿಟ್ಟು ಗಂಡನ ಮನೆಗೆ ಬಂದ ಹೆಣ್ಣುಮಗಳು ವಿಧವೆಯಾದರೆ ಹೋಗುವುದಾದರೂ ಎಲ್ಲಿಗೆ? ಅದೂ 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ'ಎನ್ನುವ ತವರಿನವರು ಇರುವಾಗ...

12 ವರ್ಷಗಳಿಂದ ಇಂತಹುದೇ ಸಂದರ್ಭ ಎದುರಿಸುತ್ತಿದ್ದ ವಿಧವೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ಸಾಂತ್ವನ ಹೇಳಿದೆ. ತನ್ಮೂಲಕ ಗಂಡ ಅಸುನೀಗಿದ ನಂತರ ದಿಕ್ಕುಗಾಣದ ಇತರೆ ಮಹಿಳೆಯರ ನೆರವಿಗೂ ಧಾವಿಸಿದೆ.

ಗಂಡ ಸತ್ತ ನಂತರ ಹೆಂಡತಿಗೆ ಗಂಡನ ಆಸ್ತಿಯ ಮೇಲಷ್ಟೇ ಅಧಿಕಾರ ಇರುವುದಿಲ್ಲ. ಬದಲಿಗೆ ಆಕೆಯ ಅತ್ತೆ-ಮಾವನ ಆಸ್ತಿಯಲ್ಲೂ ಪಾಲು ಪಡೆಯುವ ಹಕ್ಕು ಹೊಂದಿರುತ್ತಾಳೆ. ಹಾಗಾಗಿ, ಆಕೆಯನ್ನು ಪೋಷಿಸುವ ಜವಾಬ್ದಾರಿಯನ್ನು ಆಕೆಯ ಅತ್ತೆ-ಮಾವ ಹೊರಬೇಕಾಗುತ್ತದೆ ಎಂಬುದು ಕೋರ್ಟ್ ತೀರ್ಪಿನ ತಾತ್ಪರ್ಯವಾಗಿದೆ.

12 ವರ್ಷಗಳ ಹಿಂದೆ ತಮ್ಮ ಪುತ್ರ ಸಾವಿಗೀಡಾದ ಬಳಿಕ ಸೊಸೆಯನ್ನು ಅತ್ತೆ-ಮಾವ ಹೊರಹಾಕಿದ್ದರು. ಜತೆಗೆ, ತಮ್ಮ ಪುತ್ರನ ಹೆಸರಿನಲ್ಲಿದ್ದ ಅಪಾರ್ಟ್ ಮೆಂಟಿನ ಮಾಲೀಕತ್ವದ ಮೇಲೆಯೂ ಆಕೆಗೆ ಯಾವುದೇ ಅಧಿಕಾರ ನೀಡಿರಲಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ರೋಶನ್ ದಳವಿ ವಿಧವೆ ಹೆಣ್ಣುಮಗಳ ನೆರವಿಗೆ ಧಾವಿಸಿದ್ದು, ಅಪಾರ್ಟ್ ಮೆಂಟಿನ ಮೇಲಿನ ಸಂಪೂರ್ಣ ಹಕ್ಕನ್ನು ಆಕೆಗೆ ಹಸ್ತಾಂತರಿಸಿದ್ದಾರೆ. ಆದರೆ ಮುಂದೆ ಇದರಲ್ಲಿ ಅರ್ಧ ಪಾಲು ದಂಪತಿಯ ಮಗಳಿಗೂ ಸಲ್ಲಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+