ಗ್ರಾಹಕರಿಗೆ ಇನ್ನಷ್ಟು ಹತ್ತಿರವಾದ ಹಳದಿ ಲೋಹ, ಚಿನ್ನ

Indian gold prices have fallen nearly 10 percent
ಬೆಂಗಳೂರು, ಫೆ.21: ಕಳೆದ 6 ತಿಂಗಳಲ್ಲೇ ಅತ್ಯಧಿಕ ಇಳಿಕೆಯಾಗಿದ್ದ ಚಿನ್ನದ ದರ ಮತ್ತಷ್ಟು ಕುಸಿದಿದೆ. ಹಲವು ತಿಂಗಳುಗಳ ಬಳಿಕೆ ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ದರ 30 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಜಾಗತಿಕ ಮಟ್ಟದಲ್ಲಿ ಕಳೆಗುಂದಿದ ಚಿನ್ನದ ವಹಿವಾಟು ಮತ್ತು ದೇಶೀಯ ವ್ಯಾಪರಸ್ಥರಿಂದ ಬೇಡಿಕೆ ಕುಸಿದಿರುವುದು ಈ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಒಟ್ಟಾರೆ ಕಳೆದ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಚಿನ್ನದ ದರದಲ್ಲಿ ಶೇ 10 ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರು, ಡಾಲರ್ vs ರುಪಾಯಿ ಸಮರ, ಹಬ್ಬಗಳ ಸಾಲುಸಾಲು ಬೇಡಿಕೆ ಹೆಚ್ಚಳ ಎಲ್ಲವೂ ಚಿನ್ನದ ದರ ಏರುಪೇರಿಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಸ್ಪಾಟ್ ಚಿನ್ನದ ಬೆಲೆ 1,554.49 ಯುಎಸ್ ಡಾಲರ್ ನಷ್ಟಿತ್ತು. ಬುಧವಾರ ಶೇ 2.6 ರಷ್ಟು ಕುಸಿತ ಕಂಡು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಭಾರತದಲ್ಲಿ ಸುಮಾರು 6 ತಿಂಗಳ ಕಾಲ ಪ್ರತಿ 10 ಗ್ರಾಂಗೆ 30 ಸಾವಿರ ರು ಗಿಂತ ಮೇಲಕ್ಕೇರಿತ್ತು. ಅದೇ ಪ್ರಮಾಣ ಆರು ತಿಂಗಳುಗಳ ಕಾಲ ಮುಂದುವರೆದಿತ್ತು. ಗ್ರಾಹಕರ ಖರೀದಿ ಜೋರಾದರೂ ಚಿನ್ನದ ದರ ತಗ್ಗಿರಲಿಲ್ಲ. ಆದರೆ, ಈಗ ಮೊದಲ ಬಾರಿಗೆ 30 ಸಾವಿರ ರು ಗಿಂತ ಕೆಳಗಿಳಿದಿದೆ.

ಜನವರಿ ತಿಂಗಳ ಎಣಿಕೆಯಂತೆ ಚಿನ್ನದ ಆಮದು ಪ್ರಮಾಣದಲ್ಲಿ ಶೇ 23 ರಷ್ಟು ಏರಿಕೆಯಾಗಿದೆ. ಸುಮಾರು 100 ಟನ್ ಗಳಷ್ಟು ಚಿನ್ನ ಆಮದಾಗಿದೆ. ಚಿನ್ನದ ಆಮದು ನಿಯಂತ್ರಿಸಲು ಸರ್ಕಾರ ಆಮದು ಮೇಲಿನ ಸುಂಕ ಹೆಚ್ಚಿಸಲಿದೆ ಎಂಬ ಸುದ್ದಿ ಹಬ್ಬಿತ್ತು. ಈ ಕಾರಣದಿಂದ ವರ್ತಕರು ಹೆಚ್ಚು ದಾಸ್ತಾನು ಮಾಡುವ ಕಾರಣದಿಂದ ಹೆಚ್ಚಿನ ಆಮದಿಗೆ ಮುಂದಾಗಿದ್ದಾರೆ. ಆದರೆ, ದಾಸ್ತಾನುದಾರರು ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದ್ದು, ಬೆಲೆ ಇನ್ನೂ ಕುಗ್ಗಲಿ ಎಂದು ಆಶಿಸುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಇಂದಿನ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ.

ದೇಶದ ಪ್ರತಿ ತಿಂಗಳ ಆಮದು ಪ್ರಮಾಣಕ್ಕೆ ಹೋಲಿಸಿದರೆ ಜನವರಿ 2013ರಲ್ಲಿ ಆಮದು ಶೇ 40 ರಷ್ಟು ಹೆಚ್ಚು ಆಮದು ಕಂಡು ಬಂದಿದೆ ಎಂದು ಬಾಂಬೆ ಬುಲಿಯನ್ ಆಸೋಸಿಯೇಷನ್ ನ ಅಧ್ಯಕ್ಷ ಮೋಹಿತ್ ಕಾಂಬೋಜ್ ಹೇಳಿದ್ದಾರೆ. 2012ರಲ್ಲಿ ಸುಮಾರು 860 ಟನ್ ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿದೆ.MCX ಪ್ರಕಟಣೆಯಂತೆ ವಿವಿಧ ನಗರಗಳಲ್ಲಿ ಚಿನ್ನದ ದರ ಪಟ್ಟಿ ಇಂತಿದೆ:

* ಮುಂಬೈನಲ್ಲಿ ಆಭರಣ ಚಿನ್ನ 10ಗ್ರಾಂಗೆ 29,470.00 ಆಗಿದ್ದು, ಶುದ್ಧ ಚಿನ್ನದ ದರ 29,615.0 ಆಗಿದೆ.
* ದೆಹಲಿಯಲ್ಲಿ ಆಭರಣ ಚಿನ್ನ 10ಗ್ರಾಂಗೆ 29,500.00 ಆಗಿದ್ದು, ಶುದ್ಧ ಚಿನ್ನದ ದರ 29,700.00 ಆಗಿದೆ.
* ಚೆನ್ನೈನಲ್ಲಿ ಆಭರಣ ಚಿನ್ನ 10ಗ್ರಾಂಗೆ 29,460.00 ಆಗಿದ್ದು, ಶುದ್ಧ ಚಿನ್ನದ ದರ 29,580.00 ಆಗಿದೆ.
* ಜೈಪುರದಲ್ಲಿ ಆಭರಣ ಚಿನ್ನ 10ಗ್ರಾಂಗೆ 29,430.00 ಆಗಿದ್ದು, ಶುದ್ಧ ಚಿನ್ನದ ದರ 29,455.೦೦ ಆಗಿದೆ.
* ಅಹಮದಾಬಾದಿನಲ್ಲಿ ಆಭರಣ ಚಿನ್ನ 10ಗ್ರಾಂಗೆ 29,415.00 ಆಗಿದ್ದು, ಶುದ್ಧ ಚಿನ್ನದ ದರ 29,545.00 ಆಗಿದೆ.

ಬೆಂಗಳೂರು ಚಿನಿವಾರ ಪೇಟೆಯಲ್ಲಿ ಗುರುವಾರ (ಫೆ.21) 22 Karat ಚಿನ್ನದ ದರ 10 ಗ್ರಾಂಗೆ 27,900 ರು, 24 karat ಚಿನ್ನ 10 ಗ್ರಾಂಗೆ 29,900 ರು ಇದೆ. ಮದುವೆ, ಹಬ್ಬದ ಋತು ಮುಗಿದ ಹಿನ್ನೆಲೆಯಲ್ಲಿ ಬೇಡಿಕೆ ತಗ್ಗಿದ್ದು, ಪರಿಣಾಮ ಹಳದಿ ಲೋಹದ ದರ ಭಾರಿ ಇಳಿಕೆ ಕಂಡಿದೆ. ಚಿನ್ನದ ದರ ಇನ್ನಷ್ಟು ಇಳಿಯುವ ಸಾಧ್ಯತೆಯಿದೆ ಎಂದು ಚಿನಿವಾರ ಪೇಟೆಯಿಂದ ಸುದ್ದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+