ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸಿದ ವಿಪ್ರೋ ಐಟಿ

ಭಾರತ ಮತ್ತು ಮಧ್ಯ ಪ್ರಾಚ್ಯದಲ್ಲಿ ಬೇರೂರಿರುವ Wipro Infotech ಸಂಸ್ಥೆಯು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ MIAL ಹೊಸ Terminal T2ಗೆ 10 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸಲು ರಹದಾರಿ ಪಡೆದಿದೆ.
ಈ ಒಪ್ಪಂದದ ಮೂಲಕ ತಮ್ಮ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಕೌಶಲ್ಯವನ್ನು ವಿಮಾನಯಾನ ಗ್ರಾಹಕರಿಗೆ ಸಮರ್ಥವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದು Wipro ಆಶಿಸಿದೆ.
'MIAL ನಿಲ್ದಾಣದಲ್ಲಿ ಅಷ್ಟೂ ಐಟಿ ಸೇವೆಯನ್ನು ಸಮಗ್ರವಾಗಿ ಒದಗಿಸುವ ಹೊಣೆ ವಿಪ್ರೋ ಹೆಗಲೇರಿದೆ. ಐಟಿ ಉದ್ಯಮಕ್ಕೆ ಇದೊಂದು ಗಣನೀಯ ಅವಕಾಶವಾಗಿ ಪರಿಣಮಿಸಿದೆ. ಜತೆಗೆ ಸವಾಲಿನದ್ದೂ ಆಗಿದೆ. ವಿಶ್ವ ಮಟ್ಟದಲ್ಲಿಯೂ ಇಂತಹ ಸೇವೆಗಳಿಗೆ ವಿಫುಲ ಅವಕಾಶಗಳಿವೆ. ವಿಪ್ರೋ ಈ ಸೇವೆಗೆ ಸಜ್ಜಾಗಿದೆ' ಎಂದು Wipro Infotech ಉಪಾಧ್ಯಕ್ಷ ಆನಂದ್ ಶಂಕರನ್ ಪ್ರತಿಕ್ರಿಯಿಸಿದ್ದಾರೆ.
ವಿಮಾನ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳು ಹೀಗೆ ಎರಡಕ್ಕೂ ಅತ್ಯುತ್ತಮ ಸೇವೆ ಒದಗಿಸುವಷ್ಟು ಅನುಭವ Wipro Infotech ಕಂಪನಿಗಿದೆ. ವಾರ್ಷಿಕ 40 ದಶಲಕ್ಷ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಸೇವೆ ಪಡೆಯುತ್ತಿದ್ದಾರೆ.


Click it and Unblock the Notifications
