ಇಲ್ಲಿ ಮಹಿಳಾ ಕಾರ್ಪೊರೇಟರುಗಳು ಕೂಡ ಸುರಕ್ಷಿತವಲ್ಲ!

Even woman councillors are not safe in Delhi
ನವದೆಹಲಿ, ಫೆ. 18 : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವ ಮಹಿಳೆಯರು ಮಾತ್ರವಲ್ಲ, ಜನರಿಂದ ಆಯ್ಕೆಯಾಗಿರುವ ಮಹಿಳಾ ಕಾರ್ಪೊರೇಟರುಗಳು ಕೂಡ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಿರುವ ಆಘಾತಕಾರಿ ಸಂಗತಿ ಬಯಲಾಗಿದೆ.

ತಮ್ಮ ಜೊತೆ ಕೆಲಸ ಮಾಡುವ ಸಹೋದ್ಯೋಗಿ ಕಾರ್ಪೊರೇಟರುಗಳೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕೆಲ ಮಹಿಳಾ ಕಾರ್ಪೊರೇಟರುಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಧಿಕಾರದಲ್ಲಿರುವ ಮಹಿಳೆಯರದೇ ಈಪಾಡಾದರೆ ಸಾಮಾನ್ಯ ಮಹಿಳೆಯರ ಪಾಡೇನು?

ಕಾರ್ಪೊರೇಷನ್ ಕಟ್ಟಡದ ಒಳಗಡೆ, ಮಹಾನಗರ ಪಾಲಿಕೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ದೌರ್ಜನ್ಯ ನಡೆಯುತ್ತಿರುವುದು ನಿರಂತರವಾಗಿದೆ. ಪ್ರತಿರೋಧಿಸಲು ಹೋದರೆ ಅಶ್ಲೀಲ ಪದಗಳನ್ನು ಬಳಸಿ ತಮ್ಮನ್ನು ಪುರುಷ ಕಾರ್ಪೊರೇಟರುಗಳು ನಿಂದಿಸುತ್ತಾರೆ ಎಂದು ಮಹಿಳಾ ಕಾರ್ಪೊರೇಟರುಗಳು ಪತ್ರದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಾಜಿ ಮೇಯರ್ ರಜನಿ ಅಬ್ಬೆ ಅವರೇ ಇತರ ಮಹಿಳಾ ಕಾರ್ಪೊರೇಟರುಗಳನ್ನು ಒಗ್ಗೂಡಿಸಿಕೊಂಡು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಿಂದೆ ಕೂಡ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾಗ ಭಾರೀ ಪ್ರತಿರೋಧದ ಕೂಗು ಎದ್ದಿತ್ತು. ನಂತರ ಹಾಗೆಯೇ ತಣ್ಣಗೂ ಆಗಿತ್ತು.

ಕಾನೂನಿನ ಬಾಹುವನ್ನು ಎಷ್ಟೇ ಬಲಿಷ್ಠಗೊಳಿಸಿದರೂ ದೆಹಲಿಯಲ್ಲಿ ಮೇಲಿಂದ ಮೇಲೆ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಕಳೆದ ವಾರ ಕೂಡ ಮದುವೆಯಾದ ಗೃಹಿಣಿ ಮೇಲೆ ನಾಲ್ಕು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತ್ ಅವರೇ, ದೆಹಲಿಯಲ್ಲಿ ಮಹಿಳೆಯರು ಸುರಕ್ಷಿತವಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 16ರಂದು ದೆಹಲಿಯಲ್ಲಿ 23 ವರ್ಷದ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು. ಚಲಿಸುತ್ತಿದ್ದ ಬಸ್ಸಿನಲ್ಲಿ 6 ದುರುಳರು ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಲ್ಲದೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ನಂತರ 19 ವರ್ಷದ ಯುವತಿ ಅತ್ಯಾಚಾರ ಪ್ರತಿಭಟಿಸಿದ್ದಕ್ಕೆ ಆಕೆಯ ಗಂಟಲಿಗೆ ಕಬ್ಬಿಣದ ಸಲಾಕೆ ಇಳಿಬಿಟ್ಟು ದೌರ್ಜನ್ಯ ಎಸಗಲಾಗಿತ್ತು. ಈಗ, ಕಾರ್ಪೊರೇಟರುಗಳೇ ಸ್ವತಃ ಲೈಂಗಿಕ ಹಿಂಸಾಚಾರಕ್ಕೆ ಈಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+