ಹೆಲಿಕಾಪ್ಟರ್ ಡೀಲ್: ದಿ ಫ್ಯಾಮಿಲಿಗೆ 200 ಕೋಟಿ?

ಭ್ರಷ್ಟಾಚಾರದ ಸಮಗ್ರ ಮಾಹಿತಿ ಸಂಗ್ರಹಿಸಲು ಭಾರತದ ರಕ್ಷಣಾ ಸಚಿವಾಲಯ ತನ್ನ ಜಂಟಿ ಕಾರ್ಯದರ್ಶಿಯನ್ನು ಇಟಲಿಗೆ ಕಳುಹಿಸಲು ನಿರ್ಧರಿಸಿತ್ತು. ಆದರೆ, ಪ್ರಾಥಮಿಕ ತನಿಖೆಯ ಟ್ರಿಬ್ಯುನಲ್ ನ್ಯಾಯಾಧೀಶ ಬಸ್ಟೋ ಅರ್ಸಿಜೋಯ್ ಲುಕಾ ಲಬಿಯಾಂಕಾ ಅವರು ಶನಿವಾರ(ಫೆ.16) ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.
ಇಟಲಿಯ ಕೋರ್ಟ್‌ನಲ್ಲಿ ದಾಖಲಾಗಿರುವ ಆರೋಪಪಟ್ಟಿಯ 40 ಹಾಗೂ 41ನೇ ಪುಟಗಳಲ್ಲಿರುವ 'ಆ ಕುಟುಂಬ'(ದಿ ಫ್ಯಾಮಿಲಿ)ಕ್ಕೆ 200 ಕೋಟಿ ಲಂಚ ಸಂದಾಯವಾಗಿರುವ ಉಲ್ಲೇಖವಾಗಿದೆ.
ಚಾರ್ಜ್‌ಶೀಟ್ ಹೇಳಿರುವಂತೆ ಫಿನ್‌ಮೆಕಾನಿಕಾ ಗ್ರೂಪ್ ಸುಮಾರು 200 ಕೋಟಿ ರೂ. ಗಳನ್ನು 'ಆ ಕುಟುಂಬಕ್ಕೆ' ಕಿಕ್‌ಬ್ಯಾಕ್ ರೂಪದಲ್ಲಿ ಸಂದಾಯ ಮಾಡಿದೆ. ಕಮೀಷನ್ ಸ್ವೀಕರಿಸಿರುವ 'ಆ ಕುಟುಂಬ' ಯಾವುದೆಂದು ಬಹಿರಂಗ ವಾಗಬೇಕೆಂದು ಬಿಜೆಪಿ ಆಗ್ರಹಿಸಿದೆ. ಡೀಲ್ ಅಂತಿಮ ಕುದುರಿಸಿದ್ದು, ಸಹಿ ಹಾಕಿದ್ದು ಯಾರು? ಹಣ ಪಡೆದಿದ್ದು ಯಾರು ಎಂಬುದಕ್ಕೆ ಯುಪಿಎ ಸರ್ಕಾರ ಉತ್ತರಿಸಬೇಕು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವ್ಡೇಕರ್ ಆಗ್ರಹಿಸಿದ್ದಾರೆ.
ಕುತೂಹಲದ ವಿಷಯ: ಮೇ 8, 2011ರ ಭಾನುವಾರ ನಾವು ದೀರ್ಘ ಕಾಲ ವಿಸ್ತೃತ ಚರ್ಚೆ ನಡೆಸಿದೆವು. ಈ ವೇಳೆ, ಎರಡು ಪ್ರತ್ಯೇಕ ಒಪ್ಪಂದ ಏರ್ಪಟ್ಟಿತು. ಒಂದು 450 ಕೋಟಿ(42 ಮಿಲಿಯನ್ ಯೂರೋ), ಮತ್ತೊಂದು 260 ಕೋಟಿ (28 ಮಿಲಿಯನ್ ಯೂರೋ) ಮೊತ್ತದ್ದಾಗಿತ್ತು. ಆದರೆ, 'ಆ ಕುಟುಂಬ' ಯಾವುದು ಸ್ಪಷ್ಟ ಮಾಹಿತಿ ಇಲ್ಲ.
ಆದರೆ, 'ಆ ಕುಟುಂಬ'ಕ್ಕೆ ನಾವು 265 ಕೋಟಿ (29 ಮಿಲಿಯನ್ ಯೂರೋ) ನೀಡಬೇಕಾಗಿದೆ. ಹೀಗಾಗಿ, 450 ಕೋಟಿ ರೂ (42 ಮಿಲಿಯನ್ ಯೂರೋ) ಒಪ್ಪಂದದಲ್ಲಿ ಕೊಂಚ ಕಡಿಮೆ ಮಾಡಬೇಕಾಗಿ ವಿನಂತಿ ಬಂತು. ಈ ಸಂಬಂಧ ಚೌಕಾಸಿ ನಡೆದು ಕೊನೆಗೆ 270 ಕೋಟಿ ರೂ (30 ಮಿಲಿಯನ್ ಯೂರೋ)ಗೆ ಕುದುರಿತು.
ಬ್ರೋಕರ್ ಹಾಶ್ಚೆಕ್ ತಾಯಿಯ ಸ್ವಿಸ್ ನಿವಾಸದ ಮೇಲೆ ಏಪ್ರಿಲ್ 2012ರಲ್ಲಿ ತನಿಖಾಧಿಕಾರಿಗಳು ದಾಳಿ ನಡೆಸಿದಾಗ ಬೆಡ್‌ರೂಮ್‌ನಲ್ಲಿ ಈ ಕಡತವನ್ನು ವಶಪಡಿಸಿಕೊಳ್ಳಲಾಯಿತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್‌ನ ಆ ಕುಟುಂಬ'ಕ್ಕೆ
ಕೇವಲ 85 ಕೋಟಿ (12 ಮಿಲಿಯನ್ ಯೂರೋ) ನೀಡುವುದಕ್ಕಾಗಿ ಮಿಚೆಲ್ ಮೇಲೆ ಒತ್ತಡ ಬಂದಿತ್ತು. ಆದರೆ, ಇದಕ್ಕೆ ಒಪ್ಪದ ಮಿಚೆಲ್ ಸ್ನೇಹಿತ ಹಾಶ್ಚೆಕ್ ವಿರುದ್ಧ ಕಿರುಚಾಡಿದ್ದ ಎನ್ನಲಾಗಿದೆ.
ಡೀಲ್ ಕಮೀಷನ್ ತತ್ಸಂಬಂಧ ದಲ್ಲಾಳಿಗಳಾದ ಕ್ರಿಸ್ಟಿಯನ್ ಮಿಚೆಲ್ ಮತ್ತು ಸ್ನೇಹಿತ ಹಾಶ್ಚೆಕ್ ಮಧ್ಯೆ ವೈಮನಸ್ಯವೂ ಮೂಡಿತ್ತು ಎಂದು ಹೇಳಿದೆ. ಮತ್ತೆ ತ್ಯಾಗಿ ಸಹೋದರರಿಗೆ ಸುಮಾರು 3.5 ಕೋಟಿ ರೂಪಾಯಿ (4,00,000 ಯೂರೋ)ಪ್ರತ್ಯೇಕವಾಗಿ ಸಂದಾಯ ಮಾಡಲಾಗಿದೆ ಎಂದೂ ಚಾರ್ಜ್‌ಶೀಟ್ ಹೇಳಿದೆ. ತನಿಖಾಧಿಕಾರಿಗಳ ಪ್ರಕಾರ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಮಾರ್ಚ್ ಅಂತ್ಯಕ್ಕೆ ಎರಡನೇ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ.












Click it and Unblock the Notifications