ರಾಹುಲ್ ಕ್ಲರ್ಕ್ ಆಗೋಕೂ ಅನರ್ಹ : ಜೇಠ್ಮಲಾನಿ

ಮಡಿಕೇರಿ ಪ್ರವಾಸದಲ್ಲಿರುವ ರಾಮ್ ಜೇಠ್ಮಲಾನಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಯನ್ನು ಯಾರು ಕ್ಲರ್ಕ್ ಆಗಿಯೂ ನೇಮಿಸಿಕೊಳ್ಳುವುದಿಲ್ಲ. ಅಂತಹವರನ್ನು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದೆ ಎಂದು ಗುರುವಾರ ಕುಹಕವಾಡಿದರು. ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಯಾವ ಅರ್ಹತೆ ಇದೆ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಹೊಂದಿರುವ ಜನರ ಪಟ್ಟಿಯನ್ನು ಜರ್ಮನಿ, ಫ್ರಾನ್ಸ್, ಇಟಲಿ ಮುಂತಾದ ದೇಶಗಳು ಬಹಿರಂಗಪಡಿಸಿವೆ ಎಂದು ವಾಗ್ದಾಳಿ ಮಾಡಿದರು.
ಆರ್ಥಿಕ ತಜ್ಞರಾದ ಪ್ರಧಾನಿ ಡಾ. ಮನಹೋಹನ್ ಸಿಂಗ್ ಸರ್ಕಾರಕ್ಕೆ ಏಕೆ ಕಪ್ಪು ಹಣ ಹೊಂದಿರುವ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ದು ಶುದ್ಧಹಸ್ತವೇ ಆಗಿದ್ದರೆ ಕಪ್ಪುಹಣ ಹೊಂದಿರುವ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡುವಂತೆ ಅವರು ಸವಾಲು ಹಾಕಿದರು.












Click it and Unblock the Notifications