26 ವರ್ಷ ವಯಸ್ಸಿಗೆ ಎಷ್ಟು ಮದ್ವೆಯಾಗಲು ಸಾಧ್ಯ?

ಮಧ್ಯಪ್ರದೇಶದ ಪಟೆರಾ ತೋಲಾ ಗ್ರಾಮದ 26 ವರ್ಷ ವಯಸ್ಸಿನ ಉಮೆಂದ್ರ ಪ್ರಸಾದ್ ಮಹ್ರಾ ಎಂಬ ವ್ಯಕ್ತಿ ಸುಮಾರು 8 ಬಾರಿ ಮದುವೆಯಾಗಿದ್ದಾನೆ. ಆದರೆ, 8 ಮದುವೆಗಳ ಗುಟ್ಟು ಕಾಪಾಡಿಕೊಳ್ಳುವಲ್ಲಿ ಉಮೇಂದ್ರ ಬಹುಮಟ್ಟಿಗೆ ಯಶಸ್ವಿಯಾಗಿದ್ದ. ಫೆ.7ರಂದು 8 ನೇ ಮದುವೆಯಾದ ಸುದ್ದಿ ಸಿಕ್ಕಿದೆ. ಆದರೆ, ಮದುವೆ ಗುಟ್ಟು ರಟ್ಟಾಗಿದ್ದು ಹೇಗೆ?
ಆರನೇ ಹೆಂಡತಿ ದೇವಕಿ ಭಾಯಿ ಮಹ್ರಾಗೆ ಇತ್ತೀಚೆಗೆ ತನ್ನ ಗಂಡ ಏಕಪತ್ನಿವ್ರತಸ್ಥನಲ್ಲ, ಬಹುಪತ್ನಿವಲ್ಲಭ ಎಂದು ತಿಳಿದು ಆಘಾತವಾಗಿದೆ. ತಕ್ಷಣವೇ ಮಧ್ಯಪ್ರದೇಶದ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ನನ್ನ ಗಂಡನ ಸೆಪ್ಟೆಂಬರ್ 7, 2009ರಂದು ನನ್ನ ಕೈ ಹಿಡಿದಾಗ ಎಲ್ಲವೂ ಚೆನ್ನಾಗಿತ್ತು. ಆದರೆ, ಆತ ಬಹುಪತ್ನಿ ವಲ್ಲಭನಾಗಿದ್ದಾನೆ. ನನ್ನ ನಂಬಿಕೆಗೆ ದ್ರೋಹ ಬಗೆದಿದ್ದಾನೆ ಎಂದು ಮಹಿಳಾ ಆಯೋಗದ ಅಧಕ್ಷೆ ವಂದನಾ ಅವರ ಬಳಿ ಗೋಳು ತೋಡಿಕೊಂಡಿದ್ದಾಳೆ.
ಉಮೇಂದ್ರಗೆ ಮದುವೆ ಹುಚ್ಚು ಹತ್ತಿದ್ದಾದರೂ ಏಕೆ? ಪ್ರಶ್ನೆ ಹುಡುಕುತ್ತಾ ಹೋದರೆ ಅದಕ್ಕೆ ದೇವಕಿ ನೀಡುವ ಉತ್ತರ ಕುತೂಹಲಕಾರಿಯಾಗಿದೆ. ಉಮೇಂದ್ರನಿಗೆ ಹುಡುಗಿಯರ ಹುಚ್ಚು ಇರುವುದು ನಿಜ ಆದರೆ, ಕಂಡ ಕಂಡ ಹೆಂಗಸರ ಜೊತೆ, ವೇಶ್ಯೆಯರ ಸಂಘ ಮಾಡಲು ಹೆದರುತ್ತಾನೆ.
ಧಾರ್ಮಿಕ ವಿಧಿ ವಿಧಾನ ಪ್ರಕಾರ, ಮದುವೆ, ಪ್ರಸ್ತ ಮುಗಿಸಿಕೊಳ್ಳುತ್ತಾನೆ. ನನ್ನಂತೆ ಸುಮಾರು 6-7 ಯುವತಿಯರನ್ನು ಮದುವೆಯಾಗಿದ್ದಾನೆ. ಎಲ್ಲಾ ಹೆಂಡತಿಯರನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಆದರೆ, ಹೊಸದಾಗಿ ಮದುವೆಯಾದ ಮೇಲೆ ಪತ್ನಿ ಗರ್ಭಿಣಿಯಾಗುವ ತನಕ ಸುಮ್ಮನಿರುತ್ತಾನೆ. ನಂತರ ಗರ್ಭ ತೆಗೆಸುವಂತೆ ಒತ್ತಾಯಿಸುತ್ತಾನೆ.
ಹೆಂಡತಿ ಒಪ್ಪದಿದ್ದಾಗ, ಕೆಲ ಕಾಲ ಕಿರುಕುಳ ನೀಡುತ್ತಾನೆ. ಕೊನೆಗೆ ಹೆಂಡತಿ ಗರ್ಭ ತೆಗೆಸಲು ನಿರಾಕರಿಸಿದರೆ, ಆಕೆಯನ್ನು ತೊರೆದು ಇನ್ನೊಬ್ಬಳನ್ನು ಹುಡುಕಿಕೊಳ್ಳುತ್ತಾನೆ. ಫ್ರೆಶ್ ಆಗಿ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ ಎಂದು ತಿಳಿದು ಬಂದಿದೆ.
ಉಮೇಂದ್ರನ ಮದುವೆ ಕಥೆ ಬಗ್ಗೆ ಅನೇಕ ಕಥೆಗಳು ಹಬ್ಬಿದ್ದು, ಇನ್ನೊಂದು ಮದುವೆಯಾಗುವ ಮುನ್ನ ಬಂಧಿಸಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಮಹಿಳಾ ಆಯೋಗ ಮನವಿ ಸಲ್ಲಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. (ಪಿಟಿಐ)












Click it and Unblock the Notifications