ಬಾತ್ ರೂಮಿನಲ್ಲಿ ಶಾಸಕನ ಭದ್ರತಾಧಿಕಾರಿ ಏನ್ಮಾಡ್ತಿದ್ದ?

narasapur-mla-guard-held-for-filming-woman-having-bath
ರಾಜಮಂಡ್ರಿ, ಫೆ.5: ಅತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಹಿಳೆಯರ ಮೇಲಿನ ಅನಾಚಾರಕ್ಕೆ ಕಡಿವಾಣ ಹಾಕಲು ಹೊಸ ಶಾಸನವೊಂದಕ್ಕೆ ಅಂಕಿತ ಹಾಕುತ್ತಿದ್ದರೆ ಇತ್ತ ಶಾಸಕ ಮಹೋದಯರೊಬ್ಬರ ಗನ್ ಮ್ಯಾನ್ ಯಾನಿ ಸೆಕ್ಯುರಿಟಿ ಗಾರ್ಡ್ ಬಾತ್ ರೂಮಿನಲ್ಲಿ ಏನು ಮಾಡ್ತಿದ್ದ ಗೊತ್ತಾ? ಅದೂ ಮಹಿಳೆಯೊಬ್ಬರು ಬಾತ್ ರೂಮಿನಲ್ಲಿದ್ದಾಗ...

ಆ ಗನ್ ಮ್ಯಾನ್ ಸಶಸ್ತ್ರ ಮೀಸಲು ಪೊಲೀಸ್ ಪೇದೆ. ಆತ ಗನ್ ಮ್ಯಾನ್ ಆಗಿರುವುದು ಕಾಂಗ್ರೆಸ್ ಶಾಸಕರೊಬ್ಬರಿಗೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನರಸಾಪುರದಲ್ಲಿ ಅತಿಥಿ ಗೃಹವೊಂದರಲ್ಲಿ ನಿನ್ನೆ ಸೋಮವಾರ ಈ ಪ್ರಕರಣ ಬೆಳಕಿಗೆ ಬಂದಿದೆ.

ಆ ಅತಿಥಿಗೃಹದಲ್ಲಿ ಮಹಿಳಾ ಅತಿಥಿಯೊಬ್ಬರು (ವಿಶಾಖಪಟ್ಟಣದವರು) ಸ್ನಾನ ಮಾಡುತ್ತಿದ್ದಾಗ ಥೇಟ್ ತೆಲುಗು ಸಿನಿಮಾಗಳಲ್ಲಿ ಕಂಡುಬರುವ ಹಾಗೆ ವೆಂಟಿಲೇಟರಿನಲ್ಲಿ ಮೊಬೈಲ್ ಕ್ಯಾಮರಾ ಮೂಲಕ ತಾವು ಸ್ನಾನ ಮಾಡುತ್ತಿರುವ ದೃಶ್ಯಾವಳಿಗಳನ್ನು ಯಾರೋ ಚಿತ್ರೀಕರಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಇದರಿಂದ ಹೌಹಾರಿದ ಮಹಿಳೆ ಚೀರಿಕೊಂಡಾಗ ಅವರ ಪತಿ ನೆರವಿಗೆ ಧಾವಿಸಿದ್ದಾರೆ.

ತಕ್ಷಣ ಗೆಸ್ಟ್ ಹೌಸ್ ಸಿಬ್ಬಂದಿಯೂ ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿಚಾರಣೆ ನಡೆಸಿದಾಗ ನರಸಾಪುರದ ಶಾಸಕ ಕೊತ್ತಪಲ್ಲಿ ಸುಬ್ಬರಾಯ್ಡು ಅವರ ಖಾಸಗಿ ಭದ್ರತಾಧಿಕಾರಿ ಅದ್ದಾಲ ನಾಗ ಶಿವಕುಮಾರ್ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಪೊಲೀಸರು ಆ ಭದ್ರತಾಧಿಕಾರಿ ಅದ್ದಾಲ ನಾಗನನ್ನು ಬಂಧಿಸಿದ್ದು, ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+