ಇಂದು ಲೋಹದ ಹಕ್ಕಿ ನೋಡಲು ಈ ಬಸ್ ಹತ್ತಿ

ಬೆಂಗಳೂರು, ಫೆ.6: ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರು ದಕ್ಷಿಣ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳದ್ದೇ ಕಲರವ. ಇದನ್ನು ಕಣ್ತುಂಬ ನೋಡಲು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ ತಡವೇಕೆ ಈ ಬಸ್ ಹತ್ತಿ ಸಾಕು.

ಅಂದಹಾಗೆ, ಒಂಬತ್ತನೇ ಭಾರತೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2013ಕ್ಕೆ ಇಂದು ಬೆಳಗ್ಗೆ 10ಕ್ಕೆ (ಬುಧವಾರ) ರಕ್ಷಣಾ ಸಚಿವ ಎಕೆ ಆ್ಯಂಟನಿ ಚಾಲನೆ ನೀಡುವರು. ಪ್ರದರ್ಶನದಲ್ಲಿ 40ಕ್ಕೂ ಅಧಿಕ ದೇಶಗಳು ಪಾಲ್ಗೊಳ್ಳಲಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ ಪ್ರಮುಖವಾಗಿವೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯದ ವ್ಯವಸ್ಥೆ ಮಾಡಿದೆ. ವೈಮಾನಿಕ ಪ್ರದರ್ಶನ ಸಮಯಕ್ಕೆ ಸರಿಯಾಗಿ ತಲುಪುವಂತಾಗಲು ಬೆಳಗ್ಗೆ 8 ಗಂಟೆಯಿಂದ ನಗರದ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.

ಎಲ್ಲಿಂದ ಹೊರಡಲಿವೆ: ಮೆಜೆಸ್ಟಿಕ್ ಬಸ್ ನಿಲ್ದಾಣ, ಎಂಜಿ ರಸ್ತೆ ಸಮೀಪ ಮಾಣೆಕ್ ಷಾ ಪೆರೇಡ್ ಮೈದಾನ, ಹೆಬ್ಬಾಳ ರಿಂಗ್ ರಸ್ತೆ ವೃತ್ತ, ಯಲಹಂಕದಿಂದ ವಿಶೇಷ ಸಾರಿಗೆ ಸೌಲಭ್ಯ ಇದೆ. ಬೇಡಿಕೆಯನ್ನು ನೋಡಿಕೊಂಡು ಯಶವಂತಪುರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕೋರಮಂಗಲ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತಿತರ ಸ್ಥಳಗಳಿಂದಲೂ ವಿಶೇಷ ಬಸ್ ಸೌಲಭ್ಯ ಕಲ್ಪಿಸುವುದಾಗಿ ಸಂಸ್ಥೆ ವಾಗ್ದಾನ ಮಾಡಿದೆ.

ವಿಶೇಷ ದರಗಳು: ಕೆಂಪೇಗೌಡ ಬಸ್ ನಿಲ್ದಾಣದಿಂದ 26 ರೂ., ಯಲಹಂಕ ಪೊಲೀಸ್ ಠಾಣೆಯಿಂದ 15 ರೂ, ಹೆಬ್ಬಾಳ ರಿಂಗ್‌ ರೋಡ್ ಜಂಕ್ಷನ್‌ನಿಂದ 21ರೂ, ಯಶವಂತಪುರ ಬಸ್ ನಿಲ್ದಾಣ ದಿಂದ 27 ರೂ, ಕೋರಮಂಗಲ ಬಸ್ ನಿಲ್ದಾಣದಿಂದ 30 ರೂ, ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ 30 ರೂ ಹಾಗೂ ಜಯನಗರ ಬಸ್ ನಿಲ್ದಾಣದಿಂದ 27 ರೂ. ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಗಮನಾರ್ಹವೆಂದರೆ, ಸಂಸ್ಥೆಯ ಯಶವಂತಪುರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕೋರಮಂಗಲ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಇಲ್ಲಿ ಬಿಟ್ಟು, ಸಂಸ್ಥೆಯ ಬಸ್ಸೇರಬಹುದು.

ಪ್ರದರ್ಶನದ ವೇಳೆ
* ಫೆ.6, 2013: ಮಧ್ಯಾಹ್ನ 2 ರಿಂದ 5 ಗಂಟೆ
* ಫೆ.7, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.8, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.9, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.10, 2013: ಬೆಳಗ್ಗೆ 10 ರಿಂದ 5 ಗಂಟೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+