4000 ಪ್ರಾ. ಶಿಕ್ಷಕರ ನೇಮಕ: ಮಾ 2 ಕೊನೆ ದಿನ

ಬೆಂಗಳೂರು, ಫೆ.5: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಹಾತೊರೆಯುತ್ತವರಿಗೆ ಇಲ್ಲೊಂದು ಸಂತಸದ ಸುದ್ದಿ. ರಾಜ್ಯ ಸರಕಾರವು ಬರೋಬ್ಬರಿ 4,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಂಕಿತ ಹಾಕಿದೆ. ಯಾದಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು 450 ಮತ್ತು ಧಾರವಾಡ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 15 ಶಿಕ್ಷಕರ ನೇಮಕಾತಿ ನಡೆಯಲಿದೆ.

ಹೀಗೆ ನೂತನವಾಗಿ ನೇಮಕಗೊಂಡ ಶಿಕ್ಷಕರು 2013 -14ನೇ ಶೈಕ್ಷಣಿಕ ವರ್ಷದಿಂದ ಸೇವೆಗೆ ಸಿದ್ಧರಾಗಬೇಕಾಗುತ್ತದೆ. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ ಕೊರತೆಯಿರುವುದು 12,000 ಮಂದಿ. ಆದರೆ 4,000 ಮಂದಿಯನ್ನಷ್ಟೇ ನೇಮಕ ಮಾಡಿಕೊಳ್ಳಲು ಶಕ್ತ್ಯವಾಗಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

4000-primary-teachers-recruitment-30-districts-karnataka

ಮುಖ್ಯಾಂಶಗಳು:
* ಜಿಲ್ಲಾ ಮಟ್ಟದಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ.
* ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ನೇಮಕಾತಿ ನಡೆಯಲಿದೆ.
* ಅಂತರ್ಜಾಲದ ಮೂಲಕವೇ ಅರ್ಜಿ ಸಲ್ಲಿಸಬೇಕು.
* ಗಮನಿಸಿ, ಖುದ್ದು ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ.
* ಇಲಾಖೆಯ ವೆಬ್‌ ಸೈಟ್‌ www.schooleducation.kar.nic.in
* ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ. 4ರಿಂದ ಆರಂಭ. ಮಾ. 2 ಅರ್ಜಿ ಸಲ್ಲಿಕೆಗೆ ಕೊನೆ ದಿನ.
* ಮಾರ್ಚ್‌ 24ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಜಿಲ್ಲಾವಾರು ನೇಮಕಗೊಳ್ಳುವ ಶಿಕ್ಷಕರ ಸಂಖ್ಯೆ:
ರಾಮನಗರ - 160
ಮಧುಗಿರಿ - 90
ಬೆಳಗಾವಿ - 110
ಬಾಗಲಕೋಟೆ - 120
ಬಿಜಾಪುರ - 130
ಗುಲ್ಬರ್ಗಾ - 230
ಬೀದರ್‌ - 200
ರಾಯಚೂರು - 300
ಕೊಪ್ಪಳ - 225
ಧಾರವಾಡ - 15
ಕಾರವಾರ - 30
ಶಿರಸಿ - 210
ಬಳ್ಳಾರಿ - 270
ಶಿವಮೊಗ್ಗ - 150
ಕೊಡಗು - 20
ಚಿಕ್ಕೋಡಿ - 400
ಯಾದಗಿರಿ - 450
ಗದಗ, ದಾವಣಗೆರೆ ತಲಾ - 40
ಹಾಸನ, ಚಿಕ್ಕಮಗಳೂರು, ಮೈಸೂರು ತಲಾ - 70
ತುಮಕೂರು, ಕೋಲಾರ, ಮಂಡ್ಯ, ಹಾವೇರಿ, ಚಿತ್ರದುರ್ಗ ತಲಾ - 60
ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಾಮರಾಜನಗರ ತಲಾ - 100

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+