ಬಿಜೆಪಿಗೆ ಅಲ್ಪಮತ ಭೀತಿ: ಮತ್ತೆ ಸ್ಪೀಕರ್ ನಾಪತ್ತೆ

ಬಿಜಾಪುರದ ನಾಗಠಾಣಾ ಕ್ಷೇತ್ರದ ವಿಠಲ ಕಟಕದೋಂಡ ಅವರ ರಾಜೀನಾಮೆಯನ್ನು ತಾಂತ್ರಿಕ ನೆಪವೊಡ್ಡಿ ಅಂಗೀಕರಿಸದೆ ಹೋದ ಸ್ಪೀಕರ್ ಬೋಪಯ್ಯ, ಇಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ತರೀಕೆರೆ ಶಾಸಕ ಡಿಎಸ್ ಸುರೇಶ್ ಅವರು ರಾಜೀನಾಮೆ ಪತ್ರ ಹಿಡಿದು ವಿಧಾನಸೌಧಕ್ಕೆ ಬಂದಾಗ ಸ್ಪೀಕರ್ ಬೋಪಯ್ಯ ಕಚೇರಿ ಬಾಗಿಲುಮುಚ್ಚಿತ್ತು. ಇದೇ ವೇಳೆ ಸ್ಪೀಕರ್ ಕಾರ್ಯದರ್ಶಿ ಉಮೇಶ್ ಅವರೂ ರಾಜೀನಾಮೆ ಪತ್ರ ಸ್ವೀಕರಿಸಲು ನಿರಾಕರಿಸಿದ್ದಾರೆ.
ಶಾಸಕ ಡಿಎಸ್ ಸುರೇಶ್ ಅವರು ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದರಿಂದ ಪೂರ್ವನಿಗದಿಯಂತೆ ಮೊನ್ನೆ ಮೊದಲ ಕಂತಿನಲ್ಲಿ 12 ಶಾಸಕರ ಜತೆಗೂಡಿ ರಾಜೀನಾಮೆ ಕೊಡಲು ಸಾಧ್ಯವಾಗಿರಲಿಲ್ಲ.
ಈ ಮಧ್ಯೆ, ಬಿಜೆಪಿಯಿಂದ ಮತ್ತಷ್ಟು ಮಂದಿ ಕಾಂಗ್ರೆಸ್ಸಿಗೆ ತೆರಳಲು ಆಲೋಚಿಸುತ್ತಿದ್ದು, ಬಿಜೆಪಿ ಬಹುಮತ ಭೀತಿಯನ್ನು ಎದುರಿಸುತ್ತಿದೆ.


Click it and Unblock the Notifications
