ಕೋಚಿಂಗ್ ಕೇಂದ್ರ ಮಾಲೀಕನಿಂದ ಮಾನಭಂಗ, ಸೆರೆ

ಏನಾಯಿತೆಂದರೆ ಪರೀಕ್ಷೆಗಳು ಸಮೀಪಿಸುತ್ತಿವೆ. ಇನ್ನೂ ಕೋಚಿಂಗ್ ಮುಗಿಸಿಲ್ಲ ಎಂದು ಆಕ್ರೋಶಗೊಂಡ ಕೆಲ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೋಚಿಂಗ್ ಕೇಂದ್ರಕ್ಕೆ ತೆರಳಿ, ಮಾಲೀಕ ಮಚೀಂದ್ರ ಛಾಟೆಯನ್ನು ಭೇಟಿ ಮಾಡಿ, ವಿಚಾರಿಸಿದ್ದಾರೆ.
ಭೇಟಿಯ ಬಳಿಕ ಒಬ್ಬ ಪಿಯುಸಿ ಕಾಮರ್ಸ್ ವಿದ್ಯಾರ್ಥಿನಿಯು ಮತ್ತಿತರೆ ಇಬ್ಬರು ವಿದ್ಯಾರ್ಥಿನಿಯರು ಮತ್ತು ಒಬ್ಬ ಹುಡುಗನ ಜತೆಗೂಡಿ ಮಾಲೀಕ ಮಚೀಂದ್ರ ಕೊಠಡಿಗೆ ತೆರಳಿದ್ದಾರೆ. ಆ ವೇಳೆ ಬಿಸಿಯೇರಿಸಿ ವಾತಾವರಣದಲ್ಲಿ ಪರಸ್ಪರ ಮಾತಿನ ಬೈಗುಳ ನಡೆದಿದೆ.
ಆದರೆ ಕೊಠಡಿಯಿಂದ ಹೊರಬಂದ ಪಿಯುಸಿ ಕಾಮರ್ಸ್ ವಿದ್ಯಾರ್ಥಿನಿ, ಕೊಠಡಿಯಲ್ಲಿ ಛಾಟೆ ತನ್ನ ಮೇಲೆ ಬಲಾತ್ಕಾರ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಬಳಿಕ ತನ್ನ ಪೋಷಕರು ಮತ್ತು ಇತರೆ ಸಹಪಾಠಿಗಳ ಜತೆಗೂಡಿ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಬಂದಿದ್ದಾರೆ. ಪೊಲೀಸರು ಆಕೆಯ ದೂರು ಸ್ವೀಕರಿಸಿ, ಇಬ್ಬರು ಸಹಪಾಠಿಗಳ ಸಾಕ್ಷ್ಯವನ್ನು ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಕೋಚಿಂಗ್ ಕೇಂದ್ರದ ಮಾಲೀಕ ಮಚೀಂದ್ರ ವಿರುದ್ಧ ಬಲಾತ್ಕಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ. (ಪಿಟಿಐ)


Click it and Unblock the Notifications
