ಸಲ್ಮಾನ್ ಗೆ 10 ವರ್ಷ ಜೈಲು ಶಿಕ್ಷೆ ಭೀತಿ?

ಹಿಟ್ ಅಂಡ್ ರನ್ ಕೇಸ್‌ಗೆ ಶಿಕ್ಷೆ ವಿಧಿಸುತ್ತಿಲ್ಲ. ಆದರೆ, ಹತ್ಯೆ ಪ್ರಕರಣಕ್ಕೆ ಈ ಶಿಕ್ಷೆ ನೀಡಲಾಗುತ್ತದೆ ಎಂದು ಮುಂಬೈ ಕೋರ್ಟ್ ಗುರುವಾರ(ಜ.31) ಹೇಳಿದೆ. ಸಲ್ಮಾನ್ ಖಾನ್ ಅವರನ್ನು ಭಾರತೀಯ ದಂಡ ಸಂಹಿತೆ 304(II) ಪ್ರಕಾರ ವಿಚಾರಣೆಗೆ ಒಳಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಮಾಡಿದ್ದ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
47 ವರ್ಷದ ಸಲ್ಮಾನ್ ಖಾನ್ ಅವರನ್ನು ಸದ್ಯಕ್ಕೆ ಐಪಿಎಸ್ ಸೆಕ್ಷನ್ 304(1) ಅನ್ವಯವಿಚಾರಣೆಗೆ ಒಳಪಡಿಸಲಾಗಿದೆ. ನಿರ್ಲಕ್ಷ್ಯದ ಚಾಲನೆಗೆ ಕೇವಲ 2 ವರ್ಷ ಶಿಕ್ಷೆ ವಿಧಿಸಬಹುದಿತ್ತು. ಆದರೆ, ಸಲ್ಮಾನ್ ವಿರುದ್ಧ ಪ್ರಬಲ ಸಾಕ್ಷ್ಯವನ್ನು ಪೊಲೀಸರು ಒದಗಿಸಿದ್ದಾರೆ.
ಐಪಿಸಿ ಸೆಕ್ಷನ್ 304(II) ಅನ್ವಯ ದಾಖಲಾಗಿರುವ ಆರೋಪಗಳು ಸಾಬೀತಾದರೆ, ಕನಿಷ್ಠ 10 ವರ್ಷ ಸೆರೆಮನೆವಾಸ ಆಗಲಿದೆ. ಫೆ.11 ರಂದು ಸೆಷನ್ಸ್ ಕೋರ್ಟಿಗೆ ಸಲ್ಮಾನ್ ಖಾನ್ ಅವರು ಖುದ್ದು ಹಾಜರಾಗಬೇಕಿದೆ ಎಂದು ಅವರ ಪರ ವಕೀಲ ದೀಪೇಶ್ ಮೆಹ್ತಾ ಹೇಳಿದ್ದಾರೆ.
2002ರಲ್ಲಿ ಮುಂಬೈನ ಉಪನಗರದ ಬಾಂದ್ರಾದಲ್ಲಿ ರಸ್ತೆಬದಿಯಲ್ಲಿ ಮಲಗಿದ್ದವರ ಮೇಲೆ ಸಲ್ಮಾನ್ ಖಾನ್ ಅವರ ಎಸ್‌ಯುವಿ (Toyota Land Cruiser) ಕಾರು ಹರಿದಿತ್ತು. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿದ್ದವು. ಘಟನೆ ನಡೆದ ಸಂದರ್ಭದಲ್ಲಿ ಸಲ್ಮಾನ್ ಅವರು ಖುದ್ದು ವಾಹನ ಚಲಾಯಿಸುತ್ತಿದ್ದರು ಹಾಗೂ ನಶೆಯಲ್ಲಿದ್ದರು ಎಂದು ಆರೋಪಿಸಲಾಗಿದೆ. 2006ರಿಂದ ಪ್ರಕರಣ ವಿಚಾರಣೆ ನಡೆಯುತ್ತಲೇ ಇದೆ.
ಸಲ್ಮಾನ್ ಖಾನ್ ಅವರ ಮೇಲೆ ಐಪಿಸಿ ಸೆಕ್ಷನ್ 304 A, 279, 337,338 ಹಾಗೂ 427 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೈಕೋರ್ಟಿನಲ್ಲಿ ಮತ್ತೊಮ್ಮೆ ಮೇಲ್ಮನವಿ ಅರ್ಜಿ ಸಲ್ಲಿಸುವುದಾಗಿ ವಕೀಲ ಮೆಹ್ತಾ ಹೇಳಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ನಂಬಿ ಕೋಟಿಗಟ್ಟಲೆ ಹಣ ಸುರಿದಿರುವ ನಿರ್ಮಾಪಕರು ತಲೆ ಮೇಲೆ ಕೈ ಹೊತ್ತಿಕೊಂಡು ಕೂತಿದ್ದಾರೆ.(ಪಿಟಿಐ)


Click it and Unblock the Notifications
