ಪ್ರೀತಿ ಮಾಯೆಗೆ ಅನು ಅಂಟಿ, ಕಿರಣ್ ಅಂಕಲ್ ಬಲಿ

27 ವರ್ಷದ ಕಿರಣ್ ಆನೇಕಲ್‌ನ ಮರಸೂರು ಗ್ರಾಮದ ರೈಲ್ವೆ ಗೇಟ್ ಸಮೀಪದ ನೀಲಗಿರಿ ತೋಪಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪುವ ಮೊದಲು ತನ್ನ ಪ್ರೇಯಸಿ 26 ವರ್ಷದ ಅನು ತಲೆ ಹೊಡೆದು ಸಾಯಿಸಿದ್ದ ಎಂಬುದು ತಿಳಿದು ಬಂದಿದೆ.
ಮರಸೂರು ಗೇಟ್ ಬಳಿ ನಿವಾಸಿಯಾಗಿದ್ದ ಕೇರಳ ಮೂಲದ ಅನು ಹಾಗೂ ಹುಸ್ಕೂರು ಗೇಟ್‌ನ ನಿವಾಸಿ ಕಿರಣ್ ಕೊಲೆ ಇಬ್ಬರಿಗೂ ಮದುವೆಯಾಗಿದ್ದು, ಈ ಹಿಂದೆ ಪ್ರೇಮಿಗಳಾಗಿದ್ದರು.
ಸುಮಾರು 8 ವರ್ಷಗಳ ಹಿಂದೆ ನರ್ಸಿಂಗ್ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಕಾಲಿರಿಸಿದ ಅನು, ಗೋವಿಂದರಾಜು ಎಂಬುವವನನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ನಂತರ ಸರಿಯಾದ ಕೆಲಸ ಸಿಗದೆ ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗಲು ಆರಂಭಿಸಿದ್ದ ಅನುಗೆ ಕಿರಣ್ ಪರಿಚಯವಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕಿರಣ್ ಹಾಗೂ ಅನು ನಡುವೆ ಪ್ರೇಮ ಚಿಗುರೊಡೆದಿದೆ.
ಕಿರಣ್ ಜೊತೆಗಿನ ಪ್ರೇಮ ಕಾಮಕ್ಕೆ ತಿರುಗಿ ಇಬ್ಬರ ಅನೈತಿಕ ಸಂಬಂಧ ಗಟ್ಟಿಯಾಗುತ್ತಿದ್ದಂತೆ, ಈಕೆ ಗಂಡನನ್ನು ತೊರೆದು ತನ್ನ ಇಬ್ಬರು ಮಕ್ಕಳು ಕರೆದುಕೊಂಡು ಬೇರೆಡೆ ವಾಸಿಸಲು ಆರಂಭಿಸುತ್ತಾಳೆ.
ಅಷ್ಟರಲ್ಲಿ ಈ ಇಬ್ಬರ ಕಾಮದಾಟದ ಸುಳಿವು ಪಡೆದಿದ್ದ ಪತಿ ಗೋವಿಂದರಾಜು, ಪತ್ನಿಯನ್ನು ಪುನಃ ಮನೆಗೆ ಕರೆ ತಂದು ರಾಜಿ ಪಂಚಾಯಿತಿ ಮಾಡಿ ಮನೆಯಲ್ಲಿ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಮಗಳಾದ ಪ್ರಣಿತಾಳನ್ನು ಕೇರಳದ ಅಜ್ಜಿ ಮನೆಯಲ್ಲಿ ಬಿಟ್ಟು, ಹುಸ್ಕೂರು ಗೇಟ್‌ನಿಂದ ನಾಲ್ಕು ತಿಂಗಳ ಹಿಂದೆ ಮರಸೂರಿನ ಚಂದ್ರಾರೆಡ್ಡಿ ಬಿಲ್ಡಿಂಗ್‌ನಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದ.
ಇತ್ತ ಮೂರು ಮಕ್ಕಳ ತಂದೆ ಪ್ರಿಯಕರ ಕಿರಣ್ ಜೊತೆ ಅನು ಸಾಂಗತ್ಯ ಸಿಗದೆ ಒದ್ದಾಡುತ್ತಿದ್ದನು ಎನ್ನಲಾಗಿದೆ.ಆದರೂ, ಈ ಅನೈತಿಕ ಸಂಬಂಧಿಗಳು ಕೆಲ ತಿಂಗಳು ನೆಮ್ಮದಿಯಿಂದ ಇದ್ದರು ಎಂದು ತಿಳಿದು ಬಂದಿದೆ.
ನಿನ್ನೆ ದಿವಸ ಅನು ತನ್ನ ಮಗನನ್ನು ಅಂಗನವಾಡಿ ಕರೆದುಕೊಂಡು ಬರುತ್ತೇನೆ ಎಂದು ಮರಸೂರು ಗೇಟ್ ನೀಲಗಿರಿ ತೋಪಿನ ಹಾದಿ ಹಿಡಿದಿದ್ದಾಳೆ. ಈ ವಿಷಯ ಅದು ಹೇಗೋ ಕಿರಣ್ ಗೆ ಗೊತ್ತಾಗಿದೆ. ತೋಪಿನಲ್ಲಿ ಒಂಟಿಯಾಗಿ ಹೋಗುತ್ತಿದ್ದ ಅನುಳನ್ನು ಅಡ್ಡಗಟ್ಟಿದ ಕಿರಣ್ ಆಕೆಯನ್ನು ತನ್ನ ಜೊತೆಗೆ ಬರುವಂತೆ ಒತ್ತಾಯಿಸಿದ್ದಾನೆ.
ಅನು ನನ್ನ ಸಂಸಾರ ಸರಿ ಹೋಗಿದೆ ಮತ್ತೆ ಇತ್ತ ಸುಳಿಯ ಬೇಡ ಎಂದು ಪ್ರಾರ್ಥಿಸಿದ್ದಾಳೆ. ಹೋಗಲಿ ಒಂದು ಸಾರಿ ನನ್ನ ಕಾಮದಾಹ ತೀರಿಸು ಎಂದಿದ್ದಾನೆ. ಇದಕ್ಕೆ ಒಪ್ಪದ ಅನು ಮುಂದೆ ಹೆಜ್ಜೆ ಇಟ್ಟಿದ್ದಾಳೆ. ಆದರೆ, ಕಾಮದಾಹದಿಂದ ಬಳಲುತ್ತಿದ್ದ ಕಿರಣ್, ಅನುಳನ್ನು ಬಲಾತ್ಕರಿಸಿ ನಂತರ ಸಿಟ್ಟಿನಿಂದ ಆಕೆ ತಲೆಯನ್ನು ಜಜ್ಜಿ ಬಜ್ಜಿ ಮಾಡಿದ್ದಾನೆ.
ಪ್ರೇಮ ಕಾಮಕ್ಕೆ ಸಾಥ್ ನೀಡಿದ್ದ ಅನು ಮೃತದೇಹ ಕಂಡು ಭಯ, ನೋವಿನಿಂದ ವಿಚಿತ್ರವಾಗಿ ವರ್ತಿಸಿದ ಕಿರಣ್ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಕುಮಾರಸ್ವಾಮಿ. ಆನೇಕಲ್ ಠಾಣಾ ವೃತ್ತನೀರಿಕ್ಷಕ ಕಿಶೋರ್‌ಕುಮಾರ್, ಅಪರಾಧ ವಿಭಾಗದ ಪಿಎಸ್‌ಐ ವೆಂಕಟೇಶ್, ಕಾನೂನು ಮತ್ತು ಸುವ್ಯವಸ್ಥೆ ಪಿಎಸ್‌ಐ ರಾಘವೆಂದ್ರ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications
