ಏರ್ ಟೆಲ್ ಲಾಭ, ಸತತ 12ನೇ ಬಾರಿ ಕುಸಿತ

Bharti Airtel net profit declines 72% to Rs 284 cr in Q3
ಬೆಂಗಳೂರು, ಫೆ.1: ಭಾರತದ ಟೆಲಿಕಾಂ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಹೊಡೆತ ಅನುಭವಿಸಿದೆ. ಡಿಸೆಂಬರ್ 31, 2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಏರ್ ಟೆಲ್ ನಿವ್ವಳ ಲಾಭದಲ್ಲಿ ಶೇ 72 ರಷ್ಟು ಇಳಿಕೆ ಕಂಡು ಬಂದಿದೆ.

ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ ಶೇ 72ರಂತೆ 284 ಕೋಟಿ ರು ಕಳೆದುಕೊಂಡಿದೆ. ವಿದೇಶಿ ಹಣ ವಿನಿಮಯದಲ್ಲಿ ವ್ಯತ್ಯಾಸ, ತೆರಿಗೆ ಹೊರೆ, ಅಧಿಕ ಬಡ್ಡಿದರ ಭಾರದಿಂದ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ನೀಡಲು ಆಗಿಲ್ಲ ಎಂದು ಭಾರ್ತಿ ಏರ್ ಟೆಲ್ ಪ್ರಕಟಿಸಿದೆ.

ಡಿ.31, 2011ರಲ್ಲಿ ನಿವ್ವಳ ಲಾಭ ಮೂರನೇ ತ್ರೈಮಾಸಿಕದ ನಿವ್ವಳ ಲಾಭ 1,011 ರಷ್ಟಿತ್ತು. ಸತತ 12 ತ್ರೈಮಾಸಿಕದಲ್ಲಿ ಕಂಪನಿ ಲಾಭ ಪಡೆಯುವಲ್ಲಿ ವಿಫಲವಾಗಿದ್ದು, ಪ್ರತಿ ತ್ರೈಮಾಸಿಕದಲ್ಲೂ ಕುಸಿತ ಕಾಣುತ್ತಿರುವುದು ಆತಂಕಕಾರಿಯಾಗಿದೆ.

ಶುಕ್ರವಾರ (ಫೆ.1) ಬಿಎಸ್ ಇನಲ್ಲಿ ಆರಂಭದಿಂದಲೇ ಕುಸಿತ ಕಾಣುತ್ತಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ 336.45 ರು ನಂತೆ ಶೇ 2.95 ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 336.50 ರು ನಂತೆ ಶೇ 3.10 ರಷ್ಟು ಇಳಿಕೆ ಕಂಡಿದೆ. ಏರ್ ಟೆಲ್ ಷೇರುಗಳು ದಿನಪೂರ್ತಿ ಇಳಿಕೆಯಲ್ಲೇ ಸಾಗುವ ಲಕ್ಷಣಗಳು ಕಂಡು ಬಂದಿದೆ.

Q2ನಲ್ಲಿ ನಿವ್ವಳ ಲಾಭ ಕುಸಿದರೂ ನಿರೀಕ್ಷಿತ ಆದಾಯ ಗಳಿಸಿದೆ. ತ್ರೈಮಾಸಿಕದಲ್ಲಿ ಅದಾಯ ಗಳಿಕೆ ಹಾಗೂ EBITDA ಮಾರ್ಜಿನ್ ನಲ್ಲಿ ಭಾರ್ತಿ ಏರ್ ಟೆಲ್ ನಿರೀಕ್ಷಿತ ಮಟ್ಟ ಮುಟ್ಟಿತ್ತು.

ಅಕ್ಟೋಬರ್- ಡಿಸೆಂಬರ್ ತಿಂಗಳ ತ್ರೈಮಾಸಿಕದಲ್ಲಿ ನಿವ್ವಳ ಆದಾಯ ಶೇ 9.5 ರಷ್ಟು ಏರಿಕೆ ಕಂಡಿದ್ದು 20,239 ಕೋಟಿ ರು ಗಳಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಉತ್ತಮ ಪ್ರಗತಿ ಎನ್ನಬಹುದು. ಕಳೆದ ವರ್ಷ ಇದೇ ಅವಧಿಯಲ್ಲಿ 18,477 ಕೋಟಿ ರು ಮಾತ್ರ ಗಳಿಕೆಯಾಗಿತ್ತು.

ಇತ್ತೀಚಿನ ತ್ರೈಮಾಸಿಕಗಳಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ದರ ಇಳಿಕೆ ಸಮರದ ಜೊತೆಗೆ ಉತ್ಪಾದನಾ ವೆಚ್ಚವನ್ನು ಸರಿದೂಗಿಸಬೇಕಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಉತ್ತಮ ನಿರ್ವಹಣೆ ತೋರುವ ಭರವಸೆ ಇದೆ ಎಂದು ಭಾರ್ತಿ ಏರ್ ಟೆಲ್ ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾದರೂ ಭಾರ್ತಿ ಏರ್ ಟೆಲ್ ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆಯಾಗಿ ಮುಂದುವರೆದಿದೆ. ಸುಮಾರು 262.27 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಅಫ್ರಿಕಾ ದೇಶಗಳ ವಿಭಾಗದಲ್ಲಿ ಶೇ 15 ರಷ್ಟು ಪ್ರಗತಿ ಕಂಡಿದ್ದು, ಆದಾಯ 6,170 ಕೋಟಿ ರು ಹೆಚ್ಚಿದೆ.

ಭಾರತದ ಟೆಲಿಕಾಂ ಕ್ಷೇತ್ರದ ಭಾರ್ತಿ ಏರ್ ಟೆಲ್ ಸಂಸ್ಥೆಯನ್ನು ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ಸ್ಥಾನಕ್ಕೇರಿಸಿದ್ದ ಸಿಇಒ ಸಂಜಯ್ ಕಪೂರ್ ಇತ್ತೀಚೆಗೆ ಸಂಸ್ಥೆ ತೊರೆದಿದ್ದು ಮುಳುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+