ಏರೋ ಇಂಡಿಯಾ 2013 ಟಿಕೆಟ್ ಎಲ್ಲಿ ಸಿಗುತ್ತೆ?
ಬೆಂಗಳೂರು, ಜ.29: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ನಮ್ಮ ಬೆಂಗಳೂರಿನಲ್ಲಿ ಫೆಬ್ರವರಿ 6 ರಿಂದ 10 ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ ಪ್ರದರ್ಶನ ನೋಡಲು ಟಿಕೆಟ್ ಬೇಕೇ ಬೇಕು. ಟಿಕೆಟ್ ಎಲ್ಲಿ ಸಿಗುತ್ತೆ, ಪ್ರದರ್ಶನದ ವೇಳೆ ಯಾವಾಗ? ಇನ್ನಿತರ ವಿವರಗಳು ಇಲ್ಲಿದೆ.
* ಉದ್ಯಮಿ ವೀಕ್ಷಕರ ಟಿಕೆಟ್ : ಪ್ರದರ್ಶನ ಪ್ರದೇಶಕ್ಕೆ ಮಾತ್ರ : 2000 ರು/ USD 35 : ಫೆ.6-8, 2013
* ಸಾರ್ವಜನಿಕರಿಗೆ : ADVA ಪ್ರದೇಶಕ್ಕೆ ಮಾತ್ರ : 400 ರು/ USD 15 :ಫೆ.6-8, 2013
* ಸಾರ್ವಜನಿಕರಿಗೆ : ADVA ಪ್ರದೇಶಕ್ಕೆ ಮಾತ್ರ : 500 ರು/ USD 20 :ಫೆ.9-10, 2013
* ಸಾರ್ವಜನಿಕರಿಗೆ : ಪ್ರದರ್ಶನ ಪ್ರದೇಶಕ್ಕೆ ಮಾತ್ರ : 1000 ರು/ USD 30 :ಫೆ.9-10, 2013
ಪ್ರದರ್ಶನದ ವೇಳೆ
* ಫೆ.6, 2013: ಮಧ್ಯಾಹ್ನ 2 ರಿಂದ 5 ಗಂಟೆ
* ಫೆ.7, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.8, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.9, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.10, 2013: ಬೆಳಗ್ಗೆ 10 ರಿಂದ 5 ಗಂಟೆ
* ಏರೋ ಇಂಡಿಯಾಗೆ ಬರುವ ವೀಕ್ಷಕರು ಸರ್ಕಾರ ನೀಡಿರುವ ಅಧಿಕೃತ ಭಾವ ಚಿತ್ರವುಳ್ಳ ಗುರುತಿನ ಚೀಟಿ ತಮ್ಮೊಂದಿಗೆ ತರುವುದು ಕಡ್ಡಾಯ
* ಗುರುತಿನ ಚೀಟಿಗಳು- ಪಾಸ್ ಪೋರ್ಟ್, ಮತದಾರರ ಚೀಟಿ, ಡ್ರೈವಿಂಗ್ ಲೈಸನ್ಸ್..ಇತ್ಯಾದಿ
* ಟಿಕೆಟ್ ಗಳು ಆನ್ ಲೈನ್ ಹಾಗೂ ಬ್ಯಾಂಕ್ , ಫಿಕ್ಕಿ ಮತ್ತು ಯಲಹಂಕ ವಾಯುನೆಲೆಯಲ್ಲಿ ಲಭ್ಯ
* ಸಾರ್ವಜನಿಕ ಟಿಕೆಟ್ ಗಳಿಗಾಗಿ AXIS ಬ್ಯಾಂಕ್ ಬ್ರ್ಯಾಂಚ್ ಗಳು, FICCI ಬೆಂಗಳೂರು ಕಚೇರಿ ಮತ್ತು ಯಲಹಂಕ ವಾಯುನೆಲೆಯನ್ನು ಸಂಪರ್ಕಿಸಬಹುದು.
* ಆನ್ ಲೈನ್ ಮೂಲಕ ಟಿಕೆಟ್ ಪಡೆಯಲು ಏರೋ ಇಂಡಿಯಾ ಅಧಿಕೃತ ವೆಬ್ ತಾಣವನ್ನು ವೀಕ್ಷಿಸಿ
* ಪ್ರದರ್ಶನದ ವೇಳೆಗೂ ಒಂದು ಗಂಟೆ ಮುನ್ನ ಪ್ರವೇಶ ದ್ವಾರಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
* ಪ್ರದರ್ಶನ ಬರುವ ವೇಳೆ ಗುರುತಿನ ಚೀಟಿ ತೋರಿಸಿ ಎಂಟ್ರಿ ಪಾಸ್ ಪಡೆಯತಕ್ಕದ್ದು.
* ಫೆ.6-8, 2013ರ ತನಕ ಪ್ರದರ್ಶನ ಪ್ರದೇಶಕ್ಕೆ 16 ವರ್ಷ ವಯೋಮಿತಿ ಮಕ್ಕಳಿಗೆ ಪ್ರವೇಶ ನಿಷಿದ್ಧಗೊಳಿಸಲಾಗಿದೆ.
* ಆಹಾರ ಪದಾರ್ಥಗಳು, ಆಯುಧಗಳು, ಆಟಿಕೆ ಗನ್ , ಲೇಸರ್ ಪಾಯಿಂಟರ್ಸ್, ಪಟಾಕಿ ಮುಂತಾದ ಸಾಮಾಗ್ರಿಗಳನ್ನು ನಿಷೇಧಿಸಲಾಗಿದೆ.
* 5 ವರ್ಷ ವಯೋಮಿತಿಯೊಳಗಿನ ಮಕ್ಕಳಿಗೆ ನೋಂದಣಿ ಅಗತ್ಯವಿರುವುದಿಲ್ಲ.
* ಆದರೆ, 5-16 ವರ್ಷ ವಯೋಮಿತಿ ಮಕ್ಕಳಿಗೆ ಶಾಲಾ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.













Click it and Unblock the Notifications