ಕೈ ತುಂಬಾ ಸಂಬಳ: ನಮ್ಮ ಬೆಂಗಳೂರೇ ಬೆಸ್ಟ್

Posted By:
Subscribe to Oneindia Kannada
Bangalore best salary paying city in India
ಬೆಂಗಳೂರು, ಜ.29: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ 'ಕೈ ತುಂಬಾ ಸಂಬಳ ನಗರ' ಎಂಬ ಬಿರುದು ಉಳಿಸಿಕೊಂಡಿದೆ. ಪುಣೆ ಹಾಗೂ ಮುಂಬೈ ನಗರಗಳು ತೀವ್ರ ಪೈಪೋಟಿ ನಡುವೆ ಬೆಂಗಳೂರನ್ನು ಸೋಲಿಸಲು ಸಾಧ್ಯವಾಗಿಲ್ಲ.

ನೇಮಕಾತಿ ಕ್ಷೇತ್ರದ ಅಗ್ರ ಸಂಸ್ಥೆಗಳಾದ MyHiringClub.com ಹಾಗೂ FlikJobs.com ನಡೆಸಿದ ಇತ್ತೀಚಿನ ಸಮೀಕ್ಷೆ ಪ್ರಕಾರ 2012ರಲ್ಲಿ ಬೆಂಗಳೂರಿನ ಸಂಸ್ಥೆಗಳು ನೀಡಿದ ಸಂಬಳದ ಸರಾಸರಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ.

ಸಮೀಕ್ಷೆ ಪ್ರಕಾರ ಬೆಂಗಳೂರಿನ ಸರಾಸರಿ ಸಂಬಳದ ಸರಾಸರಿ 6,13,100 ರು. ನಷ್ಟಿದೆ. ಇದೇ ಅವಧಿಯಲ್ಲಿ ಪುಣೆಯ ಸಂಬಳದ ಸರಾಸರಿ 5,42,432 ರು ನಷ್ಟಿದೆ. ಮುಂಬೈನ ವೃತ್ತಿಪರರ ಸಂಬಳದ ಸರಾಸರಿ 5,14,607 ರು ನಷ್ಟಿದೆ.

2012 ರ ಅವಧಿಯ ಲೆಕ್ಕಾಚಾರದ ಟಾಪ್ ಟೆನ್ ಪಟ್ಟಿಯಲ್ಲಿ ಅಚ್ಚರಿಯಾಗಿ ಜೈಪುರ ಎಂಟ್ರಿ ಕೊಟ್ಟಿದೆ. ಇದುವರೆವಿಗೂ ಟಾಪ್ 10 ಪಟ್ಟಿಯಲ್ಲಿದ್ದ ಲಖ್ನೋ ಹೊರಬಿದ್ದಿದೆ ಎಂದು ಸಮೀಕ್ಷೆ ಹೇಳಿದೆ.

ಬೆಂಗಳೂರಿನ ಮಾಹಿತಿ ಮತ್ತು ತಂತ್ರಜ್ಞಾನ(IT) ವೃತ್ತಿಪರರ ಸಂಬಳದ ಪರಿಮಿತಿ 3,96,935 ರು. ನಿಂದ 17,26,551 ರು ನಷ್ಟಿದೆ. ಪುಣೆಯಲ್ಲಿ ಈ ಪರಿಮಿತಿ 3,28,412 ರು. ನಿಂದ 16,17,959 ರು ನಷ್ಟಿದೆ.

ಆದರೆ, ಮುಂಬೈ ಎಂದಿನಂತೆ ಮಾರುಕಟ್ಟೆ(ಸೇಲ್ಸ್) ವಿಭಾಗದ ವೃತ್ತಿಪರರಿಗೆ 2012ರಲ್ಲಿ ಉತ್ತಮ ಸಂಬಳ ನೀಡಿದೆ. ಸಂಬಳದ ಪರಿಮಿತಿ 3,32,412 ರಿಂದ 16,13,510 ರು ತನಕ ಇದೆ.

ಉತ್ತಮ ಸಂಬಳ ನೀಡುವ ಮೂಲಕ ಉದ್ಯೋಗಿಗಳನ್ನು ಪ್ರಸನ್ನಗೊಳಿಸಿ ಹೆಚ್ಚಿನ ಕಾರ್ಯಕ್ಷಮತೆ ಹೆಚ್ಚಿಸುವುದು ಮಾಮೂಲಿ ವಿಷಯವಾಗಿದೆ.

ಆದರೆ, ಉದ್ಯೋಗಿಗೆ ಸಂಬಳವೇ ಎಲ್ಲಾ ಆಗಿರುವುದಿಲ್ಲ. ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ವಾತಾವರಣ(ಕಚೇರಿ ಒಳಗೂ ಹೊರಗೂ), ಸಿಬ್ಬಂದಿಗಳ ಸೇವಾ ನಿಷ್ಠತೆ ಎಲ್ಲವೂ ಉತ್ತಮ ಸಂಬಳ ನೀಡಲು ಪ್ರೇರೇಪಿಸುತ್ತದೆ.

ಹೀಗಾಗಿ ಉತ್ತಮ ಸಂಬಳ ನೀಡುವ ನಗರಗಳ ಪೈಕಿ ಬೆಂಗಳೂರು ಮತ್ತೊಮ್ಮೆ ಟಾಪ್ ಸ್ಥಾನದಲ್ಲೇ ಉಳಿದಿದೆ ಎಂದು MyHiringClub.com ಹಾಗೂ FlikJobs.com ಸಿಇಒ ರಾಜೇಶ್ ಕುಮಾರ್ ಹೇಳಿದ್ದಾರೆ.

ಸುಮಾರು 18 ಪ್ರಮುಖ ನಗರಗಳ 2189 ಉದ್ಯೋಗಿಗಳ ಅಭಿಮತವನ್ನು ಪಡೆದು ಈ ಸಮೀಕ್ಷೆಯನ್ನು ಸಮೀಕರಿಸಲಾಗಿದೆ ಎಂದು MyHiringClub ಸಂಸ್ಥೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore continues to lead as the best salary paying city in India followed by Pune and Mumbai.According to a recent survey conducted by recruitment tendering platform MyHiringClub.com and FlikJobs.com,
Please Wait while comments are loading...