ಮಡಿವಾಳದಲ್ಲಿ ಹಿಟ್ ಅಂಡ್ ರನ್ : ಟೆಕ್ಕಿ ಬಲಿ

ವೈಟ್ ಫೀಲ್ಡ್ ಐಟಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 23 ವರ್ಷದ ಪುನೀತ್ ಜೈನ್ ತಮ್ಮ ಹಿರಿಯ ಸಹೋದರನ ಜತೆ ಬೈಕಿನಲ್ಲಿ ಹೋಗುತ್ತಿದ್ದಾಗ ನಿನ್ನೆ ಮಧ್ಯಾಹ್ನ 12.30ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೈಕ್ ಓಡಿಸುತ್ತಿದ್ದ ಸುನೀತ್ ಜೈನ್ (27) ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಳೇಕಹಳ್ಳಿಯ ನಿವಾಸಿಗಳಾದ ಸಹೋದರರು ಮಡಿವಾಳದಲ್ಲಿರುವ ಸ್ನೇಹಿತರ ಮನೆಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಡಿವಾಳ ಚೆಕ್ ಪೋಸ್ಟ್ ಬಳಿ ಅಪರಿಚಿತ ವಾಹನವೊಂದು ಇವರ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಆದರೆ ಅಪಘಾತದ ನಂತರ ಅಪರಿಚಿತ ವಾಹನ ನಾಪತ್ತೆಯಾಗಿದೆ.
Hit and run ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications