ಬೆಂಗಳೂರು ಬಾನಲ್ಲಿ ಉಕ್ಕಿನ ಹಕ್ಕಿಗಳ ಕಲರವ
ಬೆಂಗಳೂರು, ಜ.26: ವಿಶ್ವದಲ್ಲೇ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜುಗೊಳ್ಳುತ್ತಿದೆ. ಫೆಬ್ರವರಿ 6 ರಿಂದ 10 ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. 40 ದೇಶಗಳು ತಮ್ಮ ಆಧುನಿಕ ಯುದ್ದ ವಿಮಾನಗಳನ್ನು ಹಾಗೂ ವೈಜ್ಞಾನಿಕ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಸಲಕರಣೆಗಳನ್ನು ಪ್ರದರ್ಶಿಸಲಿವೆ.
ಈ ಬಾರಿ ಪ್ರದರ್ಶನದಲ್ಲಿ ದೇಶಿಯ ನಿರ್ಮಿತ ನಿಶಾಂತ್ ಮತ್ತು ಕ್ಷಿಪಣಿ ಉಡಾವಣಾ ವಾಹನಗಳು ಪ್ರಮುಖ ಆಕರ್ಷಣೆ. ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ.ಸಾರಸ್ವತ್, ಏರೋ ಇಂಡಿಯಾ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟ ಜಂಟಿಯಾಗಿ ಆಯೋಜಿಸಿರುವ ಈ ಅಂತಾರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ ಪ್ರದರ್ಶನಕ್ಕೆ ಫೆ.6 ರಂದು ಕೇಂದ್ರ ರಕ್ಷಣಾ ಇಲಾಖೆ ಸಚಿವ ಎ.ಕೆ.ಆಂಟನಿ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಕ್ಷಣಾ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಗೂ ವಿದೇಶಿ ರಕ್ಷಣಾ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 40 ದೇಶಗಳು ಭಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಪ್ರದರ್ಶನದಲ್ಲಿ 40 ದೇಶಗಳು ಭಾಗಿಯಾಗುತ್ತಿವೆ. ಸುಮಾರು 875 ಗಣ್ಯರು ಭಾಗವಹಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಈ ಬಾರಿ ಮಹಿಳಾ ಗಣ್ಯರು ಮತ್ತು ವಿದ್ಯಾರ್ಥಿಗಳು ಅಧಿಕ ಪ್ರಮಾಣದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಭಾರತೀಯ ಸೇನೆ, ನೌಕಾ ದಳ, ಹೆಚ್‌ಎಎಲ್, ಬಿಇಎಲ್, ಖಾಸಗಿ ಕೈಗಾರಿಕೆ, ವಿವಿಧ ಸಂಶೋಧನಾ ಅಕಾಡೆಮಿಗಳಿಂದ ಸುಮಾರು 725 ಗಣ್ಯವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ. ವಿವಿಧ ದೇಶದಿಂದ 25 ವಿಶೇಷ ಗಣ್ಯ ವ್ಯಕ್ತಿಗಳು ಬರಲಿದ್ದಾರೆ ಎಂದರು.
ಚೀನಾ ಇಲ್ಲ : ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ ದೇಶಗಳ ಪ್ರಮುಖ ಪಟ್ಟಿಯಲ್ಲಿ ರಷ್ಯಾ, ಅಮೆರಿಕ, ಫ್ರಾನ್ಸ್, ಬ್ರಿಟನ್,ಇಸ್ರೇಲ್, ಇಟಲಿ, ಬೆಲ್ಜಿಯಂ, ಆಸ್ಟ್ರೇಲಿಯಾ, ಉಕ್ರೇನ್, ಜೆಕ್ ಗಣರಾಜ್ಯ, ಜಪಾನ್, ನಾರ್ವೆ, ದಕ್ಷಿಣಆ?ಅP, ಸ್ಪೇನ್, ಸ್ವಿಡ್ಜರ್‌ಲ್ಯಾಂಡ್, ಬ್ರೆಜಿಲ್, ಕೆನಡಾ, ಯುಎಇ, ರೊಮೇನಿಯಾ, ಸ್ವೀಡನ್, ಸಿಂಗಾಪುರ ಸೇರಿದಂತೆ ಒಟ್ಟು 40 ದೇಶಗಳು ಭಾಗವಹಿಸುತ್ತಿವೆ. ಆದರೆ, ನೆರೆ ರಾಷ್ಟ್ರ ಚೀನಾ ದೇಶವು ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲು ಮುಂದೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
700 ಮಳಿಗೆಗಳು : ಇದೇ ಮೊದಲ ಬಾರಿಗೆ ಏರೋ ಇಂಡಿಯಾ ಪ್ರದರ್ಶನದಲ್ಲಿ 700ಕ್ಕೂ ಅಧಿಕ ಮಳಿಗೆಗಳು ಪ್ರಾರಂಭವಾಗಲಿವೆ. ಈ ಬಾರಿ ಸುಮಾರು 500ಕ್ಕೂ ಅಧಿಕ ದೇಶ ಮತ್ತು ವಿದೇಶಗಳ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಗೊಳಿಸಲಿವೆ. ಈ ಪೈಕಿ ಅಧಿಕ ಪ್ರಮಾಣದಲ್ಲಿ ಯುದ್ದ ವಿಮಾನಗಳಿಗೆ ಸಂಬಂಧಪಟ್ಟ ಹಾಗೂ ವೈಮಾನಿಕ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಸಲಕರಣೆಗಳು ಪ್ರದರ್ಶನಗೊಳ್ಳಲಿವೆ.
ಈ ಬಾರಿ ಒಳಾಂಗಣ ಪ್ರದರ್ಶನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ ಡಿಒ) 18 ಮುಖ್ಯ ಕೇಂದ್ರಗಳನ್ನು ಪ್ರಾರಂಭಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ವಿಮಾನ ವ್ಯವಸ್ಥೆಗಳು, ಕ್ಷಿಪಣಿ ಪದ್ಧತಿ, ವೈಮಾನಿಕ ವಿತರಣೆ, ವಿದ್ಯುನ್ಮಾನ ಯುದ್ಧ ವಿಮಾನಗಳು ಪ್ರದರ್ಶನಗೊಳ್ಳಲಿವೆ.
ತೇಜಸ್ ಮುಖ್ಯ ಆಕರ್ಷಣೆ ದೇಶಿಯ ನಿರ್ಮಿತ ತೇಜಸ್ ಯುದ್ದ ವಿಮಾನ ಇಲ್ಲಿಯವರೆಗೆ ದೋಷರಹಿತ 1986 ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದು ಈ ಬಾರಿ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಲಿದೆ. ಈಗಾಗಲೇ ಭಾರತೀಯ ವಾಯುಪಡೆ 40 ಲಘು ಯುದಟಛಿ ವಿಮಾನ ತಯಾರಿಕಾ ಪ್ರಕ್ರಿಯೆಯನ್ನು ಹೆಚ್‌ಎಎಲ್‌ಗೆ ಪೂರ್ಣಗೊಳಿಸುವ ಹಂತಕ್ಕೆ ತಂದಿದೆ. ಈ ಪ್ರದರ್ಶನದಲ್ಲಿ ಹಾರಾಟ ನಡೆಸುವ ಸಾಧ್ಯತೆಯಿದೆ ಎಂದರು.
ಫೆ. 6-8: ಉದ್ದಿಮೆ ದಾರರಿಗೆ ಟಿಕೇಟ್ ದರ 2000 ರು. ಪ್ರದರ್ಶನ ಸ್ಥಳ ಮಾತ್ರ, ಸಾರ್ವಜನಿಕರಿಗೆ ಏರೋಶೋ ವೀಕ್ಷಣೆ ಪ್ರದೇಶ 400 ರು. ಫೆ.9-10 ಸಾರ್ವಜನಿಕರಿಗೆ ಏರೋ ಶೋ 500 ರು. ಸಾರ್ವಜನಿಕರಿಗೆ ಪ್ರದರ್ಶನ ಸ್ಥಳ ಮಾತ್ರ 1000 ರು.












Click it and Unblock the Notifications