ಪ್ರಧಾನಿ ಹುದ್ದೆಗೆ ರೇಸ್ : ಮೋದಿ ಮುಂದೆ, ರಾಹುಲ್ ಹಿಂದೆ

Modi wins race for PM's post against Rahul: Survey
ಬೆಂಗಳೂರು, ಜ.25 : ನರೇಂದ್ರ ಮೋದಿ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಲಿ ಬಿಡಲಿ, ಮೋದಿ ಮಾತ್ರ ಎಲ್ಲಾ ಸಮೀಕ್ಷೆಗಳಲ್ಲೂ ರಾಹುಲ್ ಗಾಂಧಿಕ್ಕಿಂತ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ.

ಗುಜರಾತಿನಲ್ಲಿ ನಾಲ್ಕನೇ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಹುದ್ದೆ ರೇಸ್ ನಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರು ಸೂಕ್ತ ಅಭ್ಯರ್ಥಿ ಎಂದು ಶೇ 48ರಷ್ಟು ಜನ ಹೇಳಿದ್ದಾರೆ. ರಾಹುಲ್ ಗಾಂಧಿಗೆ ಶೇ 18ರಷ್ಟು ಮತಗಳು ಮಾತ್ರ ಸಿಕ್ಕಿದೆ. ಹಾಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶೇ 7ರಷ್ಟು ಮತಗಳು ಮಾತ್ರ ಸಿಕ್ಕಿದೆ.

ಇತ್ತೀಚೆಗೆ ಜೈಪುರದಲ್ಲಿ ನಡೆದ ಚಿಂತನ ಶಿಬರದಲ್ಲಿ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಉಪಾಧ್ಯಕ್ಷ ಹುದ್ದೆಗೇರಿಸಲಾಗಿತ್ತು. ಕಾಂಗ್ರೆಸ್ ನಲ್ಲಿ ನಂ.2 ಸ್ಥಾನಕ್ಕೇರಿದ ರಾಹುಲ್ ಅವರ ಪರ ಜನ ಮತ ಹಾಕಲು ಇಚ್ಛಿಸಿಲ್ಲ ಎಂದು ಸಮೀಕ್ಷೆ ಹೇಳಿದೆ.

ಎಬಿಸಿ ನ್ಯೂಸ್ ನೆಲ್ಸನ್ ಸಂಸ್ಥೆ ನಡೆಸಿದ ಈ ಸಮೀಕ್ಷೆ ಸುಮಾರು ದೇಶದ 28 ನಗರಗಳಲ್ಲಿ ನಡೆಸಲಾಯಿತು. ಸುಮಾರು 9 ಸಾವಿರಕ್ಕೂ ಅಧಿಕ ಜನ ಉತ್ಸಾಹದಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮತ ಹಾಕಿದ್ದರು.

ಇದಲ್ಲದೆ, ಮೂರನೇ ಬಾರಿಗೆ ದೇಶವನ್ನು ಆಳುವ ಕನಸು ಹೊತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೂ ಕಹಿ ಸುದ್ದಿ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ನೆಲಕಚ್ಚಲಿದ್ದು, ಎನ್ ಡಿಎ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ಪ್ರಕಾರ ಶೇ 22 ರಷ್ಟು ಮತಗಳು ಮಾತ್ರ ಯುಪಿಎ ಪರ ಬಂದಿದ್ದರೆ, ಎನ್ ಡಿಎ ಶೇ 39 ರಷ್ಟು ಮತಗಳು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+