ಹಿಂದೂಗಳ ವಿರುದ್ದ ವಿಷ ಕಕ್ಕಿದ ಮತ್ತೊಬ್ಬ ಶಾಸಕ

ಮಜಿಲಿಸ್ - ಇ - ಇತ್ತೆಹಾದುಲ್ - ಮುಸ್ಲಿಮೀನ್ (MIM) ಪಕ್ಷದ ಶಾಸಕ ಮತ್ತು ಒವೈಸಿ ಕುಟುಂಬದವನೇ ಆದ ಹೈದರಾಬಾದ್ ನಗರ ಚಾರ್ಮಿನಾರ್ ಕ್ಷೇತ್ರದ ಶಾಸಕ ಅಹಮದ್ ಪಾಶಾ ಖಾದ್ರಿ ಹಿಂದೂಗಳ ವಿರುದ್ದ ಅವಹೇಳನಾಕಾರಿ ಭಾಷಣ ಮಾಡಿದ್ದಾನೆ.
ಆಂಧ್ರದ ಕರೀಂ ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಉರ್ದು ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತದ್ದ ಖಾದ್ರಿ, ಆಂಧ್ರ ವಿಧಾನಸಭೆ (ನಿಜಾಮರ ಕಾಲದ ಕಟ್ಟಡ) ಎದುರು ಇರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಸ್ಥಾಪನೆ ಬಗ್ಗೆ ಕೂಡ ಕೊಂಕು ಮಾತನ್ನು ಆಡಿದ್ದಾನೆ.
ಖಾದ್ರಿ ಭಾಷಣದ ಸಾರಾಂಶ ಹೀಗಿದೆ " ಎತ್ತರದ ಕುತುಬ್ ಮಿನಾರ್, ಸುಂದರ ತಾಜ್ ಮಹಲ್, ಐತಿಹಾಸಿಕ ಕೆಂಪು ಕೋಟೆ, ಹೈದಾರಾಬಾದಿನ ಚಾರ್ಮಿನಾರ್ ಯಾರು ಕಟ್ಟಿದ್ದು? ಎಲ್ಲವನ್ನೂ ನಮ್ಮವರೇ ಕಟ್ಟಿದ್ದು.
ಬಹುಸಂಖ್ಯಾತರಾದ ನೀವು ಭಾರತಕ್ಕೆ ಏನು ಮಾಡಿದ್ದೀರಿ? ಹಿಂದೂಸ್ತಾನಕ್ಕೆ ನಿಮ್ಮ ಕೊಡುಗೆಯೇನು? ಕೊಡುಗೆ ಏನಿದ್ದರೂ ನಮ್ಮವರದ್ದೇ. ಇಂದು ಭಾರತದಲ್ಲಿರುವುದೆಲ್ಲಾ ನಮ್ಮ ಗುರುತುಗಳು, ನಮ್ಮವರು ಕಟ್ಟಿಸಿದ್ದು.
ಆಂಧ್ರ ವಿಧಾನಸಭೆ ಇರುವ ಕಟ್ಟಡ ನಿಜಾಮರದ್ದು. ಅದು ಕೂಡಾ ನಮ್ಮವರದ್ದೇ. ಕಟ್ಟಡದ ಮುಂದೆ ಗಾಂಧಿ ಪ್ರತಿಮೆ ಸ್ಥಾಪನೆಗೆ ನಮ್ಮ ಆಕ್ಷೇಪವಿದೆ" ಎಂದಿದ್ದಾನೆ.
ಖಾದ್ರಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಇದು ದೇಶಕ್ಕೆ ಮತ್ತು ಮಹಾತ್ಮ ಗಾಂಧಿಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.
ಬಿಜೆಪಿ ಕರೀಂ ನಗರ ಜಿಲ್ಲಾ ಘಟಕ ಖಾದ್ರಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಈ ಮಧ್ಯೆ ಬಂಧನದಲ್ಲಿರುವ ಒವೈಸಿ ಪ್ರಚೋದನಕಾರಿ ಭಾಷಣದ ಸಿಡಿಯಲ್ಲಿರುವುದು ನನ್ನ ಧ್ವನಿಯಲ್ಲ ಎಂದು ಉಲ್ಟಾ ಹೊಡೆದಿದ್ದಾನೆ.












Click it and Unblock the Notifications