ಮುಂಬೈ ದಾಳಿ ಉಗ್ರ ರಾಣಾಗೆ ಜೀವಾವಧಿ ಶಿಕ್ಷೆ

ಮುಂಬೈ ದಾಳಿ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಕಳೆದ ತಿಂಗಳು ಎಫ್‌ಬಿಐ ರಾಣಾ ಮತ್ತು ಅಮೆರಿಕದ ಪ್ರಜೆ ಡೇವಿಡ್ ಕೋಲ್‌ಮನ್ ಹೆಡ್ಲಿಯನ್ನು ಬಂಧಿಸಿತ್ತು.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾಗೆ ಭಾರತದ ವಿರುದ್ಧ ಯಾವುದೇ ದುಷ್ಟ ಆಲೋಚನೆ ಇರಲಿಲ್ಲ ಎಂದು ರಾಣಾ ವಕೀಲ ಪ್ಯಾಟ್ರಿಕ್ ಬ್ಲೆಗೆನ್ ಹೇಳಿದ್ದರು.
ಆದರೆ, ಮುಂಬೈ ದಾಳಿಯಲ್ಲಿ ರಾಣಾ ಕೈವಾಡ ಇರುವುದು ಸಾಬೀತಾಗಿರುವುದರಿಂದ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ವಕೀಲರು ವಾದಿಸಿದರು. ಕೊನೆಗೆ ವಾದ ಪ್ರತಿವಾದ ಆಲಿಸಿದ ಯುಎಸ್ ಜಿಲ್ಲಾ ನ್ಯಾ. ಹ್ಯಾರಿ ಡಿ ಲೈನೆನ್ ವೆಬೆರ್ ಅವರು 14 ವರ್ಷಗಳ ಶಿಕ್ಷೆಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಮಾಹಿತಿ ಒದಗಿಸಿರುವುದು, ಮುಂಬೈ ದಾಳಿಯಲ್ಲಿ ಡೇವಿಡ್ ಹೆಡ್ಲಿಗೆ ಸಹಕರಿಸಿದ ಗುರುತರ ಆರೋಪಗಳು ತಹವರ್ ರಾಣಾಗೆ ಮೇಲಿದೆ.












Click it and Unblock the Notifications