ಮಾಧ್ಯಮಗಳಿಗೆ ದೊಡ್ಡ ನಮಸ್ಕಾರ ಹಾಕಿದ ಸೋಮಣ್ಣ

I will not quit BJP, Minister Somanna
ಬೆಂಗಳೂರು, ಜ 18: ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಇದೆಲ್ಲಾ ಊಹಾಪೋಹ. ಇದೆಲ್ಲಾ ಮಾಧ್ಯಮದವರ ಸೃಷ್ಟಿ,

ನಿಮ್ಮ ವರದಿಗಳಿಗೆ ನನ್ನ ಅಸಮಧಾನವಿದೆ ಎಂದು ವಸತಿ ಸಚಿವ ಸೋಮಣ್ಣ ಮಾಧ್ಯಮಗಳಿಗೆ ದೊಡ್ಡ ನಮಸ್ಕಾರ ಹಾಕಿ ಕೈಮುಗಿದ ಘಟನೆ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ (ಜ 18) ನಡೆಡಿದೆ.

ಬೆಂಗಳೂರು ನಗರ ವ್ಯಾಪ್ತಿಯ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೋಮಣ್ಣ, ರಾಜ್ಯದ ಜನತೆ ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ.

ನಾನು ಬಿಜೆಪಿ ಬಿಡುವುದಿಲ್ಲ, ನನಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂದು ಸೋಮಣ್ಣ ಹೇಳಿದ್ದಾರೆ.

ಸೋಮಣ್ಣನೇ ಬೇರೆ.. ಸೋಮಣ್ಣನ ಕೆಲಸವೇ ಬೇರೆ.. ಸೋಮಣ್ಣನ ಸ್ಟೈಲೇ ಬೇರೆ, ಬಿಜೆಪಿ ಬಿಡುವ ವಿಷಯ ನನ್ನ ಮನಸಿನಲ್ಲಿ ಇನ್ನೂ ಹೊಳೆಯಲಿಲ್ಲ.

ಅದು ಹೇಗೆ ಬಿಜೆಪಿ ಬಿಡುತ್ತೇನೆ ಎಂದು ಮಾಧ್ಯಮದವರು ವರದಿ ಮಾಡಿದರೋ. ನಿಮಗೊಂದು ದೊಡ್ಡ ನಮಸ್ಕಾರಪ್ಪಾ ಎಂದು ಸೋಮಣ್ಣ ಮಾಧ್ಯಮದವರಿಗೆ ಮತ್ತೊಮ್ಮೆ ನಮಸ್ಕಾರ ಹಾಕಿದರು.

ಬಿಜೆಪಿಯ ಆಡಳಿತದ ಅವಧಿಯಲ್ಲಿ ರಾಜ್ಯ ಬಹಳಷ್ಟು ಅಭಿವೃದ್ದಿಯನ್ನು ಕಂಡಿದೆ. ಇದನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮದು.

ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಈ ಸಂದರ್ಭದಲ್ಲಿ ಬೆಂಗಳೂರು ನಗರ ಶಾಸಕರಲ್ಲಿ ವಿನಂತಿಸಿ ಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+