ಆಗಸದಲ್ಲಿ ವಿಮಾನದ ರೆಕ್ಕೆಗೆ ಸಿಕ್ಕಿ ಹೆಬ್ಬಾವು ಸಾವು

ಕ್ವೀನ್ಸ್‌ಲ್ಯಾಂಡ್, ಜ. 11 : ಸ್ಯಾಮ್ಯುಯೆಲ್ ಜಾಕ್ಸನ್ ನಟಿಸಿದ್ದ, 2006ರಲ್ಲಿ ಬಿಡುಗಡೆಯಾಗಿದ್ದ ಥ್ರಿಲ್ಲರ್ ಚಿತ್ರ 'ಸ್ನೇಕ್ಸ್ ಇನ್ ಅ ಪ್ಲೇನ್' ಚಿತ್ರ ನೀವು ನೋಡಿರಬಹುದು. ಸಾವಿರಾರು ವಿಷಪೂರಿತ ಹಾವುಗಳು ವಿಮಾನ ಹಾರುತ್ತಿದ್ದಾಗಲೇ ದಾಳಿ ಮಾಡಿ ತಲ್ಲಣ ಉಂಟು ಮಾಡಿದ್ದ ಚಿತ್ರ ಎಂಥವರನ್ನೂ ಮೈನವಿರೇಳುವಂತೆ ಮಾಡಿತ್ತು.

ಅಂಥದೇ ಒಂದು ಘಟನೆ, ಆದರೆ ಅಷ್ಟು ಭಯಾನಕವಲ್ಲದ ಘಟನೆ ನಿಜಜೀವನದಲ್ಲಿಯೂ ಗುರುವಾರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ವಿಮಾನ ಹಾರುತ್ತಿದ್ದಾಗಲೇ ರೆಕ್ಕೆಗೆ ಅಂಟಿಕೊಂಡಿದ್ದ ಮೂರು ಮೀಟರ್ ಉದ್ದದ ಹೆಬ್ಬಾವೊಂದು ಎರಡು ಗಂಟೆಗಳ ಕಾಲ ರೆಕ್ಕೆಗೇ ಅಂಟಿಕೊಂಡು ಜೀವನ್ಮರಣದ ಹೋರಾಟ ನಡೆಸಿ ಕೊನೆಗೆ ಅಸುನೀಗಿದ ಘಟನೆ ನಡೆದಿದೆ.

ಕ್ವಿನ್ಸ್‌ಲ್ಯಾಂಡ್ ನಗರದಿಂದ ಪೋರ್ಟ್ ಮೋರೆಸ್ಬಿಗೆ ಕಾಂಟಾಸ್ ಜೆಟ್ ವಿಮಾನ ಪಯಣ ಬೆಳೆಸಿತ್ತು. ವಿಮಾನ ಆಗಸದಲ್ಲಿ ಉತ್ತುಂಗದಲ್ಲಿದ್ದಾಗ ಹಿಂಬದಿಯ ರೆಕ್ಕೆಗೆ ಏನೋ ತಗುಲಿಕೊಂಡಿರುವುದು ಕೆಲ ಪ್ರಯಾಣಿಕರ ಗಮನಕ್ಕೆ ಬಂದಿದೆ. ಸರಿಯಾಗಿ ಗಮನಿಸಿದಾಗ ಅದು ಹೆಬ್ಬಾವು. ರೆಕ್ಕೆಯನ್ನು ಗಟ್ಟಿಯಾಗಿ ಹಿಡಿದಿದ್ದ ಹೆಬ್ಬಾವು ವಿಪರೀತ ಚಳಿ ಮತ್ತು ವಿಷಮ ಗಾಳಿಗೆ ಸಿಲುಕಿ ಓಲಾಡುತ್ತಿತ್ತು. ಆದರೆ ಪೋರ್ಟ್ ಮೋರೆಸ್ಬಿಗೆ ಬಂದಾಗ ಅಸುನೀಗಿತ್ತು ಎಂದು ಕಾಂಟ್ಸ್ ವಕ್ತಾರ ಹೇಳಿದ್ದಾರೆ.

Snake clings to Quantas plane wing, dies

ವಿಮಾನದ ಮುಂದಿನ ಭಾಗದಲ್ಲಿ ಕುಳಿತ ಪ್ರಯಾಣಿಕರಿಗೆ ಹೆಬ್ಬಾವು ರೆಕ್ಕೆಗೆ ಅಂಟಿಕೊಂಡಿರುವ ಸಂಗತಿ ಗಮನಕ್ಕೆ ಬಂದಿಲ್ಲ. ಹಿಂದಿನವರಿಗೆ ಮಾತ್ರ ತಿಳಿದುಬಂದಿದೆ. ಎಲ್ಲರ ಗಮನ ಹಾವಿನತ್ತಲೇ ನೆಟ್ಟಿತ್ತು ಮತ್ತು ವಿಮಾನದ ರೆಕ್ಕೆಗೆ ಹೇಗೆ ಸಿಕ್ಕಿಕೊಂಡಿತು ಎಂಬ ಕುರಿತೇ ಚರ್ಚೆ ನಡೆಯುತ್ತಿತ್ತು ಎಂದು ಒಬ್ಬ ಪ್ರಯಾಣಿಕ ರಾಬರ್ಟ್ ವೇಬರ್ ಅವರು ತಮ್ಮ ಅನುಭವವನ್ನು ಫೇರ್‌ಫ್ಯಾಕ್ಸ್ ಮೀಡಿಯಾ ಜೊತೆ ಶುಕ್ರವಾರ ಹಂಚಿಕೊಂಡಿದ್ದಾರೆ.

ಸ್ನೇಕ್ಸ್ ಇನ್ ಅ ಪ್ಲೇನ್ ಚಿತ್ರದಂತೆ ವಿಮಾನದ ಪಯಣಕ್ಕೆ ಹಾವು ಯಾವುದೇ ತೊಂದರೆ ಉಂಟು ಮಾಡಿಲ್ಲ. ಅಲ್ಲದೆ, ಎಲ್ಲರ ಗಮನ ಹಾವಿನ ಮೇಲೆ ಇತ್ತೇ ಹೊರತು, ವಿಮಾನದಲ್ಲಿ ಬೇರೆ ಹಾವಿರಬಹುದೆಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ರೆಕ್ಕೆಗೆ ಸರಿಯಾಗಿಯೇ ಅಂಟಿಕೊಂಡಿತ್ತು. ಆದರೆ ನಂತರ ರೆಕ್ಕೆಯ ತುದಿಗೆ ಜಾರಿಹೋಗಿ, ಸಾವು ಬದುಕಿನ ಹೋರಾಟ ನಡೆಸಿತು. ಅದು ಸತ್ತಿತ್ತು ನಿಜಕ್ಕೂ ಖೇದಕರ ಸಂಗತಿ ಎಂದು ರಾಬರ್ಟ್ ನುಡಿದಿದ್ದಾರೆ.

ಕ್ವೀನ್‌ಲ್ಯಾಂಡ್ ಉತ್ತರ ಭಾಗದಲ್ಲಿ ಇಂಥ ಬಗೆಯ ಹೆಬ್ಬಾವುಗಳು ಸಾಮಾನ್ಯ. ಆಸ್ಟ್ರೇಲಿಯಾದ ಅತಿ ಉದ್ದನೆಯ ಹಾವುಗಳಲ್ಲಿ ಒಂದಾಗಿರುವ ಈ ಹೆಬ್ಬಾವು, ವಿಮಾನದ ಒಳಗೆ ಬರುವ ಸಾಧ್ಯತೆಯೇ ಇರಲಿಲ್ಲ ಎಂದು ಕಾಂಟಾಸ್ ವಕ್ತಾರರು ಹೇಳಿದ್ದಾರೆ. 2006ರಲ್ಲಿ ಬಂದಿದ್ದ ಆ ಚಿತ್ರಕ್ಕೂ ನಿಜಜೀವನ ಘಟನೆಗೂ ಒಂದೇ ವ್ಯತ್ಯಾಸವೆಂದರೆ, ಚಿತ್ರದಲ್ಲಿ ಹಾವುಗಳ ಬವಣೆಯಿಂದ ಕಂಗಾಲಾಗಿದ್ದ ಪ್ರಯಾಣಿಕರು ಹಾವುಗಳ ಸತ್ತನಂತರ ನಿರಾಳರಾಗಿದ್ದರು, ಇಲ್ಲಿ ನಿಜಜೀವನದಲ್ಲಿ ಈ ಹಾವು ಸತ್ತಿದ್ದಕ್ಕೆ ದುಃಖಿತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+