ಚುನಾವಣಾ ಭವಿಷ್ಯ: ಬಿಎಸ್ವೈ-ಎಚ್ಡಿಕೆ ಸಮ್ಮಿಶ್ರ ಸರಕಾರ !

ಮುಂದಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದ್ದು ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತೆ ಒಂದಾಗಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ರಮಣರಾವ್ ಭವಿಷ್ಯ ನುಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ. ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿವೆ.
ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆಂದು ರಮಣರಾವ್ ಹೇಳಿದ್ದಾರೆ.
ಸದ್ಯದ ಗ್ರಹಗತಿಗಳ ಪ್ರಕಾರ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವುದು ನಿಶ್ಚಿತ.
2013 ರಾಜಕೀಯವಾಗಿ ಒಳ್ಳೆಯ ವರ್ಷವಲ್ಲ, ಹಾಗಾಗಿ ಹಾವು ಮುಂಗುಸಿಯಂತಿರುವವರೂ ರಾಜಕೀಯವಾಗಿ ಸ್ನೇಹಿತರಾಗುತ್ತಾರೆ ಎಂದು ರಮಣರಾವ್ ಹೇಳಿದ್ದಾರೆ.
ಹೈದರಾಬಾದ್ ಮೂಲದ ರಮಣರಾವ್, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಭೇಟಿಯಾಗಿ ಯುಗಾದಿ ನಂತರ ಮುಖ್ಯಮಂತ್ರಿ ಹುದ್ದೆ ನಿಮಗೆ ಕೈತಪ್ಪಲಿದೆ ಎಂದು ಭವಿಷ್ಯ ನುಡಿದಿದ್ದರಂತೆ.
ಅಷ್ಟೇ ಅಲ್ಲದೆ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಲಿದ್ದಾರೆ ಎಂದೂ ರಮಣರಾವ್ ಭವಿಷ್ಯ ನುಡಿದಿದ್ದರು.












Click it and Unblock the Notifications