ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Indian Army: ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಪ್ರಸ್ತುತ ಉಪ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ನೇಮಕಗೊಂಡಿದ್ದಾರೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಇದೇ ಜೂನ್ 30ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಧೀರಜ್ ಅಲಂಕರಿಸಲಿದ್ದಾರೆ.

ರಕ್ಷಣಾ ಸಚಿವಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿಗಳು ಈ ಮಹತ್ವದ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಜೂನ್ 30ರಿಂದ ಪೂರ್ಣ ಜನರಲ್ ಹುದ್ದೆಯೊಂದಿಗೆ ಧೀರಜ್ ಸೇಠ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದು, ಆಗಸ್ಟ್ 31, 2028ರವರೆಗೆ ಈ ಅತ್ಯುನ್ನತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಇವರು ಭಾರತೀಯ ಸೇನೆಯ 31ನೇ ಮುಖ್ಯಸ್ಥರಾಗಲಿದ್ದಾರೆ.

Indian Army Lt Gen Dhiraj Seth Appointed As New Chief Know Biography Career And Achievements

ಯಾರು ಈ ಧೀರಜ್ ಸೇಠ್?

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿರುವ ಲೆ. ಜನರಲ್ ಧೀರಜ್ ಸೇಠ್ ಅವರು 1986ರಲ್ಲಿ 'ಆರ್ಮರ್ಡ್ ಕಾರ್ಪ್ಸ್' ಅಧಿಕಾರಿಯಾಗಿ ಭಾರತೀಯ ಸೇನೆಗೆ ಸೇರಿಕೊಂಡಿದ್ದರು. ಸುಮಾರು ನಾಲ್ಕು ದಶಕಗಳ (40 ವರ್ಷ) ಸುದೀರ್ಘ ಸೇವಾ ಅಧಿಯಲ್ಲಿ ಅವರು ದೇಶದ ರಕ್ಷಣೆಗಾಗಿ ವಿವಿಧ ಪ್ರಮುಖ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಧೀರಜ್ ಸೇಠ್ ಶೈಕ್ಷಣಿಕ ಹಾಗೂ ತರಬೇತಿ ವಿವರ

* ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಮಿಲಿಟರಿ ಕಾಲೇಜಿನಿಂದ 'ಡಿಫೆನ್ಸ್ ಸರ್ವೀಸಸ್ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕೋರ್ಸ್' ಮುಗಿಸಿದ್ದಾರೆ.

* ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಪ್ರತಿಷ್ಠಿತ ನೇವಲ್ ಪೋಸ್ಟ್‌ಗ್ರಾಜುಯೇಟ್ ಶಾಲೆಯಿಂದ ಅಂತಾರಾಷ್ಟ್ರೀಯ ರಕ್ಷಣಾ ಸ್ವಾಧೀನ ನಿರ್ವಹಣೆ ತರಬೇತಿ ಪಡೆದಿದ್ದಾರೆ. ಇದರೊಂದಿಗೆ ಮಹೂನಿನ ಹೈಯರ್ ಕಮಾಂಡ್ ಕೋರ್ಸ್ ಹಾಗೂ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲೂ ಉನ್ನತ ಶಿಕ್ಷಣ ಪಡೆದಿದ್ದಾರೆ.

ಧೀರಜ್ ಸೇಠ್ ಯಾವೆಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ?

* ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶದ ವಿವಿಧ ಗಡಿಭಾಗಗಳಲ್ಲಿ ಯಶಸ್ವಿ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

* ಮರುಭೂಮಿ ಪ್ರದೇಶದಲ್ಲಿ ಆರ್ಮರ್ಡ್ ರೆಜಿಮೆಂಟ್‌ಗೆ ನೇತೃತ್ವ ವಹಿಸಿದ ಅನುಭವ ಹೊಂದಿದ್ದಾರೆ.

* ಅಭಿವೃದ್ಧಿ ಹೊಂದಿದ ವಲಯದಲ್ಲಿ ಆರ್ಮರ್ಡ್ ಬ್ರಿಗೇಡ್‌ನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

* ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪಾದನೆ ನಿಗ್ರಹ ಪಡೆಯ ನೇತೃತ್ವ.

* ಸುದರ್ಶನ್ ಚಕ್ರ ಕಾರ್ಪ್ಸ್ ಹಾಗೂ ದೆಹಲಿ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಯಶಸ್ವಿ ಸೇವೆ.

* ಪುಣೆ ಕೇಂದ್ರಿತ ದಕ್ಷಿಣ ಕಮಾಂಡ್‌ನ ಮುಖ್ಯಸ್ಥರಾಗಿ ಪ್ರಸಿದ್ಧ 'ಆಪರೇಷನ್ ಸಿಂಧೂರ್' ವೇಳೆ ಮಹತ್ವದ ಪಾತ್ರ ನಿರ್ವಹಣೆ.

* ಪಶ್ಚಿಮ ಗಡಿಭಾಗದಲ್ಲಿ ನಡೆದ ಮೂರೂ ಸೇನೆಗಳ ಜಂಟಿ ಯುದ್ಧಾಭ್ಯಾಸಗಳ ಉಸ್ತುವಾರಿ.

* ತಂತ್ರಾತ್ಮಕ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.

ಆಡಳಿತಾತ್ಮಕ ವಲಯದಲ್ಲಿ ಧೀರಜ್ ಸೇಠ್ ಅವರದ್ದು ಅಪಾರ ಅನುಭವ. ಜಮ್ಮು-ಕಾಶ್ಮೀರದ ಸ್ವತಂತ್ರ ಆರ್ಮರ್ಡ್ ಬ್ರಿಗೇಡ್‌ನ ಬ್ರಿಗೇಡ್ ಮೇಜರ್ ಆಗಿ, ಅಂಗೋಲಾದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಕಾರ್ಯಾಚರಣೆಯ ಅಧಿಕಾರಿಯಾಗಿ ಅವರು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, ಸೇನಾ ಮುಖ್ಯಾಲಯದ ಸಹಾಯಕ ಮಿಲಿಟರಿ ಕಾರ್ಯದರ್ಶಿಯಾಗಿ ಮತ್ತು ಸೇನೆಯ ಶಿಸ್ತು, ಸಮಾರಂಭ ಹಾಗೂ ಕಲ್ಯಾಣ ವಿಭಾಗದ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಪಾರ ಯುದ್ಧತಂತ್ರದ ಜ್ಞಾನ ಮತ್ತು ಆಡಳಿತಾತ್ಮಕ ಚಾಕಚಕ್ಯತೆ ಹೊಂದಿರುವ ಲೆ. ಜನರಲ್ ಧೀರಜ್ ಸೇಠ್ ಅವರ ನಾಯಕತ್ವದಲ್ಲಿ ಭಾರತೀಯ ಭೂಸೇನೆ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ರಕ್ಷಣಾವಲಯದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+