Bengaluru-Mysuru Expressway: ಟೋಲ್ ಶುಲ್ಕ ಪಾವತಿಗೆ ಹೊಸ ವ್ಯವಸ್ಥೆ, ಸವಾರರಿಗೆ ಹಣ ಉಳಿತಾಯ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಮೂಲಕ ಸಂಚರಿಸುವ ವಾಹನ ಸವಾರರಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಂಪೂರ್ಣ ಹೆದ್ದಾರಿ ಬಳಕೆಗೆ ನೀವು ಸೇವಾ ಶುಲ್ಕ ಪಾವತಿಸುವ ವಿಧಾನಕ್ಕೆ ಮುಕ್ತಿ ನೀಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೊಸ ಯೋಜನೆ ರೂಪಿಸಿದೆ. ಇದರಿಂದ ವಾಹನ ಮಾಲೀಕರಿಗೆ ಟೋಲ್ಕ ಶುಲ್ಕದಲ್ಲಿ ಭರ್ಜರಿ ಉಳಿತಾಯವಾಗಲಿದೆ.

ಮೈಸೂರು-ಬೆಂಗಳೂರು ಈ ಎಕ್ಸ್‌ಪ್ರೆಸ್‌ ವೇನಲ್ಲಿ ವಿವಿಧ ಕಡೆಗೆ ಪ್ರವೇಶ, ನಿರ್ಗಮನ ಬಿಂದು ಇವೆ. ಸಂಪೂರ್ಣ ರಸ್ತೆ ಟೋಲ್ ಬದಲಾಗಿ ಹೊಸತೊಂದು ಟೋಲಿಂಗ್ ವ್ಯವಸ್ಥೆ ಪರಿಚಯಿಸುತ್ತಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ವಾಹನ ಚಾಲಕರಿಗೆ ಸಂಪೂರ್ಣ ಕಾರಿಡಾರ್‌ಗೆ ನಿಗದಿತ ಟೋಲ್ ಪಾವತಿಸುವ ಬದಲು ನೀವು ಒಟ್ಟು ಎಕ್ಸ್‌ಪ್ರೆಸ್‌ ವೇ ಎಷ್ಟು ಬಳಸುತ್ತೀರೋ ಅಷ್ಟಕ್ಕೆ ಮಾತ್ರವೇ ಟೋಲ್ ಶುಲ್ಕ ಪಾವತಿಸಬಹುದು. ಅಂದರೆ ನೀವು ಪ್ರಯಾಣಿಸುವ ನಿಖರ ದೂರಿನ ಸೇವೆಗೆ ಮಾತ್ರವೇ ಹೆದ್ದಾರಿ ಟೋಲ್ ಕಟ್ಟುವ ಹೊಸ ವ್ಯವಸ್ಥೆ ಪರಿಚಯಿಸಲು ಪ್ರಾಧಿಕಾರ ಮುಂದಾಗಿದೆ.

Bengaluru-Mysuru Expressway

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ 117 ಕಿಲೋ ಮೀಟರ್ ಉದ್ದವಿದೆ. ಈ ಹೆದ್ದಾರಿಯಲ್ಲಿ ಬಹು-ಲೇನ್ ಮುಕ್ತ ಹರಿವು (MLFF) ಟೋಲ್ ಸಂಗ್ರಹ ವ್ಯವಸ್ಥೆಯ ಅಡಿ ತಡೆರಹಿತ, ಹೈ-ಸ್ಪೀಡ್ ಟೋಲಿಂಗ್ ಕಾರಿಡಾರ್ ಆಗಿ ಪರಿವರ್ತಿಸುವ ಪ್ರಸ್ತಾಪ ಇದೆ. ಇತ್ತೀಚೆಗೆ ಇದರ ಕಾರ್ಯ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿ ಬಂದ ಬೆನ್ನಲ್ಲೇ ದೂರ-ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಕ್ಕೆ ವೇಗ ಸಿಕ್ಕಂತಾಗಿದೆ.

New Railway Lines: ತುಮಕೂರು-ದಾವಣಗೆರೆ, ರಾಯದುರ್ಗ ರೈಲು ಮಾರ್ಗದ ಭೂಸ್ವಾಧೀನ ಯಶಸ್ವಿ, ಕಾರ್ಯಾಚರಣೆ ಅಪ್ಡೇಟ್ಸ್
New Railway Lines: ತುಮಕೂರು-ದಾವಣಗೆರೆ, ರಾಯದುರ್ಗ ರೈಲು ಮಾರ್ಗದ ಭೂಸ್ವಾಧೀನ ಯಶಸ್ವಿ, ಕಾರ್ಯಾಚರಣೆ ಅಪ್ಡೇಟ್ಸ್

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಪರಿಶೀಲನೆ ನಡೆಸಲಾಗಿದೆ. ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಪ್ರವೇಶ ಮತ್ತು ನಿರ್ಗಮನ ಬಿಂದುಗಳ ವ್ಯಾಪ್ತಿಯಲ್ಲಿ ಟೋಲಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಉದಾಹರಣೆಗೆ 117 ಕಿಲೋ ಮೀಟರ್ ಎಕ್ಸ್‌ಪ್ರೆಸ್‌ವೇನಲ್ಲಿ ಆರು ಪ್ರವೇಶ, ನಿರ್ಗಮನ ಬಿಂದು ಇವೆ ಎಂದುಕೊಳ್ಳೋಣ. ನೀವು ಬಿಡದಿಯಿಂದ ರಾಮನಗರವರೆಗಿನ ಸಂಚಾರ ಮಾಡುವುದಾದರೆ ಅಷ್ಟು ಬಳಕೆಗೆ ಮಾತ್ರವೇ ನೀವು ಶುಲ್ಕ ಪಾವತಿಸಬೇಕು.

ನಿಮ್ಮ ವಾಹನದ ಪ್ರವೇಶ, ನಿರ್ಗಮನದಲ್ಲಿ ಫಾಸ್ಟ್ಯಾಗ್ ಮೂಲಕ ಹಣ ಕಡಿತ ವ್ಯವಸ್ಥೆ ರೂಪಿಸಲಾಗುತ್ತದೆ. ಈ ಮೊದಲು ನೀವು ಎಕ್ಸ್‌ಪ್ರೆಸ್‌ ಏರಿದರೆ ಸಾಕು ಸಂಪೂರ್ಣ ರಸ್ತೆ ಬಳಸಿದರೂ, ಬಳಸದೇ ನಡುವೆ ರಾಮನಗರ, ಮಂಡ್ಯ, ಮದ್ದೂರಿಗೆ ತೆರಳಿದರೆ ಸಂಪೂರ್ಣ ನಿಗದಿತ ಟೋಲ್ ಶುಲ್ಕ ಕಟ್ಟಬೇಕಿತ್ತು. ಈ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಮುಕ್ತಿ ಸಿಗಲಿದೆ.

ಭೌತಿಕ ಟೋಲ್ ಮುಕ್ತ ಸಂಚಾರ ಯೋಜನೆಗೆ ಬ್ರೇಕ್

ಹೊಸ ವ್ಯವಸ್ಥೆಯಡಿ ವಾಹನ ಚಾಲಕರಿಗೆ ಸಂಪೂರ್ಣ ಕಾರಿಡಾರ್ ಗೆ ನಿಗದಿ ಆಗಿರುವ ಟೋಲ್ ಪಾವತಿಸುವ ಬದಲು ಅವರು ಪ್ರಯಾಣಿಸಿದ ನಿಖರವಾದ ದೂರದ ಬಳಕೆಗೆ ಮಾತ್ರವೇ ಹೆದ್ದಾರಿ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂದಿದ್ದಾರೆ. ಇನ್ನೂ ಈ ಹಿಂದೆ ಟೋಲ್ ಮುಕ್ತ ಸಂಚಾರ ಸೇವೆ ಒದಗಿಸುವ ಕುರಿತು ಕೇಂದ್ರ ಹೆದ್ದಾರಿ ಸಚಿವಾಲಯ ಘೋಷಣೆ ಮಾಡಿತ್ತು. ಭೌತಿಕ ಟೋಲ್ ಪ್ಲಾಜಾ ತೆಗೆದು ಹಾಕಿ, ದಟ್ಟಣೆ-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವ ಪ್ರಯತ್ನದ ಭಾಗವಾಗಿ ತಂತ್ರಜ್ಞಾನದ ಅನುಷ್ಠಾನಕ್ಕಾಗಿ ಟೆಂಡರ್ ಸಹ ಕರೆಯಲಾಗಿತ್ತು.

ಸದ್ಯ ಹೆದ್ದಾರಿಯಲ್ಲಿ ದೂರ-ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಭೌತಿಕ ಟೋಲ್ ತೆಗೆಯುವುದು ಮತ್ತು ಎಂಎಲ್ ‌ಎಫ್‌ ಎಫ್ ಟೋಲಿಂಗ್ ವ್ಯವಸ್ಥೆ ಜಾರಿಯ ನಿರ್ಧಾರಕ್ಕೆ ಬ್ರೇಕ್ ಬಿದ್ದಿದೆ. ಆ ಆಲೋಚನೆ ಕೈ ಬಿಟ್ಟು ಹೊಸ ಯೋಜನೆಗೆ ಪ್ರಾಧಿಕಾರ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದೆ.

ತಡೆ ರಹಿತ ಟೋಲಿಂಗ್

ಎಂಎಲ್ ‌ಎಫ್‌ ಎಫ್ ವ್ಯವಸ್ಥೆಯಡಿಯಲ್ಲಿ, ಸಾಂಪ್ರದಾಯಿಕ ಟೋಲ್ ಪ್ಲಾಜಾಗಳನ್ನು ಉನ್ನತ-ಕಾರ್ಯಕ್ಷಮತೆಯ RFID FASTag ರೀಡರ್‌ಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳು ಹಾಗೂ ಉಪಗ್ರಹ ಆಧಾರಿತ ವಾಹನ ಟ್ರ್ಯಾಕಿಂಗ್ ತಂತ್ರಜ್ಞಾನ ಬಳಸಿ ಓವರ್‌ಹೆಡ್ ಗ್ಯಾಂಟ್ರಿಗಳಿಂದ ಬದಲಾಯಿಸಲಾಗುತ್ತಿತ್ತು. ವಾಹನಗಳು ಚಲಿಸುತ್ತಿರುವಾಗ ಈ ವ್ಯವಸ್ಥೆಯು ಸ್ವಯಂಚಾಲಿತ ಟೋಲ್ ಸಂಗ್ರಹ ಕಡಿತಗೊಳಿಸುತ್ತಿತ್ತು. ಇದರಿಂದ ಟೋಲ್‌ನಲ್ಲಿ ನಿಲ್ಲುವ ಪ್ರಮೇಯ ತಪ್ಪುತ್ತಿತ್ತು.

ಎಂಎಲ್ ‌ಎಫ್‌ ಎಫ್‌ ಟೋಲಿಂಗ್ ವ್ಯವಸ್ಥೆ ದೇಶದಲ್ಲಿ ಮೊದಲ ಬಾರಿಗೆ ಆಗಸ್ಟ್ 2025 ರಲ್ಲಿ ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ-48 ರಲ್ಲಿರುವ ಚೋರಿಯಾಸಿ ಫೀ ಪ್ಲಾಜಾದಲ್ಲಿ ಜಾರಿಗೆ ತರಲಾಯಿತು. ಅದನ್ನು ಕರ್ನಾಟಕದಲ್ಲೂ ಜಾರಿಗೆ ಪ್ರಯತ್ನ ನಡೆದಿತ್ತು.

ಹೊಸ ವ್ಯವಸ್ಥೆಯ ಪ್ರಯೋಜನಗಳೇನು?

ದೂರ-ಆಧಾರಿತ ಟೋಲಿಂಗ್ ಮಾದರಿಯು ಹೆದ್ದಾರಿ ಬಳಕೆದಾರರಿಗೆ ಹಲವು ಪ್ರಯೋಜನ ನೀಡಲಿದೆ. 40 ಕಿಲೋ ಮೀಟರ್ ಎಕ್ಸ್‌ಪ್ರೆಸ್ ಬಳಸುವವರಿಗೆ ಅಷ್ಟು ದೂರಕ್ಕೆ ಮಾತ್ರವೇ ಟೋಲ್ ಕಟ್ಟಬಹುದಾಗಿದೆ. ಮೊದಲಿನಂತೆ ಸಂಪೂರ್ಣ ಹೆದ್ದಾರಿಗೆ ಪಾವತಿಸುತ್ತಿದ್ದ ನಿಗದಿತ ಅಧಿಕ ಶುಲ್ಕ ತಪ್ಪಿ, ಹಣ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದರು. ಹೊಸ ವ್ಯವಸ್ಥೆಯಡಿಯಲ್ಲಿ, ಹೆದ್ದಾರಿಯನ್ನು ವಿವಿಧ ಹಂತಗಳಲ್ಲಿ ಪ್ರವೇಶಿಸುವ ಮತ್ತು ನಿರ್ಗಮಿಸುವ ವಾಹನ ಚಾಲಕರು ಹೆದ್ದಾರಿಯ ಆ ಭಾಗಕ್ಕೆ ಮಾತ್ರ ಟೋಲ್ ಶುಲ್ಕವನ್ನು ಪಾವತಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+