ನಾಯಿಯೊಂದಿಗೆ ಹೊರಹೋಗಿದ್ದ ಯುವತಿ ನಾಪತ್ತೆ

Help to trace missing girl
ತುಮಕೂರು ಜ.8 : ಸಾಕುನಾಯಿಯೊಂದಿಗೆ ಮನೆಯಿಂದ ಹೊರಹೋದ ಯುವತಿಯೊಬ್ಬಳು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾಳೆ. ಆಕೆ ನಾಪತ್ತೆಯಾಗಿ 5 ದಿನ ಕಳೆದರೂ ಆಕೆಯ ಸುಳಿವು ದೊರೆತಿಲ್ಲ. ಈ ಕುರಿತು ಕ್ಯಾತ್ಸಂದ್ರ ಪೋಲಿಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಲಾಗಿದೆ.

ಆಶಿಕಾ ಬಿ. ಎಂಬ 20 ವರ್ಷದ ಯುವತಿಯು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಎನ್‌ಡಿಎ ಓದುತ್ತಿದ್ದು, ಕಾರಣಾಂತರದಿಂದ ಓದುವುದನ್ನು ಬಿಟ್ಟು ಮನೆಯಲ್ಲೇ ಇದ್ದಳು. ಜನವರಿ 3ರಂದು ಸಂಜೆ 6.30ರ ಸಮಯದಲ್ಲಿ ಸಾಕುನಾಯಿಯನ್ನು ತಿರುಗಾಡಿಸಿಕೊಂಡು ಬರುತ್ತೇನೆಂದು ಹೇಳಿ, ಹೊರಹೋದವಳು ಮನೆಗೆ ವಾಪಸ್ ಬಂದಿಲ್ಲ. ತಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಯುವತಿಯ ತಂದೆ ಠಾಣೆಗೆ ದೂರು ನೀಡಿದ್ದಾರೆ.

ಯುವತಿಯು ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, 5.5 ಅಡಿ ಎತ್ತರವಿರುತ್ತಾಳೆ. ಈ ಯುವತಿ ಪತ್ತೆಯಾದ ಕೂಡಲೇ ಮಾಹಿತಿಯನ್ನು ಪಿ.ಎಸ್.ಐ. ಕ್ಯಾತ್ಸಂದ್ರ, ಅಥವಾ ಸಿ.ಪಿ.ಐ. ಕ್ಯಾತ್ಸಂದ್ರ ಇವರಿಗೆ ದೂರವಾಣಿ ಸಂಖ್ಯೆ 0816-2281124 ಅಥವಾ 9480802952 ಸಂಪರ್ಕಿಸಲು ಕೋರಲಾಗಿದೆ.

ಮೃತ ವೃದ್ಧರ ಗುರುತುಪತ್ತೆಗೆ ನೆರವಾಗಿ : ಅಪರಿಚಿತ ವೃದ್ದರೊಬ್ಬರು ಮೃತಪಟ್ಟಿದ್ದು, ವಾರಸುದಾರರನ್ನು ಪತ್ತೆ ಮಾಡಬೇಕಾಗಿ ಕೋರಿ ಕ್ಯಾತ್ಸಂದ್ರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.

ಕ್ಯಾತ್ಸಂದ್ರ ಸಂತೆ ಮೈದಾನದಲ್ಲಿರುವ ಶ್ರೀ ಶನಿಮಹಾತ್ಮ ದೇವಾಲಯದ ಬಳಿ ಜ.3ರಂದು ಬೆಳಿಗ್ಗೆ 11 ಗಂಟೆಗೆ ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಬಿದ್ದು ಒದ್ದಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಸಾಧಾರಣ ಮೈಕಟ್ಟು ಹೊಂದಿದ್ದು, ದುಂಡು ಮುಖ, ಗೋದಿ ಮೈಬಣ್ಣ, 5.5 ಅಡಿ ಎತ್ತರವಿದ್ದು, ಬಲಗೈ ಕಿರುಬೆರಳು ಹಾಗೂ ಎಡಗೈನ ಕಿರುಬೆರಳು ಮತ್ತು ಉಂಗುರದ ಬೆರಳು ಮುರಿದಿರುತ್ತದೆ. ಮೃತರ ವಾರಸುದಾರರಿದ್ದಲ್ಲಿ ಕ್ಯಾತ್ಸಂದ್ರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+