ಕಾಲ್ ಸೆಂಟರ್ ಉದ್ಯೋಗಿ ಮೇಲೆ ಅತ್ಯಾಚಾರ, ಹತ್ಯೆ

'ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದು, ಹತ್ಯೆಗೆ ಮುನ್ನವೋ ಅಥವಾ ಹತ್ಯೆ ನಂತರ ಯುವತಿಯ ಮೇಲೆ ಅತ್ಯಾಚಾರವಾಗಿದೆಯೋ ಎಂಬುದು ಶವಪರೀಕ್ಷೆ ವರದಿಯಿಂದ ಸಾಬೀತಾಗಬೇಕಿದೆ' ಎಂದು ಪೊಲೀಸರು ಹೇಳಿದ್ದಾರೆ.
ನೋಯ್ಡಾದ ಸೆಕ್ಟರ್ 63ರಲ್ಲಿ ಛೋಟಾಪುರ ಕಾಲನಿಯಲ್ಲಿ ಅತ್ಯಾಚಾರಕ್ಕೀಡಾಗಿ, ಹತ್ಯೆಗೊಳಗಾದ ಯುವತಿಯ ಮನೆಯಿದೆ. ಎಂದಿನಂತೆ ನಿನ್ನೆ ರಾತ್ರಿ ಪಾಳಿ ಮುಗಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ದಾಳೆ.
ದೆಹಲಿಯ ಹೊರವಲಯದಲ್ಲಿರುವ ನೋಯ್ಡಾದ ಸೆಕ್ಟರ್ 65ರಲ್ಲಿರುವ ಬಿಪಿಒ ಕಂಪನಿಯಲ್ಲಿ ಈಕೆ ಕೆಲಸದಲ್ಲಿದ್ದರು. ನಿನ್ನೆ ರಾತ್ರಿ 9 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದಾರೆ. ಆ ಅವೇಳೆಯಲ್ಲಿ ಆಕೆಯ ಜತೆ ಇನ್ನೂ ನಾಲ್ಕು ಮಹಿಳಾ ಸಹೋದ್ಯೋಗಿಗಳು ಇದ್ದರು. ಛೋಟಾಪುರ ಕಾಲನಿಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ಅವರೆಲ್ಲ ತಮ್ಮ ತಮ್ಮ ಮನೆಗಳತ್ತ ಬೇರ್ಪಟ್ಟಿದ್ದಾರೆ.
ಸದರಿ ಸಂತ್ರಸ್ತ ಯುವತಿ ಮನೆಯತ್ತ ಹೊರಟಿದ್ದಾಳಾದರೂ ಮನೆಗೆ ಮರಳಿಲ್ಲ. ಮಗಳು ಮನೆಗೆ ಬರುವುದು ತಡವಾಗುತ್ತಿದೆ ಎಂದು ಆತಂಕಗೊಂಡ ಪೋಷಕರು ಅಲಲ್ಲಿ ಹುಡಕಾಟ ನಡೆಸಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.
ಈ ಮಧ್ಯೆ, ಇಂದು ಬೆಳಗ್ಗೆ ಪುಷ್ತಾ ಎಂಬ ಜಾಗದಲ್ಲಿ ಸದರಿ ಯುವತಿಯ ಶವ ಪತ್ತೆಯಾಗಿದ್ದು, ಆಕೆಯ ಮೇಲೆ ಗಾಯದ ಗುರುತುಗಳು ಆಗಿವೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications