ಈ ದಂಪತಿಗಳ ಜೀವನದಲ್ಲಿ ಎಲ್ಲವೂ ವಿಶೇಷವೇ

May this couple live another century
ಜೋಡಿ ಅಂದ್ರೆ ಇದಪ್ಪ. ಇವರ ಜೀವನದಲ್ಲಿ ಎಲ್ಲವೂ ವಿಶೇಷವೇ. ದಂಪತಿಗಳಿಬ್ಬರೂ ನೂರರ ಗಡಿ ದಾಟಿದ್ದಾರೆ, ಇಂದಿಗೂ ಗಟ್ಟಿಮುಟ್ಟಾಗಿದ್ದಾರೆ, ಅತ್ಯಂತ ಅಪರೂಪವಾಗಿರುವ ಅನ್ಯೋನ್ಯತೆಯಿಂದ ಬಾಳುವೆ ನಡೆಸಿದ್ದಾರೆ. ಗಂಡನ ವಯಸ್ಸೀಗ 109, ಹೆಂಡತಿಯ ವಯಸ್ಸು 105. ವಿಶೇಷವೇನೆಂದರೆ, ಇಬ್ಬರ ಜನುಮದಿನವೂ ಒಂದೇ, ಅದು ಜನವರಿ 1. ಉತ್ಸಾಹದ ಬುಗ್ಗೆಯಂತಿರುವ ಈ ದಂಪತಿಗಳಿಗೆ ಬಿಲೇಟೆಡ್ ಹ್ಯಾಪಿ ಬರ್ತ್ ಡೇ.

ಇಂತಹ ಅಪರೂಪದ ಜೋಡಿ ಇರುವುದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಾಮನಾಯಕ ತಾಂಡಾದಲ್ಲಿ. ಧರ್ಮನಾಯ್ಕ ಮತ್ತು ದೇವಿಬಾಯಿ ಇಬ್ಬರು ದಂಪತಿಗಳು ನೂರರ ಗಡಿದಾಟಿದ್ದಾರೆ. ಇದರಲ್ಲಿ ಧರ್ಮನಾಯ್ಕಗೆ 109 ವರ್ಷ ಮತ್ತು ಪತ್ನಿ ದೇವಿಬಾಯಿಗೆ 105 ವರ್ಷವಾಗಿದೆ. ಪ್ರತಿ ವರ್ಷ ಮೊದಲನೇ ದಿನವೆ ಇವರಿಬ್ಬರು ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶತಮಾನೋತ್ಸವ ದಾಟಿರುವ ಇವರ ಜನ್ಮದಿನ ಜನವರಿ 1ರಂದು ತಾಂಡಾದಲ್ಲಿ ಅದ್ದೂರಿಯಾಗಿ ನಡೆಯಿತು.

ಹಲಗೆಯ ನಾದಕ್ಕೆ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಲಂಬಾಣಿ ನೃತ್ಯ ಮಾಡುತ್ತಾ ಇಬ್ಬರು ಅಜ್ಜ ಅಜ್ಜಿಯರಿಗೆ ಮೆರವಣಿಗೆ ಮೂಲಕ ತಾಂಡಾದ ಹನುಮಾನ್ ದೇಗುಲಕ್ಕೆ ಕರೆದುಕೊಂಡು ಹೋಗಿದ್ದರು. ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮುಖಾಂತರ ಮನೆಗೆ ಕರೆದುಕೊಂಡು ಬಂದರು. ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಕಂಡುಬಂದಿತು.

ಈ ದಂಪತಿಗೆ ಐದು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ. ಇವರನ್ನು ಕಂಡರೆ ಸಾಕು ಮೊದಲೇ ಅರ್ಥವಾಗುತ್ತದೆ ಇವರದ್ದು ತುಂಬು ಸಂಸಾರವೆಂದು. ಮಕ್ಕಳಿರಲವ್ವ ಮನೆ ತುಂಬ ಎನ್ನುವಂತೆ ಇವರಿಗೆ 8 ಜನ ಮಕ್ಕಳು, 50 ಮೊಮ್ಮಕ್ಕಳು, 120 ಮರಿಮೊಮ್ಮಕ್ಕಳು ಮತ್ತು 30 ಕಿರಿಮೊಮ್ಮಕ್ಕಳು ಇದ್ದಾರೆ. ಎಲ್ಲರೂ ಕೂಡಿದ್ದರೆ 208 ಆಗುತ್ತದೆ. ಯಾರಿಗುಂಟು ಯಾರಿಗಿಲ್ಲ?

ಈ ತಾಂಡಾದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಬದುಕುಳಿದು ಕಿರಿಮೊಮ್ಮಕ್ಕಳ ನೋಡುವ ಭಾಗ್ಯ ಇವರಿಗೆ ಸಿಕ್ಕಿದೆ. ಇಂದಿಗೂ ಕೂಡ ದಂಪತಿಗಳು ನಡೆದುಕೊಂಡು ಅಡ್ಡಾಡುತ್ತಾರೆ. ಇಡೀ ಕುಟುಂಬ ಅನೋನ್ಯತೆಯಿಂದ ಕೂಡಿದೆ. ಇಬ್ಬರ ಹುಟ್ಟುಹಬ್ಬದ ನಿಮಿತ್ತ ಈ ದಂಪತಿಗಳು ಕೇಕ್ ಕತ್ತರಿಸಿ ಮೊಮ್ಮಕ್ಕಳ ಜೊತೆ ಸಂಭ್ರಮಿಸಿದರು. ಮೊಮ್ಮಕ್ಕಳು ಪಟಾಕಿ ಸಿಡಿಸಿ ಕುಣಿದಾಡಿದರು. ಇದು ಅವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ತಾಂಡಾಕ್ಕೆ ಸಂತಸದ ಘಳಿಗೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+