ಮೋದಿ ಗೆಲುವಿನ ರಹಸ್ಯ ಕಂಡುಕೊಂಡ ಕುಮಾರಸ್ವಾಮಿ

ಗುಜರಾತಿನಲ್ಲಿ ಅಂಥಹ ಅಭಿವೃದ್ದಿ ಕೆಲಸವೇನೂ ನಡೆದಿಲ್ಲ. ಮಾಧ್ಯಮ ನರೇಂದ್ರ ಮೋದಿಯವರನ್ನು 'ಅಭಿವೃದ್ದಿಯ ಹರಿಕಾರ' ಎನ್ನುವಂತೆ ಬಿಂಬಿಸಿತು.
ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸದೇ ಇದ್ದಿದ್ದರಿಂದ ಮೋದಿ ಸತತ ಗೆಲುವು ಕಂಡರು ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಗುಜರಾತಿನಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ವಿರೋಧಪಕ್ಷವಾಗಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಬಿಜೆಪಿ ದುರಾಡಳಿತವನ್ನು ಜನತೆಗೆ ಮನದಟ್ಟು ಮಾಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ.
ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಭಾರೀ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ.
ವಿಶ್ವನಾಯಕರೆಂದೇ ಬಿಂಬಿಸಲ್ಪಡುತ್ತಿರುವ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಎಸ್.ಎಂ.ಕೃಷ್ಣ ನನ್ನ ಈ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಲಿ ಎಂದು ಕುಮಾರಸ್ವಾಮಿ ಮತ್ತೊಮ್ಮೆ ಕೃಷ್ಣ ವಿರುದ್ದ ತೊಡೆ ತಟ್ಟಿದ್ದಾರೆ.
ಮೋದಿಯಂತೆ ನನಗೂ ಮೂರು ಅವಧಿ ಆಡಳಿತ ನಡೆಸಲು ಜನತೆ ಆಶೀರ್ವದಿಸಿದ್ದರೆ ಕರ್ನಾಟಕವನ್ನು ಬಿಜೆಪಿಯವರ ರಾಮ ಅಲ್ಲ 'ನಿಜವಾದ ರಾಮರಾಜ್ಯ' ಮಾಡುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications