ಇನ್ಫೋಸಿಸ್ ನ ಹಿರಿಯ ತಲೆ ಹೊರಕ್ಕೆ

ಇನ್ಫೋಸಿಸ್ ನ ಜಾಗತಿಕ ಕಾರ್ಪೊರೇಟ್ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿ ವಿನೋದ್ ಹೆಸರುವಾಸಿಯಾಗಿದ್ದರು. ವಿನೋದ್ ಅವರು ಸುಮಾರು 20 ವರ್ಷಗಳ ಕಾಲ ಇನ್ಫೋಸಿಸ್ ನಲ್ಲಿ ದುಡಿದಿದ್ದರು.
49 ವರ್ಷ ವಯಸ್ಸಿನ ವಿನೋದ್ ಅವರು ಇನ್ಫಿ ತೊರೆದ ಮೇಲೆ ಯಾವುದೇ ಸಂಸ್ಥೆ ಸೇರುವ ಸಾಧ್ಯತೆ ಕಮ್ಮಿ . ಹೆಲ್ತ್ ಕೇರ್ ಉದ್ಯಮದಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು ಕಿಡ್ನಿ ಫೌಂಡೇಶನ್ ಹಾಗೂ ಶ್ರೀ ಶೃಂಗೇರಿ ಶಾರದಾಪೀಠಂ ಚಾರಿಟೇಬಲ್ ಟ್ರಸ್ಟ್ ವತಿಯ ರಂಗದೊರೆ ಸ್ಮಾರಕ ಆಸ್ಪತ್ರೆ ಸ್ಥಾಪನೆಗೆ ವಿನೋದ್ ಕಾರಣಕರ್ತರಾಗಿದ್ದಾರೆ.
ವಿನೋದ್, ಇನ್ಫಿ ತೊರೆಯಲು ಕಾರಣ ಹುಡುಕ ತೊಡಗಿದರೆ ಅವರ ಆಪ್ತ ವಲಯದಿಂದ ನಂಬಬಲ್ಲ ಮಾಹಿತಿ ಹೊರ ಬಿದ್ದಿದೆ. ಹಿರಿ ತಲೆಗಳನ್ನು ಹೊರಕ್ಕೆ ಕಳಿಸಿ ಯುವ ತಂಡ ರಚಿಸುವ ಉತ್ಸಾಹದಲ್ಲಿರುವ ಇನ್ಫೋಸಿಸ್ ಬೋರ್ಡ್ ಇತ್ತೀಚೆಗೆ ಮ್ಯಾನೇಜ್ಮೆಂಟ್ ಬದಲಾವಣೆ ಮಾಡಿತ್ತು. ನಂತರ ವಿನೋದ್ ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಹಿಂದೊಮ್ಮೆ ಇನ್ಫೋಸಿಸ್ ತೊರೆದಿದ್ದ ವಿನೋದ್ ಮತ್ತೆ ಹಲವು ತಿಂಗಳುಗಳ ನಂತರ ಕಂಪನಿಗೆ ಮರಳಿದ್ದರು. ವಿನೋದ್ ಅವರು ಇನ್ಫೋಸಿಸ್ ನಲ್ಲಿ 1993ರಿಂದ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.
ಮಾನವ ಸಂಪನ್ಮೂಲ, ಯೋಜನೆ, ಬ್ಯಾಂಕಿಂಗ್ ಬಿಸಿನೆಸ್ ವಿಭಾಗದಲ್ಲಿ ವಿನೋದ್ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿರ್ಧಾರದ ಬಗ್ಗೆ ನಾವು ಹೆಚ್ಚು ಹೇಳುವುದಿಲ್ಲ ಎಂದು ಇನ್ಫೋಸಿಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ಫೈನಾನ್ಸ್ ಸರ್ವೀಸಸ್ ನಲ್ಲಿದ್ದ ಶಾಜಿ ಫರೂಖ್ ಇನ್ಫೋಸಿಸ್ ತೊರೆದು ಬದ್ಧವೈರಿ ವಿಪ್ರೋ ಸೇರಿದ್ದರು. ನಂತರ ಬೋರ್ಡ್ ನಿಂದ ಮೋಹನ್ ದಾಸ್ ಪೈ, ಸೇಲ್ಸ್ ವಿಭಾಗದ ಮುಖ್ಯಸ್ಥ ಸುಭಾಷ್ ಧರ್, ಇನ್ಫೋಸಿಸ್ ಬಿಪಿಒ ಸಿಒಒ ರಿತೇಶ್ ಇದ್ನಾನಿ ಇನ್ಫೋಸಿಸ್ ತೊರೆದ ಪ್ರಮುಖರಾಗಿದ್ದಾರೆ.












Click it and Unblock the Notifications