'ವೃತ್ತಿಪರ ಸಾಲಗಾರ' ಐಪಿಎಸ್ ಅಧಿಕಾರಿಯ ವಜಾ

ಇಂತಹ ಐನಾತಿ ಸಾಲಗಾರನನ್ನು ವಿಶ್ವ ಬ್ಯಾಂಕಿಗೂ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಿಪ್ಪ ವರ್ಮಾ ಎಂಬ ಪೊಲೀಸ್ ಸಾಹೇಬನನ್ನು 'ದುರ್ನಡತೆ ಮತ್ತು ವೃತ್ತಿಪರ ಸಾಲಗಾರ' ಎಂಬ ಹಣೆಪಟ್ಟಿ ಹಚ್ಚಿ ಇಲಾಖೆ ವಜಾಗೊಳಿಸಿತ್ತು. ದಿಲ್ಲಿ ಹೈಕೋರ್ಟ್ ಕಳೆದ ವಾರ ಆ ಆದೇಶಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದೆ.
'ಸಾಲ ಕಟ್ಟಲಿಲ್ಲ ಅಂದರೆ ಅದು ನನ್ನ ವೈಯಕ್ತಿಕ ವಿಷಯ. ಅದಕ್ಕೂ ನಾನು ಉದ್ಯೋಗದಲ್ಲಿರುವ ಇಲಾಖೆಗೂ ಏನು ಸಂಬಂಧ? ಇಲಾಖೆ ಹೀಗೆ ನನ್ನನ್ನು ಕೆಲಸದಿಂದ ತೆಗೆದುಹಾಕುವುದು ಸರ್ವತಾ ಸಾಧುವಲ್ಲ. Rule 15 of All India Service (Conduct) Rules ಪ್ರಕಾರ ನನ್ನನು ಹೀಗೆಲ್ಲ ಕೆಲಸದಿಂದ ತೆಗೆದುಹಾಕಲು ಬರುವುದಿಲ್ಲ' ಎಂದು ಐಪಿಎಸ್ ವರ್ಮಾ ದಿಲ್ಲಿ ಹೈಕೋರ್ಟಿಗೆ ಅಲವತ್ತುಕೊಂಡಿದ್ದರು. ಹೀಗೆ ಹೇಳುತ್ತಲೇ ತಾನು ಸಾಲಗಾರ ಎಂಬುದನ್ನು ವರ್ಮಾ ಒಪ್ಪಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ ವರ್ಮನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದ ನ್ಯಾ. ಬದರ್ ದುರೇಜ್ ಅಹಮದ್ ಮತ್ತು ನ್ಯಾ. ಸಿದ್ಧಾರ್ಥ್ ಮೃದುಳ್ ಅವರ ನ್ಯಾಯಪೀಠ, 'ನೀನೊಬ್ಬ ದೊಡ್ಡ ಸಾಲಗಾರ. ಅದು ಸಾಬೀತಾಗಿದೆ. ನಿನ್ನನ್ನು ಸಹಿಸಿಕೊಳ್ಳಲಾಗದು. ಆದ್ದರಿಂದ ನಿನ್ನನ್ನು ಕೆಲಸದಿಂದ ತೆಗೆದುಹಾಕಿರುವುದು ಸೂಕ್ತವಾಗಿದೆ' ಎಂದು ಸಾರಿತು.
1977ರಿಂದ 1985ರವರೆಗೂ ಈತ ಸಾಲಗಳನ್ನು ಮಾಡಿದ್ದ. 1994ರ ಅಕ್ಟೋಬರಿನಲ್ಲಿ UPSC ಆತನನ್ನು ಕೆಲಸದಿಂದ ತೆಗೆದುಹಾಕಿತ್ತು. ಅದನ್ನು Central Administrative Tribunal ಸಹ ಎತ್ತಿಹಿಡಿದಿತ್ತು.
ಈ ಪ್ರಕರಣದ ನೀತಿಪಾಠ ಏನು?












Click it and Unblock the Notifications