2013ರಲ್ಲಿ ಉದ್ಯೋಗ, ಸಂಬಳಗಳು ಹೇಗಪ್ಪಾ?

ಏನೇ ಆರ್ಥಿಕ ಹಿಂಜರಿತ, ಹಣದುಬ್ಬರ ಅಂತ ಬಂದರೂ ನಾವು ಭಾರತೀಯರು ಅಂಥದ್ದನ್ನೆಲ್ಲ ತಡೆದುಕೊಳ್ಳಬಲ್ಲೆವು ಅಂತ ಹೇಳುತ್ತಾ ಈ ಬಾರಿ ಉದ್ಯೋಗ ಪರ್ವ ಕಂಡುಬರಲಿದ್ದು, ಸಂಬಳಗಳು ಸಮೃದ್ಧವಾಗಲಿದೆ ಎನ್ನುತ್ತಿದೆ ಅಧ್ಯಯನವೊಂದು.
ಐಟಿ, ಐಟಿ ಸೇವಾ ಉದ್ಯಮ, ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವಾಕ್ಷೇತ್ರಗಳಲ್ಲಿ ಶೇ. 5-8 ಸಂಬಳ ಹೆಚ್ಚಳಗಳಿಗೆ ಮೋಸವಿಲ್ಲ ಎನ್ನುತ್ತಿದೆ ಸಮೀಕ್ಷೆಯೊಂದು. ಇನ್ನು ಆರೋಗ್ಯ ಕ್ಷೇತ್ರ, ಔಷಧೋದ್ಯಮ, ವಿಜ್ಞಾನ ಕ್ಷೇತ್ರಗಳು ಗ್ರಾಹಕ ಸರಕು ಮಾರಾಟ ಕ್ಷೇತ್ರ ಮತ್ತು ಶಿಕ್ಷಣವನ್ನಂತೂ ಆರ್ಥಿಕ ಹಿಂಜರಿತ ಅಷ್ಟಾಗಿ ಬಾಧಿಸಿಲ್ಲ. ಹಾಗಾಗಿ ಈ ಕ್ಷೇತ್ರಗಳಲ್ಲಿ ಶೇ. 10-12ರಷ್ಟು ಸಂಬಳ ಹೆಚ್ಚಳಗಳನ್ನು ಖಂಡಿತಾ ನಿರೀಕ್ಷಿಸಬಹುದು.
ಕುತೂಹಲದ ಸಂಗತಿಯೆಂದರೆ ಈ ಸಂಬಳ ಹೆಚ್ಚಳಗಳನ್ನು ಕೊಡಮಾಡುತ್ತಿರುವುದು ಹಣದುಬ್ಬರದ ಪಿಡುಗನ್ನು ಸರಿದೂಗಿಸಲು ಎಂಬುದು ಗಮನಾರ್ಹ.
you are fired ಎಂಬ ಪಿಂಕ್ ಸ್ಲಿಪ್ ಗಳ ಕಾಟ ಈ ಬಾರಿ ಕಾಣಬರದು. ಇದೇ ವೇಳೆ, you are hired ಎಂಬ ಶುಭ ಸಮಾಚಾರ ಕೇಳಿಬರಲಿದೆ. ನೇಮಕಾತಿಗಳು ತೀರಾ ಭಾರಿ ಪ್ರಮಾಣದಲ್ಲಿ ಅಲ್ಲದಿದ್ದರೂ ನಿರಾಶೆಯಂತೂ ಇರುವುದಿಲ್ಲ. ಅದು ಯಾವುದೇ ಕ್ಷೇತ್ರವಿರಲಿ ನೇಮಕಾತಿಗಳು ಶೇ. 8-10 ಪ್ರಮಾಣದಲ್ಲಿ ನಡೆಯಲಿವೆ. 2012ರ ಶೇ. 5-8ಕ್ಕೆ ಹೋಲಿಸಿದಲ್ಲಿ ಇದು ನಿಜಕ್ಕೂ ಆಶಾದಾಯಕವಾಗಿದೆ.
ಐಟಿ, ಐಟಿ ಸೇವಾ ಉದ್ಯಮ, ಟೆಲಿಕಾಂ, ವಿಮೆ ಕ್ಷೇತ್ರಗಳಲ್ಲಿ ಶೇ. ಹೆಚ್ಚಿನ ಪ್ರಮಾಣದ ನಿರೀಕ್ಷೆ ಇರುವುದಿಲ್ಲ. ಗಮನಿಸಿ, ಹೊಸದಾಗಿ ಪದವಿ ಪಡೆದವರು ಮಾನವ ಸಂಪನ್ಮೂಲ ವಿಭಾಗಕ್ಕೆ ಬೇಡವಾಗಿದ್ದಾರಾದರೂ ಒಂದಷ್ಟು ಅನುಭವ ಹೊಂದಿರುವವರಿಗೆ ಹೆಚ್ಚಿನ ಅವಕಾಶಗಳು ಇರುತ್ತವೆ. All the BEST!


Click it and Unblock the Notifications
