ಮುಸ್ಲಿಂ ಮತಾಂತರಕ್ಕೆ ಒಪ್ಪದ ವಿದ್ಯಾರ್ಥಿಯ ನಾಲಿಗೆ ಕಟ್

ಜರ್ಮನಿಯ ಬಾನ್ ನಗರದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ ಎಂದು ಜರ್ಮನ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಾನ್ ನಗರದಲ್ಲಿ ವಾಸವಾಗಿರುವ ಈ ವಿದ್ಯಾರ್ಥಿಯನ್ನು ಅಡ್ಡಗಟ್ಟಿದ ಮುಸ್ಲಿಂ ತೀವ್ರವಾದಿಗಳು 'ನಿನ್ನ ಧರ್ಮ ಯಾವುದು?' ಎಂದು ಕೇಳಿದ್ದಾರೆ.
ನಂತರ, ಇಸ್ಲಾಂಗೆ ಮತಾಂತರವಾಗಲು ಆದೇಶಿಸಿದ್ದಾರೆ. ಆದರೆ ಆ ವಿದ್ಯಾರ್ಥಿ 'ಯಾವುದೇ ಕಾರಣಕ್ಕೂ ಜಾತಿ ಬಿಡುವುದಿಲ್ಲ' ಎಂದು ಮಾರುತ್ತರ ನೀಡಿದ್ದಾನೆ. ಅಷ್ಟೇ, ಹಾಗೆ ಉತ್ತರಿಸಿದ ಆ ನಾಲಿಗೆಯನ್ನೇ ಮತಾಂಧರು ಸೀಳಿಹಾಕಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಯ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ವಿದ್ಯಾರ್ಥಿಯನ್ನು ದಾರಿಯಲ್ಲೇ ಬಿಟ್ಟ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.












Click it and Unblock the Notifications