ನಟಿಗೆ ಕಿರುಕುಳ, ಪ್ರತಿಭಟನೆ : ಗುಂಡಿಗೆ ಪತ್ರಕರ್ತ ಬಲಿ

Actress molestation : Video journalist shot dead
ಇಂಫಾಲ, ಡಿ. 23 : ಹಾಡುಹಗಲೆ ಚಿತ್ರನಟಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ವಿರೋಧಿಸಿ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಹಾರಿಸಿದ ಗುಂಡು ತಗುಲಿ ವಿಡಿಯೋ ಪತ್ರಕರ್ತರೊಬ್ಬರು ಅಸುನೀಗಿದ ಘಟನೆ ಭಾನುವಾರ ಇಂಫಾಲದಲ್ಲಿ ನಡೆದಿದೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಯತ್ನಿಸಿದಾಗ ಪೊಲೀಸರು ಅನಿವಾರ್ಯವಾಗಿ ಕೆಲಸುತ್ತು ಗುಂಡು ಹಾರಿಸಬೇಕಾಯಿತು. ಆಗ ವಿಡಿಯೋ ಪತ್ರಕರ್ತನಿಗೆ ಎರಡು ಗುಂಡು ತಗುಲಿದ್ದು, ಒಂದು ಗುಂಡು ನೇರವಾಗಿ ಎದೆಯನ್ನು ಹೊಕ್ಕಿದೆ.

ಮಣಿಪುರ ಫಿಲ್ಮಂ ಫೋರಂ ಬಂದ್‌ಗೆ ಕರೆ ನೀಡಿತ್ತು. ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಯಾವುದೇ ಕ್ರಮಕ್ಕೆ ಸರಕಾರ ಮುಂದಾಗದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ರಾಜ್ಯದ ಎಲ್ಲೆಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಲಾಗಿದ್ದು, ಅನೇಕ ವಾಹನಗಳು ಜಖಂ ಆಗಿವೆ. ರಸ್ತೆರಸ್ತೆಗಳಲ್ಲಿ ಟೈರುಗಳನ್ನು ಸುಡಲಾಗುತ್ತಿದ್ದು, ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.

ಇಡೀ ಮಣಿಪುರದಲ್ಲಿ ಜನಜೀವನ ಈ ಪ್ರತಿಭಟನೆಯಿಂದಾ ಅಸ್ತವ್ಯಸ್ತವಾಗಿದೆ. ಅಂಗಡಿ ಮುಂಗಟ್ಟುಗಳು ಕದ ಹಾಕಿವೆ. ವ್ಯಾಪಾರ ವಹಿವಾಟುಗಳು ಕೆಲಸವನ್ನು ಸ್ಥಗಿತಗೊಳಿಸಿವೆ. ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿದೆ. ಎಲ್ಲೆಡೆಯೂ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಬಸ್, ರೈಲು ಸಂಚಾರ ಕೂಡ ದಿಕ್ಕುತಪ್ಪಿದೆ.

ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಆಯೋಜಕಿಯಾಗಿದ್ದ ತಮ್ಮನ್ನು ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್(ಎನ್ಎಸ್‌ಸಿಎನ್-ಐಎಂ)ನ ಲೆಫ್ಟಿನೆಂಟ್ ಕರ್ನಲ್ ಲೈಂಗಿಕವಾಗಿ ಹಿಂಸಿಸಿದರು ಎಂದು ನಟಿ ಮೊಮೊಕಾ ಎಂಬುವವರು ದೂರಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ತಮಾಷೆ ನೋಡುತ್ತ ಸುಮ್ಮನೆ ನಿಂತಿದ್ದರು ಎಂದು ನಟಿ ದೂರಿದ್ದಾರೆ.

ನಟಿ ಮೊಮೊಕಾಳನ್ನು ಪಾರು ಮಾಡಲು ಬಂದ ಇಬ್ಬರ ಮೇಲೆಎನ್ಎಸ್‌ಸಿಎನ್-ಐಎಂನ ಲೆಫ್ಟಿನೆಂಟ್ ಕರ್ನಲ್ ಲಿವಿಂಗ್‌ಸ್ಟೋನ್ ಎರಡು ಸುತ್ತು ಗುಂಡು ಕೂಡ ಹಾರಿಸಿದ್ದರು. ಆದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ಅನೇಕ ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+