ಹ್ಯಾಟ್ರಿಕ್ ಸಿಎಂ ಮೋದಿ ಯಶಸ್ಸಿನ ಹಿನ್ನೋಟ
ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿರುವ ನರೇಂದ್ರ ಮೋದಿ ಅವರು ಬಿಜೆಪಿಯ ಅಘೋಷಿತ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬೆಳೆದಿದ್ದಾರೆ. ಹಾಲಿ ವಿಧಾನಸಭೆ ಚುನಾವಣೆಯಲ್ಲಿ 70 ಸಾವಿರ ಮತಕ್ಕೂ ಅಧಿಕ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.
ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಿದ್ ನಗರ ನರೇಂದ್ರ ಮೋದಿ 17 ಸೆಪ್ಟೆಂಬರ್, 1950ರಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು.
ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು.1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರೆಸ್ಸೆಸ್ ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು.
ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮೋದಿ ಅವರ ರಾಜಕೀಯ ಹಿನ್ನೋಟ ಇಲ್ಲಿದೆ

ರಾಜಕೀಯ ಪ್ರವೇಶ
* 1987ರಲ್ಲಿ ಬಿಜೆಪಿಯನ್ನು ಸೇರಿ ರಾಜಕೀಯಕ್ಕೆ ಧುಮುಕಿದರು. ಕೇವಲ ಒಂದು ವರ್ಷದಲ್ಲಿ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ.
*1995ರಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಗುಜರಾತ್ ನಲ್ಲಿ ಅಧಿಕಾರಕ್ಕೆ
* 1988 ಮತ್ತು 1995ರ ನಡುವೆ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮುಖ್ಯಮಂತ್ರಿಯಾದ ಮೋದಿ
*1998ರಲ್ಲಿ ಕೇಂದ್ರದಲ್ಲಿ ಬಿಜೆಪಿ ನವದೆಹಲಿಯಲ್ಲಿ ಅಧಿಕಾರ ಸ್ಥಾಪಿಸಿದ್ದು ಈ ಎರಡು ಯಶಸ್ವಿ ಅಭಿಯಾನಗಳಿಂದ ಎನ್ನಬಹುದು.
*1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ.
* 1998ರಲ್ಲಿ ಪ್ರಧಾನ ಕಾರ್ಯದರ್ಶಿ(ಸಂಘಟನೆ)ಯಾಗಿ ಮೇಲಕ್ಕೇರಿದರು.
* 7-10-2001 : ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
* 2001ರ ಭೀಕರ ಭೂಕಂಪದಿಂದಾಗಿ ಉಂಟಾದ ಹಾನಿಯನ್ನು ಸರಿಪಡಿಸುವುದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ

ಚುನಾವಣೆಯಲ್ಲಿ ಗೆಲುವು
* 24-02-2002: ರಾಜ್ ಕೋಟ್ ದಲ್ಲಿ ವಿಧಾನಸಭೆ ಉಪ-ಚುನಾವಣೆಯಲ್ಲಿ ಗೆಲುವು. ರಾಜ್ ಕೋಟ್ ನಲ್ಲಿ ವಿಜಯೋತ್ಸವ.
* 25-02-2002: ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ.
*19-07-2002: ಗುಜರಾತಿನ ಚಿತ್ರಣದ ಕುರಿತಾಗಿ ತೆಗಳುವಿಕೆಯ ಒತ್ತಡ ಹೆಚ್ಚಾಗಿ 10ನೇ ಅಸೆಂಬ್ಲಿ ವಿಸರ್ಜನೆ. ಜನರ ಬಳಿ ಸಾಗಲು ನಿರ್ಧಾರ.
* 12-12-2002: ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಮತ ಚಲಾವಣೆ.

ಮೋದಿ ಯುಗ ಆರಂಭ
* 15-12-2002: ಜನರು ನೀಡಿದ ಐತಿಹಾಸಿಕ ತೀರ್ಪು. ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮರು ಆಯ್ಕೆ. 182 ಅಸೆಂಬ್ಲಿ ಸೀಟಿನಲ್ಲಿ 127ರಲ್ಲಿ ಗೆಲುವು.
* 20-12-2002: ಅಹಮದಾಬಾದಿನಲ್ಲಿ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಗಳಿಂದ ಪ್ರಮಾಣವಚನ.
* 22-12-2002: ಮುಖ್ಯಮಂತ್ರಿಯೊಬ್ಬರ ಪ್ರಮಾಣವಚನದಲ್ಲಿ ಪ್ರಧಾನಮಂತ್ರಿಯೊಬ್ಬರು ಪಾಲ್ಗೊಂಡ ಮೊದಲ ಕಾರ್ಯಕ್ರಮ.
* 06-03-2003: ಬಿಜೆಪಿ ಎಂಎಲ್ಎಗಳಿಗೆ ವಿಶೇಷ ತರಬೇತಿ.

ಮೋದಿ ಸಂಚಾರ ಆರಂಭ
*13-03-2003: ನೂತನವಾಗಿ ಚುನಾಯಿತಗೊಂಡ ಬಿಜೆಪಿ ಸರ್ಕಾರ 111 ದಿನಗಳನ್ನು ಪೂರೈಸಿತು.
* 28-05-2003 : ಅಸೆಂಬ್ಲಿಯಲ್ಲಿ ರಾಷ್ಟ್ರೀಯವಾದಿ ವೀರ ಸಾವರ್ಕರ್ ಅವರ ತೈಲವರ್ಣದ ಚಿತ್ರದ ಅನಾವರಣ.
* 24-08-2003 : ಶ್ಯಾಮ್ಜಿ ಕೃಷ್ಣಾ ವರ್ಮಾ ಮತ್ತು ಅವರ ಪತ್ನಿ ದಿವಂಗತ ಭಾನುಮತಿಬೆನ್ ಅವರ ಚಿತಾಭಸ್ಮ ತರುವ ಉದ್ದೇಶದ ವೀರಾಂಜಲಿ ಯಾತ್ರೆ ಮುಂಬೈನಿಂದ ಆರಂಭ.
* 02-05-2004: ಕುಂಭ ಮೇಳದಲ್ಲಿ ಪಾಲ್ಗೊಳ್ಳುವಿಕೆ.

ನಂ.1 ಸಿಎಂ ಪಟ್ಟ
*22-08-2005 : ಇಂಡಿಯಾ ಟುಡೇ, ಇಂಡಿಯಾ ಟಿವಿ ಮತ್ತು ಗುಜರಾತ್ ಡೈಲಿ ಸಂದೇಶ್ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ದೇಶದ ನಂ.1 ಮುಖ್ಯಮಂತ್ರಿ.
*02-12-2005 : ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಗೆಲುವು ಪಡೆಯಲು ಜನ ಸಂಪರ್ಕ ಯಾತ್ರೆ.
* 24-02-2006 : ಹಣಕಾಸು ಸಚಿವರಾಗಿ ಆಯ್ಕೆಯಾದ ನಂತರ ಪ್ರಪ್ರಥಮವಾಗಿ ರಾಜ್ಯದ ಆಯವ್ಯಯ ಮಂಡನೆ.

ಉಪವಾಸ ಪರ್ವ
*16-04-2006 : ನರ್ಮದಾ ಅಣೆಕಟ್ಟಿಗೆ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಮಾರು 51 ಗಂಟೆಗಳ ಕಾಲ ಉಪವಾಸ. ಇಂಥ ಕಾರಣಕ್ಕೆ ಮುಖ್ಯಮಂತ್ರಿಯೊಬ್ಬರು ಉಪವಾಸ ಕೈಗೊಂಡಿದ್ದು ಇದೇ ಮೊದಲು.
* 28-05-2006: ಮುಂಬೈನಲ್ಲಿ ವೀರ್ ಸಾವರ್ಕರ್ ಅವರ ಪ್ರತಿಮೆ ಅನಾವರಣ.
* 04-08-2006: ಯಂಗ್ ಪ್ರೆಸಿಡೆಂಟ್ ಆರ್ಗನೈಸೇಷನ್ ನ ಸದಸ್ಯರೊಂದಿಗೆ ಮುಂಬೈನ ಬಾಂಬೆ ಚಾಪ್ಟರ್ ನಲ್ಲಿ ಕಾರ್ಯಕ್ರಮ.

ತಂತ್ರಜ್ಞಾನದ ಜೊತೆ ಮೋದಿ
*03-09-2006 : ಅಮೆರಿಕದಲ್ಲಿ ನಡೆದ 2006ರ ವಿಶ್ವ ಗುಜರಾತಿ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ.
* 05-02-2006 : ಇಂಡಿಯಾ ಟುಡೇ-ಒಆರ್ ಜಿ ಮಾರ್ಗ್ ಸಮೀಕ್ಷೆಯಲ್ಲಿ 3ನೇ ಬಾರಿ ಅತ್ಯುತ್ತಮ ಮುಖ್ಯಮಂತ್ರಿಯೆಂಬ ಗೌರವ.
* 27-09-2006 : ಹರಿದ್ವಾರದಲ್ಲಿ ಭಾರತ್ ಮಾತಾ ದೇಗುಲ ಮತ್ತು ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಿಕೆ.

ದೀರ್ಘಕಾಲ ಸಿಎಂ ಗೌರವ
* 01-06-2007: ಗುಜರಾತಿನಲ್ಲಿ ದೀರ್ಘಕಾಲ ಅಂದರೆ ಸುಮಾರು 2,063 ದಿನಗಳ ಕಾಲ ಆಡಳಿತ ನಡೆಸಿದ ಮೊದಲ ಮುಖ್ಯಮಂತ್ರಿ.
*1960ರ ನಂತರ 47 ವರ್ಷಗಳಲ್ಲಿ ಗುಜರಾತ್ ಸುಮಾರು 14 ಮುಖ್ಯಮಂತ್ರಿಗಳನ್ನು ಕಂಡಿದೆ.
* ನರೇಂದ್ರ ಮೋದಿಗಿಂತ ಮೊದಲು ಹಿತೇಂದ್ರ ದೇಸಾಯಿ ಎಂಬವರು ಸುಮಾರು 2,062 ದಿನಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.

ಮತ್ತೆ ಮೋದಿ ಜಯಭೇರಿ
* 23-12-2007: ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ 180 ಸ್ಥಾನಗಳಲ್ಲಿ 117 ಸ್ಥಾನಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.
* 25-12-2007: ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕಾರ.
*14-04-2008 : ಮೋದಿ ಬರೆದ ಜ್ಯೋತಿಪುಂಜ್ ಪುಸ್ತಕ ಅನಾವರಣ.
*19-04-2008: ಅಸ್ಸೋಚಾಮ್ ನಿಂದ ದೆಹಲಿಯಲ್ಲಿ ಅಭಿನಂದನೆ.
* 19-04-2008: ದೆಹಲಿಯ ಗುಜರಾತಿ ಸಮಾಜ್ ನಲ್ಲಿ ಅಭಿನಂದನೆ.

ಕರ್ನಾಟಕದಲ್ಲೂ ಮೋದಿ ಹವಾ
*27-04-2008: ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ ಪ್ರಚಾರ.
*06-05-2008: ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ ಪ್ರಚಾರ.
*08-05-2008 : ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ ಪ್ರಚಾರ.
*11-05-2008 ಮತ್ತು 12-05-2008: ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ ಪ್ರಚಾರ.
* 31-08-2008: ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆದ ವಿಶ್ವ ಗುಜರಾತಿ ಕಾನ್ಫರೆನ್ಸ್ ನ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ.

ಮೋದಿ ಯೋಜನೆಗಳು
*ಕೃಷಿ ಮಹೋತ್ಸವ, ಚಿರಂಜೀವಿ ಯೋಜನೆ, ಮಾತೃ ವಂದನಾ, ಬೇಟಿ ಬಚಾವೋ (ಹೆಣ್ಣುಮಗುವನ್ನು ಉಳಿಸಿ) ಆಂದೋಲನ, ಜ್ಯೋತಿಗ್ರಾಮ ಯೋಜನೆ, ಕರ್ಮಯೋಗಿ ಅಭಿಯಾನ
* ದೃಷ್ಟಿಕೋನ, ಪರಿಕಲ್ಪನೆ ಮತ್ತು ನಿಗದಿತ ಅವಧಿಯಲ್ಲಿಯೇ ಪೂರೈಸುವ ನೈಪುಣ್ಯತೆ ಮೋದಿಯವರನ್ನು ಉತ್ತಮ ರಾಜನೀತಿಜ್ಞರನ್ನಾಗಿ ಮಾಡಿವೆ.

ಹಲವರ ಪಾಲಿಗೆ ಅಜಾತಶತ್ರು
ಗುರುವಾರ(ಡಿ.20) ಚುನಾವಣಾ ಫಲಿತಾಂಶದಲ್ಲಿ 182ರಲ್ಲಿ 115 ಸ್ಥಾನ ಗಳಿಸಿದ ಮೋದಿ ಮತ್ತೆ ಸಿಎಂ ಪಟ್ಟಕ್ಕೇರುತ್ತಿದ್ದಾರೆ.
ಈ ನಡುವೆ ಅಸ್ವಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕಿ ಮಾಧವ್ ಸಿನ್ಹಾ ಸೋಲಂಕಿ ಅವರನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ಮೋದಿ ವಿಚಾರಿಸಿದ್ದು ಗಮನಾರ್ಹ












Click it and Unblock the Notifications