ಸಂತಸದಲ್ಲಿ ಬಿಜೆಪಿ ಪಾಳಯ; ಕಾಂಗೈಗೆ ಇಂದೇ ಪ್ರಳಯ

ಗುಜರಾತ್ (182):
* ಬಿಜೆಪಿ: ಗೆಲುವು 116 (-1)
* ಕಾಂಗ್ರೆಸ್: ಗೆಲುವು 60 (-2)
ಹಿಮಾಚಲ (68):
* ಕಾಂಗ್ರೆಸ್: ಗೆಲುವು 36
* ಬಿಜೆಪಿ: ಗೆಲುವು 26
* ಮಣಿನಗರದಲ್ಲಿ ಮೋದಿಗೆ ಭರ್ಜರಿ ಜಯ. ಶ್ವೇತಾ ಭಟ್ ಸೋಲು.
* ಅಮಿತ್ ಶಾಗೆ ಭರ್ಜರಿ ಗೆಲುವು.
* 22 ವರ್ಷದಿಂದ ಅಧಿಕಾರದಿಂದ ದೂರವುಳಿದಿರುವ ಕಾಂಗ್ರೆಸ್ಸಿಗೆ ಮತ್ತೆ ಮುಖಭಂಗ.
* ಗುಜರಾತಿನಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ; ಆದರೆ ಕಳೆದ ಬಾರಿ ಗೆದ್ದಿದ್ದ 117 ಸ್ಥಾನಗಳ ಪೈಕಿ 1ನ್ನು ಕಳೆದುಕೊಂಡಿದೆ.
2002 ಚುನಾವಣೆಯಲ್ಲಿ ಮೋದಿ 126 ಸ್ಥಾನ ಗಳಿಸಿದ್ದರು.
* ಗುಜರಾತಿನಲ್ಲಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನ ಗಳಿಸುವ ತನ್ನ ಗುರಿಯತ್ತ ಮುನ್ನಡೆಯುತ್ತಿದೆ. ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಯಶಸ್ಸು ಗಳಿಸುತ್ತಿದೆ. ಆದರೆ ಭಾರಿ ಪರಿವರ್ತನೆ ತರುವುದಾಗಿ ಕಣಕ್ಕಿಳಿದಿದ್ದ ಕೇಶುಭಾಯಿ ಪಟೇಲರ ಗುಜರಾತ್ ಪರಿವರ್ತನಾ ಪಾರ್ಟಿ ಯಾವುದೇ ಪರಿಣಾಮ ಬೀರಿಲ್ಲ.
* ಕಾಂಗ್ರೆಸ್ ಗುಜರಾತ್ ಘಟಕದ ಅಧ್ಯಕ್ಷ ಅರ್ಜುನ್ ಮೋದ್ವಾಡಿಯಾ ಹಿನ್ನಡೆ ಅನುಭವಿಸಿದ್ದಾರೆ.
* ಹಿಮಾಚಲದಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದ್ದು, ಸರಕಾರ ರಚಿಸುವ ಸಾಧ್ಯತೆ ನಿಚ್ಚಳವಾಗಿದೆ. ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ.












Click it and Unblock the Notifications