ಸ್ಟೇಟ್ ಬ್ಯಾಂಕಿನಲ್ಲಿ ಸಾವಿರಾರು ಉದ್ಯೋಗವಕಾಶ

ಎಸ್ ಬಿಐ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 9,500 ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಸ್ ಬಿಐ ನೇಮಕಾತಿ ಪ್ರಕಿಯೆ ಆರಂಭಿಸಿದ್ದು, ಮೊದಲಿಗೆ ಎಸ್ ಬಿಎಚ್ ನಲ್ಲಿ ಪ್ರೊಬೆಷನರಿ ಅಧಿಕಾರಿಗಳನ್ನು ತೆಗೆದುಕೊಳ್ಳಲಿದೆ ಎಂದು ಎಸ್ ಬಿಎಚ್ ನ ವ್ಯವಸ್ಥಾಪಕ ನಿರ್ದೇಶಕ ಎಂ ಭಗವಂತ ರಾವ್ ಅವರು ದಿ ಹಿಂದೂ ಬಿಸಿನೆಸ್ ಲೈನ್ ಗೆ ಹೇಳಿದ್ದಾರೆ.
ಇತ್ತೀಚೆಗೆ ಎಸ್ ಬಿಎಚ್ ನ ಕ್ಲರ್ಕ್ ಹುದ್ದೆಗಾಗಿ 2,200 ಮಂದಿ ಪರೀಕ್ಷೆ ಬರೆದಿದ್ದಾರೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವ್ವಳ ಲಾಭ ಶೇ 8 ರಷ್ಟು ಇಳಿಕೆಯಾಗಿ 213 ಕೋಟಿ ರು ಮಾತ್ರ ಗಳಿಕೆಯಾಗಿತ್ತು. ನಿರ್ವಹಣಾ ವೆಚ್ಚ ಕಡಿತಗೊಳಿಸಿ ಲಾಭದತ್ತ ಸಂಸ್ಥೆಯನ್ನು ಮುನ್ನೆಡಸಲಾಗುತ್ತದೆ ಎಂದು ಎಚ್ ಬಿಎಚ್ ಎಂಡಿ ಭಗವಂತರಾವ್ ಹೇಳಿದ್ದಾರೆ.
ರೀಟೇಲ್ ಬ್ಯಾಂಕಿಂಗ್ ಪೈಪೋಟಿ ಹಾಗೂ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚಿನ ನೇಮಕಾತಿ ಅಗತ್ಯವಿದೆ ಎಂದು ಎಸ್ ಬಿಐ ಚೇರ್ ಮನ್ ಪ್ರತೀಪ್ ಚೌಧರಿ ಹೇಳಿದ್ದರು.
ಪ್ರಸಕ್ತ ಆರ್ಥಿಕ ವರ್ಷ 2012-13ರಲ್ಲಿ ಸುಮಾರು 63,200ಕ್ಕೂ ಅಧಿಕ ಹೊಸ ನೇಮಕಾತಿ ನಡೆಸಲಾಗುತ್ತದೆ ಎಂದು ಚಿದಂಬರಂ ಭರವಸೆ ನೀಡಿದ್ದರು.
ಮಾರ್ಚ್ 2012ರ ಕೊನೆಗೆ ಒಟ್ಟಾರೆ ಸಾರ್ವಜನಿಕ ವಲಯದ ಬ್ಯಾಂಕ್ (ರಾಷ್ಟ್ರೀಕೃತ ಬ್ಯಾಂಕ್, ಎಸ್ ಬಿಐ ಹಾಗೂ ಜೊತೆಗಿನ ಬ್ಯಾಂಕ್ ಗಳು) ಗಳ ಉದ್ಯೋಗಸ್ಥರ ಸಂಖ್ಯೆ 8,01,509 ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದರಲ್ಲೇ ಸುಮಾರು 1,200 ಅಧಿಕಾರಿಗಳು, 20,000 ಕ್ಲರ್ಕ್ ಗಳು ಈ ವರ್ಷ ನೇಮಕವಾಗಲಿದ್ದಾರೆ.
ಸೆಪ್ಟೆಂಬರ್ ಕೊನೆಗೆ ಎಸ್ ಬಿಐ ಹಾಗೂ ಜೊತೆಗಿನ ಐದು ಬ್ಯಾಂಕ್ ಗಳ ಖಾಲಿ ಹುದ್ದೆಗಳ ಸಂಖ್ಯೆ 28,979 ನಷ್ಟಿತ್ತು. ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ.
ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ.
ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.
2009-10 ಆರ್ಥಿಕ ವರ್ಷದಲ್ಲಿ 58,900 ನೇಮಕಾತಿ, 2010-11ರಲ್ಲಿ 57,758 ನೇಮಕಾತಿ ಹಾಗೂ 2011-12 ರಲ್ಲಿ 55,632 ನೇಮಕಾತಿ ಮಾಡಿಕೊಳ್ಳಲಾಗಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ ಹೆಚ್ಚಾಗಲಿದೆ.












Click it and Unblock the Notifications